Tuesday December 5 2017

Follow on us:

Contact Us

ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿ ಕೋಪಗೊಂಡು ಮಾಡಿದ್ದೇನು ಗೊತ್ತೇ?!

ನ್ಯೂಸ್ ಕನ್ನಡ ವರದಿ: ಪತಿ ಪತ್ನಿಯ ಸಂಬಂಧ ಪರಸ್ಪರ ಪ್ರೀತಿ, ಜವಾಬ್ದಾರಿ, ಸುರಕ್ಷೆಯ ನೀಡುವ ಪವಿತ್ರ ಬಂಧನವಾಗಿರುತ್ತದೆ. ಈ ಪ್ರೀತಿಯ ಬಂಧನ ಮತ್ತಷ್ಟು ಧೃಡವಾದಾಗ ಪ್ರೀತಿಯು ಕೆಲವೊಮ್ಮೆ ಅತಿರೇಕದ ರೂಪವೂ ಪಡೆಯುತ್ತದೆ. ಮಧುರೈನಲ್ಲಿ ತನ್ನನ್ನು ನಿರ್ಲಕ್ಷಿಸಿ ಬೇರೆ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಪತಿಗೆ ಪಾಠ ಕಲಿಸಲು ಹೋಗಿ ಪತ್ನಿ ಜೈಲುಪಾಲಾದ ಘಟನೆ ನಡೆದಿದೆ.

ಆಟೋರಿಕ್ಷಾ ಚಾಲಕನಾಗಿರುವ
37 ವರ್ಷ ವಯಸ್ಸಿನ ಎಂ.ಪರಮೇಶ್ವರನ್ ವಿರಾಟ್ಟಿಪಟ್ಟು ಪ್ರದೇಶದಲ್ಲಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ. ಅವನ ಪತ್ನಿ ಶಶಿಕಲಾಗೆ ಇದರ ಬಗ್ಗೆ ಮಾಹಿತಿ ದೊರೆತು ಪ್ರತಿನಿತ್ಯ ಜಗಳವಾಡಲು ಆರಂಭಿಸಿದ್ದಳು. ಪತ್ನಿ ದಿನನಿತ್ಯ ಜಗಳವಾಡುವುದು ಕಂಡ ಪತಿ ಮನೆಗೆ ಬರುವುದನ್ನೇ ನಿಲ್ಲಿಸಿದ್ದಾನೆ. ಇದರಿಂದ ಪತ್ನಿ ಶಶಿಕಲಾ ಪತಿ ಪರಮೇಶ್ವರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಪರಮೇಶ್ವರ್‌ಗೆ ವಾರ್ನಿಂಗ್ ನೀಡಿ ಮನೆಗೆ ಕಳುಹಿಸಿದ್ದಾರೆ. ಆದರೆ,ಪರಮೇಶ್ವರ್ ಕ್ಯಾರೆ ಎನ್ನದೆ ಅನೈತಿಕ ಸಂಬಂಧ ಮುಂದುವರಿಸಿದ್ದಾನೆ ಎನ್ನಲಾಗಿದೆ.

ಇದರಿಂದ ಬೇಸತ್ತ ಪತ್ನಿ ಶಶಿಕಲಾ ಉಪಾಯವೊಂದನ್ನು ಮಾಡಿ ಒಂದು ದಿನ ಪತಿಗೆ ಕರೆ ಮಾಡಿ ಇವತ್ತೊಂದು ರಾತ್ರಿ ನನ್ನೊಂದಿಗಿರಬಾರದಾ ಎಂದು ಪ್ರೀತಿಯಿಂದ ಮಾತನಾಡಿ ಆಹ್ವಾನ ನೀಡಿದ್ದಾಳೆ. ಪತ್ನಿಯ ಹಿತವಾದ ನುಡಿಗಳಿಗೆ ಮನಸೋತು ಮನೆಗೆ ಬಂದಿದ್ದಾನೆ. ಪತಿ ಮಲಗಿರುವುದು ಖಚಿತಪಡಿಸಿದ ನಂತರ ಆತನ ಗುಪ್ತಾಂಗದ ಮೇಲೆ ಕುದಿಯುವ ಎಣ್ಣೆ ಸುರಿದಿದ್ದಾಳೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಶಿಕಲಾ ಜೈಲುಪಾಲಾಗಿದ್ದಾಳೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಏಡ್ಸ್ ಮುಕ್ತ ಸಮಾಜ ನಮ್ಮೆಲ್ಲರ ಹೊಣೆಯಾಗಲಿ: ಸತ್ಯನಾರಾಯಣ ಪಡ್ತಿ

ಮುಂದಿನ ಸುದ್ದಿ »

ಕಾರುಗಳಿಗೆ ಬರೋಬ್ಬರಿ 40,000ರೂ.ವರೆಗೆ ಡಿಸ್ಕೌಂಟ್ ಘೋಷಿಸಿದ ಮಾರುತಿ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×