Monday March 28 2016

Follow on us:

Contact Us
yaksha1

ಬೆಂಗಳೂರು: ಕಲಾಭಿಮಾನಿಗಳನ್ನು ರಂಜಿಸಿದ ‘ ವೀರ ವೃಷಸೇನ ‘ ಯಕ್ಷಗಾನ ಪ್ರದರ್ಶನ

ನ್ಯೂಸ್ ಕನ್ನಡ ವರದಿ – ಬೆಂಗಳೂರು: ಕೆ. ಮೋಹನ್‍ ರ ಸಂಘಟನೆಯ ಯಕ್ಷದೇಗುಲದ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಬಗ್ಗೆ ಅಭಿರುಚಿ ಮೂಡಿಸುತ್ತಿದ್ದಾರೆ. ಕೇವಲ ಪುರಾಣ ಪ್ರಸಂಗ ಸೀಮಿತವಲ್ಲದೇ ಏಡ್ಸ್, ಸ್ವಚ್ಛ ಭಾರತ್ ಹೀಗೆ ಇತರ ಸಾಮಾಜಿಕ ವಿಚಾರದ ಬಗ್ಗೆಯೂ ಯಕ್ಷಗಾನದ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ. ಈ ಒಂದು ಸಂಘಟನೆ ಮೂಲಕ ಜನರಲ್ಲಿ ಕಲೆಯ ಅಭಿರುಚಿ ಮೂಡಿಸುತ್ತಿರುವುದು ಸ್ತುತ್ಯಾರ್ಹ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀಮತಿ ಮೈಥಿಲಿ ಹೇಳಿದ್ದಾರೆ. ಅವರು ಇತ್ತೀಚೆಗೆ ಬೆಂಗಳೂರಿನ ಜೆ.ಸಿ. ರಸ್ತೆಯ ನಯನ ಸಭಾಭವನದಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಿಂದ ಕೆ. ಮೋಹನ್‍ ನಿರ್ದೇಶನದ “ವೀರ ವೃಷಸೇನ” ಪ್ರಸಂಗದ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

IMG_0117

ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸರಾದ ಡಾ. ಆನಂದರಾಮ ಉಪಾಧ್ಯರು, ಯಕ್ಷಗಾನ ಕ್ಷೇತ್ರಕ್ಕೆ ಡಾ. ಶಿವರಾಮ ಕಾರಂತರ ಪ್ರವೇಶದಿಂದ ಮತ್ತಷ್ಟು ಪ್ರಚಲಿತವಾಯಿತು. ಹಳ್ಳಿಗರಿಗೆ ಸೀಮಿತವಾಗಿದ್ದ ಯಕ್ಷಗಾನ ಕಲೆ ಇಂದು ನಗರ ಪ್ರದೇಶ, ದೇಶ-ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ. 25-30 ವರ್ಷದ ಹಿಂದೆ ಕೆ. ಮೋಹನ್‍ ರ ಗದಾಯುದ್ಧದ ಕೌರವ ಅದ್ಭುತವಾಗಿತ್ತು. ಇವರು ನಿರ್ದೇಶಿಸಿದ ಇಳೆಯಣ್ಣನ ಕತೆ ಯಕ್ಷಗಾನ ಸಾವಿರಕ್ಕೂ ಮಿಕ್ಕಿ ಪ್ರದರ್ಶನ ಕಂಡಿದೆ. ಇಂದು ಹವ್ಯಾಸಿ ಕಲಾವಿದರು ಯಕ್ಷಗಾನದ ನಿರ್ಣಾಯಕರಾಗಿರುತ್ತಾರೆ. ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಾರೆ.

ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಮೋಹನರು ನಗರ ಪ್ರದೇಶಗಳಲ್ಲಿ ಸಂಘಟನೆ-ಕಲಿಕೆ-ಪ್ರದರ್ಶನಗಳಿಗೆ ಕಾರ್ಪೋರೇಟ್ ರೂಪ ಕೊಟ್ಟವರಾಗಿದ್ದಾರೆ. ಅಲ್ಲದೇ ಬಿ.ಬಿ. ಕಾರಂತ್ ನಿರ್ದೇಶನದ ಕೆಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ರಂಗಭೂಮಿಯ ಅನುಭವ, ಚಲನಚಿತ್ರ, ಕಿರುತೆರೆಯವರೊಂದಿಗಿನ ಒಡನಾಟದಿಂದ ಚಿಂತನಾತ್ಮಕ ವಿಷಯಗಳನ್ನೂ ಪಡೆದಿರುತ್ತಾರೆ. ಇಂದು ಇವರ ನಿರ್ದೇಶನದ ವೀರ ವೃಷಸೇನ ಯಕ್ಷಗಾನ ಯಶಸ್ವಿಯಾಗಲಿ ಎಂದು ಹಾರೈಸಿದರು.

