Friday June 16 2017

Follow on us:

Contact Us

ಬೆಳಪು ಗ್ರಾಮಕ್ಕೆ ಅದಾನಿ ಯುಪಿಸಿಎಲ್ ಸಂಸ್ಥೆಯಿಂದ ರೂ 1 ಕೋಟಿ ವೆಚ್ಚದ ಕಾಮಗಾರಿಗಳ ಅನುಮೋದನೆ

ನ್ಯೂಸ್ ಕನ್ನಡ ವರದಿ-(16.06.17)ಕಾಪು : ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಯುಪಿಸಿಎಲ್ ಸಂಸ್ಥೆಯು  ಬೆಳಪು ಗ್ರಾಮಕ್ಕೆ 2017-18 ವಾರ್ಷಿಕ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ರೂ. 1 ಕೋಟಿ ಸಿಎಸ್‍ಆರ್ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡಿತು. ಪಂಚಾಯತ್ ವಠಾರದಲ್ಲಿ ಸರಳವಾಗಿ ನಡೆದ ಸಮಾರಂಭದಲ್ಲಿ ಯುಪಿಸಿಎಲ್ ಕಂಪನಿಯ ಜಂಟಿ ಅಧ್ಯಕ್ಷರಾದ ಕಿಶೋರ್ ಆಳ್ವ 2017-18ನೇ ವಾರ್ಷಿಕ ಸಾಲಿನ ಬೆಳಪು ಗ್ರಾಮದ ವಿವಿಧ ಸ್ಥಳಗಳ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ಮೇರೆಗೆ ರೂ. 1 ಕೋಟಿ ವೆಚ್ಚದ ಯುಪಿಸಿಎಲ್‍ನ ಅನುಮೋದನೆ ಪತ್ರವನ್ನು ಡಾ|| ದೇವಿಪ್ರಸಾದ್ ಶೆಟ್ಟಿಯವರಿಗೆ ನೀಡಿದರು.

ಯುಪಿಸಿಎಲ್ ಗ್ರಾಮಸ್ಥರ ವಿಶ್ವಾಸ ಗೆಲ್ಲುವಲ್ಲಿ ಯಶಸ್ಸು ಕಂಡಿದೆ: ಡಾ.ದೇವಿಪ್ರಸಾದ್ ಶೆಟ್ಟಿ

ಈ ಸಂದರ್ಭದಲ್ಲಿ ಮಾಡಿದ ದೇವಿಪ್ರಸಾದ್ ಶೆಟ್ಟಿ , ಕಿಶೋರ್ ಆಳ್ವರವರ ಮುತುವರ್ಜಿಯಿಂದ ಅದಾನಿ ಯುಪಿಸಿಎಲ್‍ನ ಸಿಎಸ್‍ಆರ್ ಯೋಜನೆಗಳಲ್ಲಿ ಬೆಳಪು ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸುತ್ತಾ ಬರುತ್ತಿದೆ. ಯುಪಿಸಿಎಲ್‍ನ ಹಿಂದಿನ ಮಾಲಿಕತ್ವ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಿ ಸಿಎಸ್‍ಆರ್ ಯೋಜನೆಗಳನ್ನು ಗ್ರಾಮಕ್ಕೆ ಹಾಗೂ ಗ್ರಾಮಸ್ಥರಿಗೆ ತಲುಪಿಸುವಲ್ಲಿ ವಿ¥sóÀಲವಾಗಿತ್ತು. ಅದಾನಿ ಸಮೂಹ ಯುಪಿಸಿಎಲ್ ಸಂಸ್ಥೆಯನ್ನು ಖರೀದಿಸಿದನಂತರ ಆಳ್ವ ಅವರ ಮುಂದಾಳಾತ್ವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವಿಶೇಷ ಗಮನ ಕೊಟ್ಟು ಸಿಎಸ್‍ಆರ್ ಅನುದಾನವನ್ನು ಘೋಷಿಸಿದೆ.  ಘೋಷಿಸಿದ ಅನುದಾನದಡಿಯಲ್ಲಿ ಪಂಚಾಯತ್ ನೀಡಿದ ಕ್ರಿಯಾಯೋಜನೆಯನ್ನು ಯುಪಿಸಿಎಲ್ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ದೇವಿ ಪ್ರಸಾದ್ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಹಲವಾರು ಕೈಗಾರಿಕೆ ಸಂಸ್ಥೆಗಳಿದ್ದು, ಯಾವ ಸಂಸ್ಥೆಯು ಈ ರೀತಿಯ ಬೃಹತ್ ಸಿಎಸ್‍ಆರ್ ಅನುದಾನವನ್ನು ನೀಡಿರುವುದಿಲ್ಲ, ಅದಾನಿ ಯುಪಿಸಿಎಲ್ ಸಿಎಸ್‍ಆರ್ ಅನುದಾನವನ್ನು ನೀಡಿ ಮಾದರಿ ಸಿಎಸ್‍ಆರ್ ರೂಪಿಸಿದೆ ಎಂದು ದೇವಿಪ್ರಸಾದ್ ತಿಳಿಸಿದರು. ಬೆಳಪು ಗ್ರಾಮಕ್ಕೆ ಅದಾನಿ ಸಂಸ್ಥೆಯು ಗ್ರಾಮೀಣ ಮೂಲಭೂತ ಸೌಕರ್ಯದಡಿಯಲ್ಲಿ ಹಲವಾರು ರಸ್ತೆ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಸೌಕರ್ಯ, ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಶಿಕ್ಷಣ ಪರಿಕರಗಳು, ಬಡವರಿಗೆ ವೈದ್ಯಕೀಯ ನೆರವು, ಗ್ರಾಮಸ್ಥರಿಗೆ  ನೀಡುವ ಸಸಿಗಳು, ರಸ್ತೆಗಳ ವಿದ್ಯುತೀಕರಣ ಹೀಗೆ ಹಲವಾರು ಸಾಮಾಜಮುಖಿ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬರುತ್ತಿದ್ದು, ಗ್ರಾಮಸ್ಥರ ವಿಶ್ವಾಸವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಬೆಳಪು ಗ್ರಾಮ ಹಾಗೂ ಯುಪಿಸಿಎಲ್ ಸಂಸ್ಥೆಗೆ ವಿಶೇಷವಾದ ಸಂಬಂಧವಿದೆ: ಕಿಶೋರ್ ಆಳ್ವ

