Sunday November 8 2015

Follow on us:

Contact Us

ವಿಟ್ಲ: ಜಾತಿ ಧರ್ಮದಲ್ಲಿ ದ್ವೇಷ ಉಂಟು ಮಾಡಿ ಫಲವಿಲ್ಲ: ಸಚಿವ ರೈ

ವಿಟ್ಲ-ನ್ಯೂಸ್ ಕನ್ನಡ  ವರದಿ: ಜನರಲ್ಲಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ದ್ವೇಷ ಭಾವನೆ ಉಂಟು ಮಾಡಿದರೆ ಯಾರೂ ಮುಂದೆ ಬರಲು ಸಾಧ್ಯವಿಲ್ಲ. ಎಲ್ಲಾ ಜಾತಿಯವರು ಒಟ್ಟಾಗಿ ಕೆಲಸ ಮಾಡಿದಾಗ ಯಶಸ್ಸುಗಳಿಸಲು ಸಾಧ್ಯ. ಬಿಹಾರ ಚುನಾವಣೆ ಫಲಿತಾಂಶವೇ ಇದಕ್ಕೊಂದು ಉದಾಹರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಕನ್ಯಾನ ಗ್ರಾಮದ ಬೈರಿಕಟ್ಟೆ ಗೆಳೆಯರ ಬಳಗ ವತಿಯಿಂದ 60 ಸಾವಿರ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಬಸ್ ತಂಗುದಾಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೀತಿ ಹಾಗೂ ಶಾಂತಿಗೊಸ್ಕರ ನಾನು ಪ್ರಾಣ ಬಿಡಲು ಸಿದ್ಧನಿದ್ದೇನೆ. ಜಾತಿ-ಧರ್ಮದಲ್ಲಿ ಬೇಧ-ಭಾವ ಮಾಡಿದಾಗ ಯಾರೂ ಮುಂದೆ ಬರಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ಜನರ ಪ್ರೀತಿಗಳಿಸುತ್ತಾ ಮುಂದೆ ಸಾಗಿದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಬೈರಿಕಟ್ಟೆ ಗೆಳೆಯರ ಬಳಗದ ವತಿಯಿಂದ ನಿರ್ಮಾಣಗೊಂಡ ಬಸ್ ನಿಲ್ದಾಣ ಆಕರ್ಷಣೆ ಜತೆಗೆ ಜನರಿಗೆ ಸೌಕರ್ಯ ದೊರೆತಿದೆ. ಟೀಕೆ ಮಾಡಿದವರಿಗೆ ನಾನು ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರ ನೀಡಿದ್ದೇನೆ. ಬೈರಿಕಟ್ಟೆ ಎಂಬಲ್ಲಿಗೆ ಹೈಮಾಸ್ಕ್ ದೀಪ ನಿರ್ಮಿಸಲು ಬೇಡಿಕೆ ಬಂದಿದ್ದು, ಶೀಘ್ರವೇ ಅದು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ, ಉಪಾಧ್ಯಕ್ಷ ಕೆ.ಪಿ. ಅಬ್ದುಲ್ ರಹಿಮಾನ್, ಸದಸ್ಯ ಮೊಹಿದ್ದೀನ್ ಬಿ.ಬಿ, ಸದಾಶಿವ, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್‍ಅಲಿ, ಬೈರಿಕಟ್ಟೆ ಗೆಳೆಯರ ಬಳಗದ ಅಧ್ಯಕ್ಷ ರವೀಶ್, ಕಾರ್ಯದರ್ಶಿ ಚಂದ್ರಶೇಖರ ಕೆ, ಇಬ್ರಾಹಿಂ ಬಿ.ಕೆ, ಬೆನಾಡ್ ಡಿಸೋಜ, ಜಿಯಾದ್ ಬಿ.ಎಂ., ಯಶೋಧರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

1

3

nkmavgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಉಡುಪಿ: ಜಿಲ್ಲಾಮಟ್ಟದ ಶೆಟ್ಲ್ ಬ್ಯಾಡ್‍ಮಿಂಟನ್ ಸ್ಪರ್ಧೆ ಉದ್ಘಾಟನೆ

ಮುಂದಿನ ಸುದ್ದಿ »

ಉಡುಪಿ: ಜವಾಹರಲಾಲ್ ನೆಹರೂ ಅಪೂರ್ವ ಛಾಯಾಚಿತ್ರ ಪ್ರದರ್ಶನ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ರಾಜಕೀಯ ಪ್ರವೇಶದ ಕುರಿತು ನಟ ಯಶ್ ಹೇಳಿದ್ದೇನು ಗೊತ್ತೇ?

    October 9, 2017

    ನ್ಯೂಸ್ ಕನ್ನಡ ವರದಿ-(09.10.17): ಸದ್ಯ ಚಿತ್ರರಂಗದೊಂದಿಗೇ ನಟರು ರಾಜಕೀಯದತ್ತ ಒಲವು ತೋರಿಸುತ್ತಿದ್ದು, ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಉಪೇಂದ್ರ ಪ್ರಜಾಕೀಯ ಎಂಬ ಪಕ್ಷವನ್ನೇ ಕಟ್ಟಿದ್ದರು. ಇನ್ನು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಕಮಲ್ ಹಾಸನ್ ಕೂಡಾ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×