Tuesday October 3 2017

Follow on us:

Contact Us

ಅನುಪಮಾ ಶೆಣೈ ಹೊಸ ರಾಜಕೀಯ ಪಕ್ಷ ಕಟ್ಟುವ ಸಿದ್ಧತೆ

ನ್ಯೂಸ್ ಕನ್ನಡ ವರದಿ-(03.10.17):  ಪಡುಬಿದ್ರಿ: ಡಿವೈಎಸ್‌ಪಿ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯದೆಲ್ಲೆಡೆ ಸುದ್ದಿಯಾಗಿದ್ದ  ಕೂಡ್ಲಿಗಿ ಉಪ ವಿಭಾಗದ ಮಾಜಿ ಡಿವೈಎಸ್ಪಿ, ಉಡುಪಿ ಉಚ್ಚಿಲ ಮೂಲದ ಅನುಪಮಾ ಶೆಣೈ ಇದೀಗ ರಾಜಕೀಯ ಪ್ರವೇಶದ ಹೆಜ್ಜೆ ಸದ್ದಿಗೆ ಮತ್ತೆ ಸುದ್ದಿಯಾಗಿದ್ದಾರೆ.ಈ ಬಗ್ಗೆ ಉಚ್ಚಿಲದಲ್ಲಿರುವ ತನ್ನ ನಿವಾಸದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಹಾಗು ಸರಕಾರಿ ನೌಕರರನ್ನು ಜನರ ಕೊಂಡಿಯಾಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಹೊಸ ಪಕ್ಷ ಸ್ಥಾಪಿಸುವುದಕ್ಕೆ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ, ಅಸ್ಪೃಶ್ಯತೆ ತೊಡೆದು ಹಾಕುವಿಕೆ, ಮಹಿಳಾ ಪರ,ಭೃಷ್ಟಾಚಾರ ವಿರುದ್ಧ, ಮತ್ತು ಪರಿಸರ ಸಂರಕ್ಷಣೆ ಉದ್ದೇಶವನ್ನಿಟ್ಟುಕೊಂಡು ನಾನು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವ ತೀರ್ಮಾನ ಮಾಡಿದ್ದೇನೆ.ಪ್ರಜಾಪ್ರಭುತ್ವವನ್ನು ಉಳಿಸುವುದು ನಮ್ಮ ಉದ್ದೇಶ , ಈಗಿನ ಸರಕಾರ ಭೃಷ್ಟರು ಮತ್ತು ದುಷ್ಟರಾಗಿದ್ದಾರೆ. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಯಾವ ಹಂತಕ್ಕೂ ಹೋಗಲು ಸಿದ್ದರಿದ್ದಾರೆ. ಸರಕಾರಿ ಸಂಬಳದೊಂದಿಗೆ ಗಿಂಬಲವನ್ನೂ ಪಡೆದು ಕಟಾಚಾರಕ್ಕೆ ಕೆಲಸ ನಿರ್ವಹಿಸುವ ಸರಕಾರಿ ಅಧಿಕಾರಿಗಳಿದ್ದಾರೆ. ಅಂತವರಿಗೆ ತಿದ್ದಿಕೊಳ್ಳುವ ಅವಕಾಶ ನೀಡಿಲಿದ್ದೇನೆ. ಸರಿಹೊಂದದಿದ್ದಲ್ಲಿ ಶಿಕ್ಷಿಸಲು ಗೊತ್ತಿದೆ. ನಾನು ಸಮಾಜ ಸೇವೆ ಮಾಡುತ್ತಾ ಬಂದು ಪೊಲೀಸ್ ಕರ್ತವ್ಯ ನಿರ್ವಹಿಸಿದವಳು ನನಗೆ ಪ್ರೀತಿಯಿಂದ ಮಾತಡಲು ಗೊತ್ತು ಶಿಕ್ಷೆ ನೀಡಲು ಗೊತ್ತಿದೆ ಎಂದಿದ್ದಾರೆ.