ಯುಪಿಸಿಎಲ್ ಮೊದಲ ಸಿಎಸ್‍ಆರ್ ಕಾರ್ಯಕ್ರಮ ಬೆಳಪು ಗ್ರಾಮದಿಂದಲೇ ಆರಂಭವಾಗಿತ್ತು.ಸಂಸ್ಥೆಯು ಮೊದಲನೇ ಬಾರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಬೆಳಪುವಿನಲ್ಲಿ ಮಾಡಿ ಸಂಚಾರಿ ವೈದ್ಯಕೀಯ ಸೌಲಭ್ಯ ಕೂಡ ಬೆಳಪು ಪಂಚಾಯತಿಯಲ್ಲಿಯೇ ಪ್ರಾರಂಭವಾಗಿದೆ ಈಗಾಗಿ ಬೆಳಪು ಗ್ರಾಮ ಹಾಗೂ ಯುಪಿಸಿಎಲ್ ಸಂಸ್ಥೆ ನಡುವೆ ಒಂದು ವಿಶೇಷವಾದ ಸಂಬಂಧವಿದೆ ಎಂದು ಯಪಿಸಿಎಲ್ ಕಂಪನಿಯ ಜಂಟಿ ಅಧ್ಯಕ್ಷರಾದ ಕಿಶೋರ್ ಆಳ್ವ ಅವರು ಸಂತೋಷ ವ್ಯಕ್ತಪಡಿಸಿದರು. ಬೆಳಪು ಒಂದು ಮಾದರಿ ಗ್ರಾಮ ಎಂದು ಏಷ್ಯ ಖಂಡದಲ್ಲೆ ಪ್ರಸಿದ್ದಿಯಾಗಿದ್ದು, ಪಠ್ಯ ಪುಸ್ತಕದಲ್ಲೂ ಸಹ ಬೆಳಪು ಪಂಚಾಯತಿಯ ವಿವರಣೆ ಇರುವುದು ನಮ್ಮೆಲ್ಲರ ಹೆಮ್ಮಯ ವಿಷಯ ಎಂದು ಕಿಶೋರ್ ಆಳ್ವ ಹರ್ಷಿಸಿದರು.

ಗ್ರಾಮೀಣ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಮೀಸಲಿಟ್ಟಿದ್ದು, 7 ಗ್ರಾಮ ಪಂಚಾಯತ್‍ಗಳಿಗೆ ಒಟ್ಟು ರೂ. 22.73 ಕೋಟಿ ಅನುದಾನವನ್ನು 3 ವರ್ಷದ ಅವಧಿಗೆ ಘೋಷಿಸಿದ್ದು, 2016-17ನೇ ಸಾಲಿನ ನಂತರ ಪಂಚಾಯತ್ ನೀಡುವ ಕ್ರಿಯಾಯೋಜನೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಅದಾನಿ ಯುಪಿಸಿಎಲ್ ನಿರ್ವಹಿಸುತ್ತಾ ಬರುತ್ತಿದೆ ಎಂದು ತಿಳಿಸಿದ ಅವರು ಬೆಳಪು ಗ್ರಾಮ ಪಂಚಾಯತ್‍ಗೆ 3 ವರ್ಷದ ಅವಧಿಗೆ ಒಟ್ಟು ರೂ. 3 ಕೋಟಿ ಅನುದಾನ ಮೀಸಲಿಟ್ಟಿದ್ದು 2017-18 ನೇ ಸಾಲಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಸಂಸ್ಥೆ ಇಚ್ಚಿಸಿದೆ ಎಂದರು.

