Wednesday December 6 2017

Follow on us:

Contact Us

ಪತ್ನಿಯ ಮೃತದೇಹವನ್ನು ಹೊತ್ತುಕೊಂಡು ಹೋಗಿದ್ದ ಈ ವ್ಯಕ್ತಿ ಈಗ ಹೇಗಿದ್ದಾರೆ ಗೊತ್ತೇ?

ನ್ಯೂಸ್ ಕನ್ನಡ ವರದಿ-(06.12.17): ನಿಮಗೆ ನೆನಪಿರಬಹುದು. ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಪತ್ನಿಯ ಮೃತದೇಹವನ್ನು ಸಾಗಿಸಲು ಹಣವಿಲ್ಲದೇ ಬಟ್ಟೆಯೊಂದರಲ್ಲಿ ಮೃತದೇಹವನ್ನು ಸುತ್ತಿ, ತನ್ನ ಮಗಳೊಂದಿಗೆ ಹಲವು ಕಿಲೋಮೀಟರ್ ಕ್ರಮಿಸಿದ ಸುದ್ದಿಯೊಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಾಧ್ಯಗಳಲ್ಲೂ ಸುದ್ದಿಯಾಗಿತ್ತು. ದೇಶವನ್ನೇ ತಲ್ಲಣಗೊಳಿಸಿದ ಈ ಸುದ್ದಿಯ ಬಳಿಕ ದನಾ ಮಾಂಜಿ ಎನ್ನುವ ಈ ವ್ಯಕ್ತಿಗೆ ಹಲವರು ಸಹಾಯ ಹಸ್ತ ನೀಡಿದರು. ಬಹರೈನ್ ದೇಶದ ಪ್ರಧಾನಮಂತ್ರಿ ಕೂಡಾ ದನಾ ಮಾಂಜಿಗೆ ಸಹಾಯಹಸ್ತವನ್ನು ಚಾಚಿದ್ದರು.

ಈ ಘಟನೆಯ ಬಳಿಕ ಮಾಂಜಿಯ ಜೀವನವು ಸಂಪೂರ್ಣವಾಗಿ ಬದಲಾಗಿದೆ. ಬಹರೈನ್ ನ ಪ್ರಧಾನಮಂತ್ರಿ ರಾಜಕುಮಾರ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ 9ಲಕ್ಷ ರೂಪಾಯಿಯನ್ನು ನೀಡಿದ್ದರು. ಬ್ಯಾಂಕ್ ಅಕೌಂಟ್ ಕೂಡಾ ಇಲ್ಲದ ಮಾಂಜಿಯ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಗಳನ್ನಿಡಲಾಯಿತು. ಹಲವು ಸಂಘ ಸಂಸ್ಥೆಗಳು ಧನಸಹಾಯ ಮಾಡಿತು. ಈಗ ದನಾ ಮಾಂಜಿಯ ಬಡತನವು ಸಂಪೂರ್ಣವಾಗಿ ದೂರವಾಗಿದೆ. 65,000ರೂ. ಬೆಲೆಯ ಬೈಕ್ ಕೊಂಡ ಬಳಿಕ ಮರುಮದುವೆಯಾದ ಮಾಂಜಿ ಈಗ ಹೊಸ ಮನೆಯನ್ನೂ ಕಟ್ಟಿಸಿದ್ದಾರೆ. ತನ್ನ ಮಗಳು ಮತ್ತು ಪತ್ನಿಯೊಂದಿಗೆ ದನಾ ಮಾಂಜಿ ಈಗ ಸುಖವಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವೀಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೈದ ಕ್ಯಾಬ್ ಚಾಲಕ!

ಮುಂದಿನ ಸುದ್ದಿ »

ಯೋಗಿ ಆದಿತ್ಯನಾಥ್ ರ ಫೋಟೋವನ್ನೇ ಮದುವೆಯಾದ ಯುವತಿ!: ಕಾರಣವೇನು ಗೊತ್ತೇ?

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×