yaksha2
ಯಕ್ಷಗಾನ ಪ್ರೋತ್ಸಾಹಕರು ಮತ್ತು ಪ್ರಸಂಗಕರ್ತರಾದ ಮಣೂರು ವಾಸುದೇವ ಮಯ್ಯರು ಮಾತನಾಡಿ, ಕಳೆದ 35 ವರ್ಷದಿಂದ ಕೆ. ಮೋಹನ್ ನಿರ್ದೇಶನದ ಯಕ್ಷದೇಗುಲ ತಂಡ ಹೀಗೆಯೇ ಸದಾ ಯಶಸ್ವಿಯಾಗಿ ನಡೆಯಲಿ ಹಾಗೆ ಇಂದಿನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕೆ. ಮೋಹನ್ ಸ್ವಾಗತಿಸಿ, ಉಪನ್ಯಾಸಕ ಕಲಾವಿದ ಸುಜಯೀಂದ್ರ ಹಂದೆ ಸೊಗಸಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ‘ವೀರ ವೃಷಸೇನ’ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಸುಜಯೀಂದ್ರ ಹಂದೆ ಮತ್ತು ಲಂಬೋದರ ಹೆಗಡೆ ಮದ್ದಲೆಯಲ್ಲಿ, ಗಣಪತಿ ಭಟ್ ಹಾಗೂ ಮಾಧವ ಮಣೂರು ಚಂಡೆ ವಾದನದಲ್ಲಿ ಕಟ್ಕೇರಿ ಮಂಜುನಾಥ ಭಟ್‍ ಸಹಕರಿಸಿದರು. ಮುಮ್ಮೇಳದಲ್ಲಿ ಕೌರವನಾಗಿ ಕೆ. ಮೋಹನ್‍ ರ ಮಗಳಾದ ಪ್ರಿಯಾಂಕ ಕೆ. ಮೋಹನ್ ಅರ್ಜುನನಾಗಿ, ಕೆ. ಮೋಹನ್‍ ರ ಇನ್ನೊಬ್ಬಳು ಮಗಳಾದ ಡಾ. ಪ್ರೀತಿ ಕೆ. ಮೋಹನ್, ವೃಷಸೇನನಾಗಿ ನವೀನ್ ಕೋಟ, ಸೋಮಪ್ರಭೆಯಾಗಿ ಮನೋಜ್ ಭಟ್, ಭೀಮನಾಗಿ ಶಶಾಂಕ ಕಾಶಿ ಮತ್ತು ಕೃಷ್ಣನಾಗಿ ಪ್ರದೀಪ್ ಮಧ್ಯಸ್ಥರು ನಿರ್ವಹಿಸಿದರು. ರಂಗದ ಹಿಂದೆ ಕೋಟ ಸುದರ್ಶನ ಉರಾಳ, ನರಸಿಂಹ ತುಂಗ, ಉದಯ ಬೋವಿ, ಪ್ರಕಾಶ್ ಉಳ್ಳೂರ, ಚಿಂತನ್, ಸುಷ್ಮಾ, ದೀಪಕ್ ಮತ್ತು ರಾಘವೇಂದ್ರ ಸಹಕರಿಸಿದರು.

nkslu

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಾರವಾರ: ನಗರಸಭೆಯ 2ನೇ ಅವಧಿ ಅಧ್ಯಕ್ಷ ಸ್ಥಾನಕ್ಕೆ ಗಣಪತಿ ನಾಯ್ಕ ಹೆಸರು ಅಂತಿಮ- ಸತೀಶ್ ಸೈಲ್

ಮುಂದಿನ ಸುದ್ದಿ »

ಕಾಸರಗೋಡು: ವ್ಯಕ್ತಿ ನಾಪತ್ತೆ ಪ್ರಕರಣ; ಕ್ರೈ೦ ಬ್ರಾಂಚ್ ಗೆ ಒಪ್ಪಿಸುವಂತೆ ಒತ್ತಾಯ

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×