Tuesday January 10 2017

Follow on us:

Contact Us

ಖಾಸಗಿ ಸ್ಥಳದಲ್ಲಿ ಕಸವಿಲೇವಾರಿ-ಗುತ್ತಿಗೆದಾರರ ಪರದಾಟ: ಸಾರ್ವಜನಿಕರಿಗೆ ಜೀವ ಸಂಕಟ

ನ್ಯೂಸ್ ಕನ್ನಡ ವರದಿ-(10.01.2017) ಉಚ್ಚಿಲ: ಖಾಸಗಿ ವ್ಯಕ್ತಿಗೆ ಸಂಬಂಧಿಸಿದ ಸ್ಥಳದಲ್ಲಿ ಉಚ್ಚಿಲದ ಬಡಾ ಗ್ರಾಮ ಪಂಚಾಯತ್ ಕಸವಿಲೇವಾರಿ ಮಾಡುತ್ತಿದ್ದು, ಇದು ಸಾರ್ವಜನಿಕರಿಗೆ ಭಾರೀ ತೊಂದರೆಯನ್ನುಂಟು ಮಾಡಿದೆ. ತ್ಯಾಜ್ಯಗಳನ್ನು ರಸ್ತೆ ಸಮೀಪವೇ ಎಸೆಯಲ್ಪಡುವುದರಿಂದಾಗಿ ರೋಗ ಹರಡುವ ಭೀತಿ ಇದೆ ಎಂದು ಸ್ಥಳೀಯರು ನ್ಯೂಸ್ ಕನ್ನಡಕ್ಕೆ ತಿಳಿಸಿದ್ದಾರೆ.

uchila2

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಪ್ರದೇಶಕ್ಕೆ ಒಳಪಡುವ ದಾಸರಗುಡ್ಡೆ ಎಂಬಲ್ಲಿ ಕೋರ್ಟ್ ಕೇಸಿನಲ್ಲಿರುವ ಖಾಸಗಿ ಸ್ಥಳದಲ್ಲಿ ಕಸವನ್ನು ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಈ ತ್ಯಾಜ್ಯ ಹಾಕುವ ಸ್ಥಳದ ಸಮೀಪವೇ ಮಸೀದಿ, ದೇವಸ್ಥಾನ ಚರ್ಚ್ ಗಳಿದ್ದು, ಇಲ್ಲಿ ಆಗಮಿಸುವ ಜನರಿಗೆ ಕಸದಿಂದ ಬೀರುವ ದುರ್ವಾಸನೆಯು ತೀವ್ರ ರೀತಿಯ ತೊಂದರೆಯನ್ನುಂಟು ಮಾಡುತ್ತಿದೆ.

ಈ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಪಂಚಾಯತ್ ಗೆ ಲಿಖಿತ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸ್ಥಳೀಯರು ಅಸಹಾಯಕರಾಗಿ ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಮಕ್ಕಳು ಇದೇ ಸ್ಥಳಗಳಲ್ಲಿ ಆಟವಾಡಲು ಹೋಗುತ್ತಿದ್ದಾರೆ. ಸಣ್ಣ ಮಕ್ಕಳು ಕಸದ ರಾಶಿಯ ಸಮೀಪದಲ್ಲೇ ಆಟವಾಡುತ್ತಿದ್ದಾರೆ. ಇದರಿಂದಾಗಿ ಮಕ್ಕಳಿಗೆ ರೋಗ ಹರಡಿದರೆ ಏನು ಗತಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕಸದ ರಾಶಿಯಲ್ಲಿ ಬೀಳುವ ಕೆಟ್ಟು ಹೋದ ಆಹಾರ ವಸ್ತುಗಳು ಬೀಳುತ್ತಿರುವುದರಿಂದಾಗಿ ಬೀದಿ ನಾಯಿಗಳ ಹಿಂಡು ಈ ಪ್ರದೇಶದಲ್ಲಿ ಬೀಡುಬಿಟ್ಟಿವೆ. ಈ ಪ್ರದೇಶದಲ್ಲಿ ಸಂಚರಿಸುವ ಸಾರ್ವಜನಿಕರನ್ನು, ಮಕ್ಕಳನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋದಂತ ಘಟನೆಗಳೂ ನಡೆದಿವೆ. ಇದರಿಂದಾಗಿ ಜನರು ಭಯಭೀತರಾಗಿದ್ದಾರೆ.

uchila2

uchila3

uchila4

uchila4

uchila7

ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಷಾಲಿನಿಯವರನ್ನು ನ್ಯೂಸ್ ಕನ್ನಡವು ಸಂಪರ್ಕಿಸಿ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದು, ಈ ಬಗ್ಗೆ  ಪ್ರತಿಕ್ರಿಯಿಸಿದ ಅವರು,  ತಾನು ಈ ಪಂಚಾಯತ್ ಗೆ ಬಂದು ಕೇವಲ ಒಂದು ತಿಂಗಳಾಯಿತಷ್ಟೆ. ಇದೀಗ ಕಸ ವಿಲೇವಾರಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಬಗೆಯ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ದಾಸರಗುಡ್ದೆಯಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯನ್ನು ನೀಗಿಸಲು ತ್ಯಾಜ್ಯ ಹಾಕುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಹಾಗೂ ತ್ಯಾಜ್ಯವನ್ನು ಸಂಪೂರ್ಣವಾಗಿ ಸ್ವಚ್ಚ ಮಾಡಲಿದ್ದೇವೆ ಎಂದು ತಿಳಿಸಿದರು.

