Monday February 12 2018

Follow on us:

Contact Us

ಉಚ್ಚಿಲ; ಸಿರಾಜ್ ಎನ್.ಎಚ್ ನೇತ್ರತ್ವದಲ್ಲಿ ದಾನಿಗಳ ಸಹಕಾರದಿಂದ 7 ಬ್ಯಾರಿಕೇಡ್ ಹಸ್ತಾಂತರ

ನ್ಯೂಸ್ ಕನ್ನಡ ವರದಿ-(12.2.18): ಕಾಪು: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಕ್ರಾಸಿಂಗ್ ಬಳಿ ಸುಗಮ ಸಂಚಾರಕ್ಕಾಗಿ ರಿಕ್ಷಾ ಚಾಲಕ ಮಾಲಕ ಸಂಘ ಉಚ್ಚಿಲ ಇದರ ಅಧ್ಯಕ್ಷ ಸಿರಾಜ್ ಎನ್.ಎಚ್.ಇವರ ನೇತ್ರತ್ವದಲ್ಲಿ ದಾನಿಗಳ ಸಹಕಾರದಿಂದ 7 ಬ್ಯಾರಿಕೇಡ್ ಗಳನ್ನು ಪಡುಬಿದ್ರಿ ಠಾಣೆಗೆ ನೀಡಲಾಯಿತು.

ಪಡುಬಿದ್ರಿ ಠಾಣೆಯ ಕೋರಿಕೆಯ ಮೇರೆಗೆ ದಾನಿಗಳಾದ ಮಾಜಿ ಡಿವೈಎಸ್ಪಿ ಅನುಪಮ ಶೆಣೈ , ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆ ಉಚ್ಚಿಲ, ಈಸ್ಟ್ ವೆಸ್ಟ್ ನರ್ಸರಿ ಮೂಳೂರು , ಸಾಹಿಲ್ ವೆಲ್ಡ್ಂಗ್ ವರ್ಕ್ಸ್ ಕಾಪು ಇವರಿಂದ ಪಡೆದ 7 ಬ್ಯಾರಿಕೇಡ್ ಗಳನ್ನು ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಎಂ.ಪಿ ಇವರಿಗೆ ಸೋಮವಾರ ಹಸ್ತಾಂತರಿಸಲಾಯಿತು.

ಬ್ಯಾರಿಕೇಡ್ ಗಳನ್ನು ಉಚ್ಚಿಲದ ಹೆದ್ದಾರಿ ಕ್ರಾಸಿಂಗ್ ಬಳಿ ಅಳವಡಿಸುವಂತೆ ಸಿರಾಜ್ ಉಚ್ಚಿಲ ಠಾಣಾಧಿಕಾರಿಗಳಲ್ಲಿ ಮನವಿ ಮಾಡಿದರು. ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಾ ಶೆಟ್ಟಿಗಾರ್,ಶಿಕ್ಷಕರಾದ ಶಿವಾನಂದ, ಸುರೇಶ್ ಎ‌‌.ಕರ್ಕೇರ, ಉದ್ಯಮಿ ರಾಧಾಕೃಷ್ಣ ಶೆಣೈ ಉಚ್ಚಿಲ, ಗ್ರಾ.ಪಂ ಸದಸ್ಯ ರಫೀಕ್ ದೀವ್, ಸಾಧಿಕ್ ಎನ.ಎಚ್.ಇಂಟೆಕ್ ಅಧ್ಯಕ್ಷರು ಉಚ್ಚಿಲ, ಸಮಾಜ ಸೇವಾ ಮುಂದಾಳುಗಳಾದ ಸಂಶುದ್ದೀನ್ ದರ್ಕಸ್,ಕುಮಾರ ಸಾಲ್ಯಾನ್ ಸುಭಾಸ್ ರೋಡ್, ಚೆರಿಯಮೋನು ಉಚ್ಚಿಲ ಉಪಸ್ಥಿತರಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಾಂಗ್ರೆಸ್ ಪಕ್ಷವು ಯಡಿಯೂರಪ್ಪ, ಮೋದಿ, ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ!: ಸಿದ್ದರಾಮಯ್ಯ

ಮುಂದಿನ ಸುದ್ದಿ »

ಕಣ್ಣೂರು: ಯುವ ಕಾಂಗ್ರೆಸ್ ಮುಖಂಡ ಶುಹೈಬ್ ಬರ್ಬರ ಹತ್ಯೆ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×