Saturday November 11 2017

Follow on us:

Contact Us

ತನ್ನ ಪಿತ್ತಕೋಶವನ್ನು ದಾನಮಾಡಿ ತಂದೆಗೆ ಮರುಜನ್ಮ ನೀಡಿದ ಪುತ್ರಿ: ವ್ಯಾಪಕ ಪ್ರಶಂಸೆ

ನ್ಯೂಸ್ ಕನ್ನಡ (11.11.2017):ನವದೆಹಲಿ ದೇಶದ ಮೂಲೆಮೂಲೆಗಳಲ್ಲೂ ನಡೆಯುವ ಅನಾಚಾರ, ಅಮಾನವೀಯ, ಕ್ರೂರ ಕೃತ್ಯಗಳ ಕುರಿತಾದಂತೆ ದಿನವೂ ಮಾಧ್ಯಮಗಳಲ್ಲಿ ನಾವು ಕಾಣುತ್ತೇವೆ. ಆದರೆ ತ್ಯಾಗ ಮತ್ತು ಉತ್ತಮ ಕಾರ್ಯಗಳ ಕುರಿತಾದಂತೆ ವರದಿಯಾಗುವುದು ನಿಜಕ್ಕೂ ಕಡಿಮೆ. ಇದೀಗ ಫೇಸ್ ಬುಕ್ ನಲ್ಲಿ ವೈದ್ಯರೋರ್ವರು ಹಾಕಿದ ಪೋಸ್ಟ್ ಒಂದು ವೈರಲ್ ಆಗಿದ್ದು, ಪೂಜಾ ಬಿರ್ಜಾನಿಯಾ ಎಂಬ ಯುವತಿಯ ತಂದೆಯು ಪಿತ್ತಕೋಶ ವೈಫಲ್ಯದಿಂದ ಬಳಲುತ್ತಿದ್ದು, ತನ್ನ ತಂದೆಗೆ ಮರುಜೀವ ನೀಡುವ ಉದ್ದೇಶದಿಂದ ಯುವತಿಯೇ ತನ್ನ ಪಿತ್ತಕೋಶ ದಾನ ಮಾಡಿದ ಅಪ್ರತಿಮ ಘಟನೆಯು ವರದಿಯಾಗಿದೆ.

ಪೂಜಾ ಬಿಜಾರ್ನಿಯಾ ತನ್ನ ತಂದೆಗೆ ತನ್ನ ಪಿತ್ತಕೋಶ ದಾನ ಮಾಡಿ ಅವರನ್ನು ಬದುಕಿಸಿ ಕೊಂಡಿದ್ದು ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡ ಅಪ್ಪ-ಮಗಳ ಫೋಟೋವನ್ನು ಡಾ. ರಚಿತ್ ಭೂಷಣ್ ಶ್ರೀವಾಸ್ತವ ಹಾಕಿ ಅದರ ಕೆಳಗೆ ಮನಮುಟ್ಟುವ ಅಡಿಬರಹ ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಪಿತ್ತಕೋಶ ದಾನ ಮಾಡಿ ತಂದೆಯನ್ನು ಉಳಿಸಿಕೊಂಡ ಈ ಯುವತಿಯು ಹೆಣ್ಣೆಂದರೆ ಅಸಡ್ಡೆ ತೋರುವ ಅದೆಷ್ಟೋ ಹೆತ್ತವರಿಗೆ, ಹೆಣ್ಣು ಏನು ತಾನೇ ಮಾಡಿಯಾಳು ಎಂದು ಪ್ರಶ್ನಿಸುವ ವ್ಯಕ್ತಿಗಳಿಗೆ ಉತ್ತರ ನೀಡಿದ್ದಾಳೆ. ಈಕೆ ವೈಯಕ್ತಿಕವಾಗಿ ಪರಿಚಯವಿಲ್ಲದಿದ್ದರೂ ಈಕೆಗೆ ನಾನು ಅಭಿನಂದನೆ ಅರ್ಪಿಸುತ್ತೇನೆ. ದೇವರು ಆಕೆಗೆ ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಾಲಿವುಡ್ ನಟ ಶಾರೂಖ್ ಖಾನ್ ಗೆ ಧಮ್ಕಿ ಹಾಕಿದ ಬಿಜೆಪಿ ಎಂಎಲ್’ಸಿ!

ಮುಂದಿನ ಸುದ್ದಿ »

ಜೆಡಿಎಸ್ ಯಾತ್ರೆಯ ವೇಳೆ ಕಳ್ಳತನಕ್ಕೆ ಯತ್ನ: ಸಾರ್ವಜನಿಕರಿಂದ ಧರ್ಮದೇಟು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×