ಉಚ್ಚಿಲ ಪ್ರದೇಶದಲ್ಲಿ ಕಸವಿಲೇವಾರಿಗೆ ಪ್ರತ್ಯೇಕ ಸ್ಥಳವಿಲ್ಲದೇ ಇರುವುದರಿಂದಾಗಿ ಗುತ್ತಿಗೆದಾರರು ಪರದಾಡುತ್ತಿದ್ದು, ಕಂಡಕಂಡಲ್ಲಿ ಕಸವನ್ನು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪಂಚಾಯತ್ ತಕ್ಷಣ ಕಸವಿಲೇವಾರಿಗೆ ಜನವಸತಿ ಇಲ್ಲದ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳವನ್ನು ಗೊತ್ತು ಮಾಡುವುದು ಅಗತ್ಯವಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಮುಂದಾಗ ಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಈ ಪ್ರದೇಶದ ಜನರು ಪಂಚಾಯತ್ ವಿರುದ್ಧ ಪ್ರತಿಭಟಿಸಲು ಮುಂದಾಗಲಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

nkgkprkm

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬ್ಲಡ್ ಡೋನರ್ಸ್ ಮಂಗಳೂರು ತಂಡದಿಂದ ಜನವರಿ ತಿಂಗಳಲ್ಲಿ 4 ರಕ್ತದಾನ ಶಿಬಿರ

ಮುಂದಿನ ಸುದ್ದಿ »

ಮೈಮೂನ್ ಜುಮ್ಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಅಬ್ಬಾಸ್ ಪೆರಿಯಪಾದೆ ಪುನರಾಯ್ಕೆ

ಸಿನೆಮಾ

 • ರಜನೀಕಾಂತ್‍ ರಿಗೆ ಬಿಜೆಪಿಯಿಂದ ಮತ್ತೆ ಗಾಳ

  May 24, 2017

    ನ್ಯೂಸ್ ಕನ್ನಡ ವರದಿ-(24.5.17)ಹೊಸದಿಲ್ಲಿ: ರಜನೀಕಾಂತ್‍ರನ್ನು ಬಿಜೆಪಿಗೆ ಸೇರಿಸುವ ಅವಿರತ ಪ್ರಯತ್ನ ಸಾಗುತ್ತಿದೆ. ರಜನಿ ರಾಜಕೀಯ ಪ್ರವೇಶವೊಂದು  ಖಾತ್ರಿಯೆನ್ನಲಾಗಿದ್ದು, ಅವರನ್ನು ಬಿಜೆಪಿ ಅವರನ್ನು  ಓಲೈಸುತ್ತಿದೆ.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಜನೀಕಾಂತ್ ಗೆ ಮತ್ತೋಮ್ಮೆ ತಮ್ಮ ...

  Read More
 • ಮದುವೆಯಾಗಲಿದ್ದಾರೆ ಲೂಸ್ ಮಾದ ಯೋಗೀಶ್

  May 23, 2017

  ಬೆಂಗಳೂರು: ಸ್ಯಾಂಡಲ್‍ವುಡ್‍ನ ಲೂಸ್ ಮಾದ ಖ್ಯಾತಿಯ ಯೋಗೀಶ್ ಗೃಹಸ್ಥಾಶ್ರಮಕ್ಕೆ ಸೇರಲು ಸಜ್ಜಾಗಿದ್ದಾರೆ. ಬಾಲ್ಯದಗೆಳತಿ, ಬಹುರಾಷ್ಟ್ರಿಯ ಕಂಪನಿಯ ಉದ್ಯೋಗಿ ಸಾಹಿತ್ಯ ಅರಸ್ ಅವರೊಂದಿಗೆ ಯೋಗೀಶ್ ಸಪ್ತಪದಿ ತುಳಿಯಲಿದ್ದಾರೆ. ಸಾಹಿತ್ಯ ಅರಸ್ ಯೋಗಿ 2 ವರ್ಷದಿಂದ ಲವ್ ಮಾಡುತ್ತಿದ್ದು, ಸದ್ಯದಲ್ಲೇ ...

  Read More
 • ಮಕ್ಕಳಿಗಾಗಿ ಮತ್ತೆ ಒಂದಾದ ಹೃತಿಕ್ ರೋಶನ್-ಸೂಸೇನ್

  May 23, 2017

  ನ್ಯೂಸ್ ಕನ್ನಡ-(23.5.17):ಬಾಲಿವುಡ್‌ನ ಸ್ನೇಹಪರ ದಂಪತಿ ಎಂದೇ ಗುರುತಿಸಿಕೊಂಡಿದ್ದ ಹೃತಿಕ್‌ ರೋಷನ್ ಮತ್ತು ಸೂಸೇನ್ ಖಾನ್ ಅವರು ವೈವಾಹಿಕ ವಿಚ್ಛೇದನ ಪಡೆದಾಗ ಎಲ್ಲರೂ ನಿಬ್ಬೆರಗಾಗಿದ್ದರು. ಸೂಸೇನ್ ಅಂತೂ ಪತಿಯ ಬಗ್ಗೆ ಖಾರವಾಗಿ ಮಾತನಾಡಿದ್ದರು. ಆದರೆ ವಿಚ್ಛೇದನ ಪಡೆದ ಮೇಲೂ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×