ಅನುಪಮಾ ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ಹಿನ್ನೆಲೆ : ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಟಿ.ಪಿ. ಪರಮೇಶ್ವರ್‌ ಅವರ ದೂರವಾಣಿ ಕರೆ ಸ್ವೀಕರಿಸಿರಲಿಲ್ಲ ಎಂಬ ಕಾರಣ ನೀಡಿ ಶೆಣೈ ಅವರನ್ನು ವಿಜಯಪುರ ಜಿಲ್ಲೆ ಇಂಡಿ ತಾಲೂಕಿಗೆ ವರ್ಗಾವಣೆ ಮಾಡಿಸಲಾಗಿತ್ತು. ಆದರೆ ದಕ್ಷ ಅಧಿಕಾರಿಯಾಗಿದ್ದ ಅನುಪಮಾ ವರ್ಗಾವಣೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪರಿಣಾಮ ಮತ್ತೆ ಅವರನ್ನು ಕೂಡ್ಲಿಗಿಗೆ ಡಿವೈಎಸ್‌ಪಿಯಾಗಿ ವರ್ಗಾಯಿಸಲಾಗಿತ್ತು. ಅನಂತರವೂ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದ ಅನುಪಮಾ ತಾಲೂಕಿನಲ್ಲಿ ನಡೆಯುತ್ತಿದ್ದ ಲಿಕ್ಕರ್‌ ಲಾಬಿ ವಿರುದ್ಧ ಕಾನೂನು ಕ್ರಮ ಜರಗಿಸುತ್ತಿದ್ದರು. ಇದರ ಪರಿಣಾಮ ಅನುಪಮಾ ಅವರ ವಿರುದ್ಧ ಸ್ವತಃ ಸಚಿವ ಪರಮೇಶ್ವರ್‌ ಅವರೇ ಬಹಿರಂಗವಾಗಿ ತಿರುಗಿಬಿದ್ದಿದ್ದರು. ಅನುಪಮಾ ಕೂಡ ಸಚಿವರ ವಿರುದ್ಧವೇ “ಸ್ಟೇಟಸ್‌ ವಾರ್‌’ ಶುರು ಮಾಡಿದ್ದರು. ಆದರೆ ತನ್ನ ಹೋರಾಟಕ್ಕೆ ಸರಕಾರದ ಕಡೆಯಿಂದ ಸೂಕ್ತ ಬೆಂಬಲ ದೊರೆಯದಿದ್ದಾಗ ವ್ಯವಸ್ಥೆ ಬಗ್ಗೆಯೇ ಬೇಸತ್ತು 2016 ಜೂನ್‌ನ‌ಲ್ಲಿ ರಾಜೀನಾಮೆ ಸಲ್ಲಿಸಿದ್ದರು.