ಈ ಸಂದರ್ಭದಲ್ಲಿ ಬದ್ರಿಯಾ ಮಸೀದಿಯ ಆಡಳಿತ ವರ್ಗದವರಿಗೆ ಹಾಗೂ ವಿಶ್ವಕರ್ಮ ಸಮಾಜ ಮಂದಿರದ ಆಡಳಿತ ವರ್ಗದವರಿಗೆ ಅನುಮೋದನೆ ಪತ್ರಗಳನ್ನು ಹಸ್ತಾಂತರಿಸಲಾಯಿತು. ಬೆಳಪು ಗ್ರಾಮದ ಇಬ್ಬರು ನಿವಾಸಿಗಳಿಗೆ ವೈದ್ಯಕೀಯ ನೆರವಿನ ಚೆಕನ್ನು ಆಳ್ವ ಅವರು ಸಮಾರಂಭದಲ್ಲಿ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಬೆಳಪು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೋಭಾ ಭಟ್, ಪಂಚಾಯತ್ ಸದಸ್ಯರಾದ ಶರತ್, ಜûಹೀರ್ ಅಹಮದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್, ಯುಪಿಸಿಎಲ್ ಕಂಪನಿಯ ಏಜಿಎಂ ಗಿರೀಶ್ ನಾವಡ, ಹಿರಿಯ ಪ್ರಬಂಧಕ ರವಿ ಜೇರೆ, ಅದಾನಿ ಫೌಂಡೇಶನ್ ನ ವಿನೀತ್ ಅಂಚನ್, ಅನುದೀಪ್ ಪೂಜಾರಿ ಹಾಗೂ ಬೆಳಪು ಗ್ರಾಮಸ್ಥರು ಉಪಸ್ಥಿತರಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗುಡ್ಡ ಕುಸಿತ: ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಹಾಗೂ ಐ.ಆರ್‌.ಬಿ ಸಂಸ್ಥೆಗೆ ಜಿಲ್ಲಾಧಿಕಾರಿ ತಾಕೀತು 

ಮುಂದಿನ ಸುದ್ದಿ »

ಮಲೇರಿಯ ಮಾಸಾಚರಣೆ ಪ್ರಯುಕ್ತ ಆರೋಗ್ಯ ಇಲಾಖೆಯಿಂದ ಬೃಹತ್ ಜನ ಜಾಗೃತಿ ರ್ಯಾಲಿ

ಸಿನೆಮಾ

  • ಸರಳವಾಗಿ ರಿಜಿಸ್ಟರ್ ಮದುವೆಯಾದ ಮುಸ್ತಫಾ-ಪ್ರಿಯಾಮಣಿ

    August 23, 2017

    ಬೆಂಗಳೂರು: ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಪ್ರಿಯಾಮಣಿ ಇಂದು ತಮ್ಮ ಹಲವು ಕಾಲದ ಗೆಳೆಯ ಮುಸ್ತಫಾರಾಜಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರ ರಿಜಿಸ್ಟರ್ ಆಫೀಸಿಗೆ ನಟಿ ...

    Read More
  • ಈ ಬಾರಿ ಗಣೇಶೋತ್ಸವ ಆಚರಿಸದ ಸಲ್ಮಾನ್ ಖಾನ್: ಕಾರಣವೇನು ಗೊತ್ತೇ?

    August 22, 2017

    ನ್ಯೂಸ್ ಕನ್ನಡ-(22.08.17): ಬಾಲಿವುಡ್ ನಟ ಸಲ್ಮಾನ್ ಖಾನ್ ಗಣಪತಿ ಭಕ್ತನಾಗಿದ್ದು, ಪ್ರತೀವರ್ಷವೂ ತಮ್ಮ ಮನೆಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಸತತ 15ವರ್ಷಗಳಿಂದ ತಮ್ಮ ಮನೆಯಲ್ಲಿ ನಡೆಸುತ್ತಾ ಬಂದಿದ್ದ ವೈಭವದ ಗಣೇಶೋತ್ಸವವನ್ನು ಕೈಬಿಟ್ಟು ಸಲ್ಮಾನ್ ಖಾನ್ ...

    Read More
  • ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದ ತಮಿಳು ನಟ ಆರ್ಯ

    August 21, 2017

    ನ್ಯೂಸ್ ಕನ್ನಡ ವರದಿ-(21.08.17): ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಯುವನಟ ಆರ್ಯ ಮಮ್ಮೂಟಿ ಅಭಿನಯದ ಗಾಡ್ ಫಾದರ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಕೇರಳದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಸೂಪರ್ ಹಿಟ್ ಚಿತ್ರವಾದ ...

    Read More
  • ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಕ್ರಿಕೆಟಿಗ ಶ್ರೀಶಾಂತ್!

    August 16, 2017

    ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್‌ ಆರೋಪಗಳಿಂದ ಕಂಗಾಲಾಗಿದ್ದ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶ್ರೀಶಾಂತ್ ಇತ್ತೀಚೆಗಷ್ಟೆ ನಿರಾಳರಾಗಿದ್ದಾರೆ. ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×