Tuesday January 10 2017

Follow on us:

Contact Us

ರಾಷ್ಟ್ರಮಟ್ಟದ ವಾಲಿಬಾಲ್: ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಸ್ಸಾ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ತಂಡಗಳ ಜಯಭೇರಿ

ನ್ಯೂಸ್ ಕನ್ನಡ ವರದಿ(10.01.2017)-ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ 19ರ ವಯೋಮಾನದ ವಾಲಿಬಾಲ್ ಪಂದ್ಯಾಟದ ಎರಡನೇ ದಿನದಾಟದಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಸ್ಸಾ, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶ ತಂಡಗಳು ಜಯಭೇರಿ ಬಾರಿಸಿವೆ.

ಜಮ್ಮುವನ್ನು ಮಣಿಸಿದ ಪಶ್ಚಿಮ ಬಂಗಾಳ

ದಿನದ ಮೊದಲ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡ 3-0 ನೇರ ಸೆಟ್ ಗಳಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿತು. ಏಕಪಕ್ಷೀಯವಾಗಿ ಸಾಗಿದ ಈ ಪಂದ್ಯದಲ್ಲಿ ಪಶ್ಚಿಮ ಬಂಗಾಳವು ಜಮ್ಮು ಕಾಶ್ಮೀರ ತಂಡದಿಂದ ಯಾವುದೇ ಪ್ರತಿರೋಧ ಎದುರಿಸದೆ ಮೂರು ಸೆಟ್‍ಗಳಲ್ಲಿ 25-4, 25-9 ಮತ್ತು 25-7 ಅಂಕಗಳಿಂದ ಸುಲಭವಾಗಿ ಜಯಿಸಿತು.

ಉತ್ತರ ಪ್ರದೇಶ ತಂಡವು 3-0 ಸೆಟ್‍ಗಳಿಂದ (25-12, 25-17 ಮತ್ತು 25-8) ಐಪಿಎಸ್‍ಸಿ ತಂಡದ ವಿರುದ್ಧ ಸುಲಭವಾಗಿ ಜಯಗಳಿಸಿತು.
ತೀವ್ರ ಪೈಪೋಟಿಯಿಂದ ಕೂಡಿದ್ದ ಮಧ್ಯಪ್ರದೇಶ ಮತ್ತು ಒಡಿಸ್ಸಾ ತಂಡಗಳ ನಡುವಿನ ಪಂದ್ಯದಲ್ಲಿ ಮಧ್ಯಪ್ರದೇಶವು ಒಡಿಸ್ಸಾವನ್ನು 3-1 ಸೆಟ್ ಗಳಿಂದ ಮಣಿಸಿ ಜಯದ ಕೇಕೆ ಹಾಕಿತು. ಮೊದಲೆರಡು ಸೆಟ್ ಗಳನ್ನು ಕೈಚೆಲ್ಲಿದ್ದ ಒಡಿಸ್ಸಾ ತಂಡವು ಮೂರನೇ ಸೆಟ್ ನಲ್ಲಿ ಚೇತರಿಸಿಕೊಂಡು ಮಧ್ಯಪ್ರದೇಶ ತಂಡಕ್ಕೆ ಕೊಂಚ ಪ್ರತಿರೋಧ ತೋರಿದರೂ ಕೂಡಾ ನಾಲ್ಕನೇ ಸೆಟ್ ನ್ನು ಕೈಚೆಲ್ಲಿ ಸೋಲೊಪ್ಪಿಕೊಂಡಿತು. 25-17, 25-23, 20-25, 25-13 ಸೆಟ್ ಗಳಿಂದ ಮಧ್ಯಪ್ರದೇಶ ತಂಡ ಜಯಗಳಿಸಿತು.

ಮಹಾರಾಷ್ಟ್ರ ತಂಡ 3-0 ಸೆಟ್‍ಗಳಿಂದ ( 25-21, 25-13, 25-8) ಚತ್ತೀಸ್‍ಘರ್ ತಂಡವನ್ನು ಹಾಗೂ ಹಿಮಾಚಲ ಪ್ರದೇಶ ತಂಡ ಉತ್ತರಾಖಂಡ್ ತಂಡವನ್ನು 3-0 ನೇರ ಸೆಟ್ ಗಳಿಂದ ( 25-05, 25-08, 25- 08) ಮಣಿಸಿ ಜಯಗಳಿಸಿದವು.

ವರದಿ: ಭರತ್ ಭಾರದ್ವಾಜ್, ಎಚ್. ಎಸ್., ಎಸ್ ಡಿ ಎಂ ಕಾಲೇಜು, ಉಜಿರೆ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕನ್ನಡ ಜಾನಪದ ಪರಿಷತ್‍ನ ದ.ಕ. ಜಿಲ್ಲಾ ಅಧ್ಯಕ್ಷರಾಗಿ ಡಾ.ಅನುರಾಧಾ ಕುರುಂಜಿ

ಮುಂದಿನ ಸುದ್ದಿ »

ಅಗ್ನಿ ದುರಂತ: ನೊಂದ ಕುಟುಂಬಗಳಿಗೆ 15 ದಿನ ಆಹಾರ ಪೂರೈಕೆ- ಶಾಸಕ ಶಿವರಾಮ್

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×