ಪಕ್ಷ ಸ್ಥಾಪನೆ ಪ್ರಥಮ ಸಿದ್ದತೆ : ಈಗಾಗಲೇ ಪಕ್ಷ ಸ್ಥಾಪನೆ ಬಗ್ಗೆ ಸಮಾನ ಮನಸ್ಕರ ಜತೆ ಸಮಾಲೋಚನ ಸಭೆಯನ್ನೂ ನಡೆಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳ ಸಮಾನ ಮನಸ್ಕ ಪ್ರಮುಖರನ್ನು ನೇಮಿಸಿ ಸೂಕ್ತ ಸಲಹೆ ಅಭಿಪ್ರಾಯ ಪಡೆದು  ಅ. 15ರಂದು ಪಕ್ಷ ರಚನೆ ಬಗ್ಗೆ ಎರಡನೇ ಸಭೆ ನಡೆಯಲಿದೆ.ನವೆಂಬರ್‌ ಮೊದಲ ವಾರದಲ್ಲಿ ಪಕ್ಷದ ಬಗ್ಗೆ ಅಧಿಕೃತ ಘೋಷಣೆ ಸಂಭವವಿದೆ. ಪಕ್ಷ ಹುಟ್ಟು ಹಾಕಲು ಎಲ್ಲ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ. ಹೊಸದೊಂದು ರಾಜಕೀಯ ಪಕ್ಷ ಸ್ಥಾಪನೆ ಮಾಡುವುದು ಸುಲಭವಲ್ಲದಿದ್ದರೂ ಹಲವು ಸವಾಲುಗಳನ್ನು ಎದುರಿಸಲು ಸಿದ್ಧವಾಗಿದ್ದೇನೆ.ಈಗ ಪಕ್ಷ ಸ್ಥಾಪಿಸುವ ದೃಢ ಸಂಕಲ್ಪ ಮಾಡಿದ್ದೇನೆ. ಈ ರಾಜಕೀಯ ವ್ಯವಸ್ಥೆಯಲ್ಲಿ  ಗೆದ್ದು, ನಮ್ಮಲ್ಲಿನ ಅವ್ಯವಸ್ಥೆ  ಸರಿಪಡಿಸಬಹುದು ಎಂಬ ವಿಶ್ವಾಸವಿದೆ. ಜನರ ಸಲಹೆಗಳನ್ನು ಪಡೆದು, ಅವರು ನೀಡುವ ಮಾರ್ಗದರ್ಶನದಂತೆ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು. ಪಕ್ಷ ಸ್ಥಾಪನೆಗೆ ಅನುಮತಿ ದೊರೆತರೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿಗದಿತ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ಆರ್ ಎಸ್ ಎಸ್ ಬೆಂಬಲಿಸುವ ಸಾಧ್ಯತೆ ?: ಆಮ್ ಆದ್ಮಿ , ಪ್ರಜಾಕೀಯ ಪಕ್ಷದ ಆಪರ್ ಬಂದಿತ್ತು. ಅದರಂತೆ ಇತರ ಪಕ್ಷಗಳು ನನ್ನ ಇಮೇಜನ್ನು ಬಳಸಿಕೊಂಡು ರಾಜಕೀಯ ಬೇಳೆಬೇಯಿಸುವುದು ನನಗಿಷ್ಟವಿಲ್ಲ. ನಮ್ಮ ಪಕ್ಷಕ್ಕೆ ಅದರದೇ ಆದ ಗುರಿಇದೆ. ಇದುವರೆಗೆ ರಾಜಕಾರಣಿಗಳು ಅಧಿಕಾರ ಉಪಯೋಗಿಸಿ ಪೊಲೀಸರ ಮೇಲೆ ರಾಜಕಾರಣ ಮಾಡುತ್ತಿದ್ದರು.ಇನ್ನು ರಾಜಕಾರಣಿಗಳ ಮೇಲೆ ನಾವು ಪೊಲಿಸಿಂಗ್ ಮಾಡಲಿದ್ದೇವೆ. ಮುಳುಗುವ ದೋಣಿ ಮುಂದೆ ಹಡಗು ಬಂದಾಗ ಕಾಂಗ್ರೆಸ್ ,ಬಿಜೆಪಿ ,ಜೆಡಿಎಸ್, ಪಕ್ಷದವರು ಈ ಹಡಗನ್ನು ಏರಲಿದ್ದಾರೆ. ನನನ್ನು ಎಲ್ಲರೂ ಆರ್ ಎಸ್ ಎಸ್ ಬೆಂಬಲಿತೆ ಎಂದೇ ಗುರುತಿಸುತ್ತಿದ್ದಾರೆ ಅದು ನಿಜ. ಆದರೆ ಇವತ್ತು ಆರ್ ಎಸ್ ಎಸ್ ನ್ನು ಮೀರಿ ಬೆಳೆದವರೂ ಇದ್ದಾರೆ. ಆಗ ಅದು ಮೂಳೆ ಗುಂಪಾಗಿದೆ. ಹೀಗಿರುವಾಗ  ನಾಳೆ ನನ್ನನ್ನು ಆರ್ ಎಸ್ ಎಸ್ ಬೆಂಬಲಿಸುವ ಸಾಧ್ಯತೆ ಯಾಕಿಲ್ಲಾ ಎಂದು ಅವರು ಪ್ರಶ್ನಿಸಿದ್ದಾರೆ.

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪಾಕಿಸ್ತಾನದ ವಿರುದ್ಧ ಶ್ರೀಲಂಕಾ ತಂಡಕ್ಕೆ ರೋಚಕ ಜಯ

ಮುಂದಿನ ಸುದ್ದಿ »

ಮುರ್ಡೇಶ್ವರ: ಸಮುದ್ರ ಪಾಲಾದ ಮಕ್ಕಳ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×