Tuesday January 10 2017

Follow on us:

Contact Us

ಧರ್ಮಸ್ಥಳದ ಜಮೀನು ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಹಸ್ತಾಂತರ

ನ್ಯೂಸ್ ಕನ್ನಡ ವರದಿ(10.01.2017)-ಸುಳ್ಯ: ಸುಳ್ಯ ಚೆನ್ನಕೇಶವ ದೇವಸ್ಥಾನದ ರಾಜಗೋಪುರದ ಎದುರಿನ 1.20 ಎಕ್ರೆ ಜಾಗ ಹಾಗೂ ದೇವಸ್ಥಾನದ ಬಲ ಬದಿಯ 1.30 ಎಕ್ರೆ ಜಾಗ ಧರ್ಮಸ್ಥಳ ಕ್ಷೇತ್ರದ ಹೆಸರಿನಲ್ಲಿದ್ದು ಅದನ್ನು ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದ್ದು ವೀರೇಂದ್ರ ಹೆಗ್ಗಡೆಯವರ ಪರವಾಗಿ ಅವರ ಸಹೋದರ ಹರ್ಷೇಂದ್ರ ಕುಮಾರ್ ಆಗಮಿಸಿ ಅಭಿನಂದನೆ ಸ್ವೀಕರಿಸಿದರು.

ಅಭಿನಂದನೆ ಸ್ವೀಕರಿಸಿದ ಹಷೇಂದ್ರಕುಮಾರ್ ಮಾತನಾಡಿ, ಧರ್ಮಸ್ಥಳಕ್ಕೂ ಸುಳ್ಯಕ್ಕೂ ಎಷ್ಟು ವರ್ಷದ ಸಂಬಂಧ ಎಂದು ನನಗೆ ಗೊತ್ತಿಲ್ಲ. ಆದರೆ ಧರ್ಮಸ್ಥಳಕ್ಕೆ ಸೇರಿದ ಜಾಗ ಇಲ್ಲಿ ಇದೆ ಎಂಬುದು ಮಾತ್ರ ಗೊತ್ತಿತ್ತು. ಇಂದು ಮಂಜುನಾಥ ಸ್ವಾಮಿಯ ಪ್ರೇರಣೆಯಿಂದ ಈ ಜಾಗವನ್ನು ಚೆನ್ನಕೇಶವ ಸ್ವಾಮೀಗೆ ನಾವು ಹಸ್ತಾಂತರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಹೇಳಿದರು.

ನಮ್ಮಣ್ಣ ವೀರೇಂದ್ರ ಹೆಗ್ಗಡೆಯವರು ಈ ಕಾಲದ ಯುಗ ಪುರುಷ. ಅವರು ಏನೆ ಮಾಡಿದರೂ ದೂರದೃಷ್ಠಿಯಿಟ್ಟು ಮಾಡುತ್ತಾರೆ. ಅವರಂತಹ ಯೋಚನೆಯಿಂದ ಅಭಿವೃದ್ಧಿ ಕಾರ್ಯಗಳು ನಿರಂತರ ನಡೆಯುತ್ತಿದೆ. ಧರ್ಮಸ್ಥಳಕ್ಕೆ ಸ್ವಚ್ಚತೆಯಲ್ಲಿ ಪ್ರಶಸ್ತಿ ಬಂದಾಗ ಅದನ್ನು ಎಲ್ಲಾ ಕಡೆಗೂ ಅಣ್ಣ ವಿಸ್ತರಿಸಿದರು. ಇಂದು 350ಕ್ಕೂ ಹೆಚ್ಚು ಧಾರ್ಮಿಕ ಕ್ಷೇತ್ರಗಳು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡು ನಮಗೆ ರಿಪೋರ್ಟ್ ಕೊಟ್ಟಿದ್ದಾರೆ ಎಂದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯದ ಬಹುಭಾಗ ಜಾಗ ಧರ್ಮಸ್ಥಳಕ್ಕೆ ಸೇರಿದ್ದು. ಅದನ್ನು ಅವರು ದಾನ ರೂಪದಲ್ಲಿ ನೀಡಿದ್ದರಿಂದ ಇನ್ನೂ ಅನೇಕರು ಅನುಭವಿಸುತ್ತಾ ಬರುತ್ತಿದ್ದಾರೆ. ಇಂದು ದೇವಸ್ಥಾನದ ಎದುರಿನ ಜಾಗವನ್ನು ದೇವಸ್ಥಾನಕ್ಕೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ್ ರಾವ್ ಅಭಿನಂದನಾ ಭಾಷಣ ಮಾಡಿದರು.  ಧರ್ಮಸ್ಥಳ ಯೋಜನೆಯ ಸುಳ್ಯ ಯೋಜನಾಧಿಕಾರಿ ಯುವರಾಜ್ ಜೈನ್ ಮುಖ್ಯ ಅತಿಥಿಯಾಗಿದ್ದರು. ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಪಡ್ಡಂಬೈಲು ವೆಂಕಟ್ರಮಣ ಗೌಡ, ಕೇರ್ಪಳ ಲಿಂಗಪ್ಪ ಮಾಸ್ತರ್, ರಮೇಶ್ ಬೈಪಡಿತ್ತಾಯ, ಉಪೇಂದ್ರ ಕಾಮತ್, ಎನ್.ಎ.ರಾಮಚಂದ್ರ ಉಪಸ್ಥಿತರಿದ್ದರು. ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಧರ್ಮದರ್ಶಿ ಡಾ.ಹರಪ್ರಸಾದ್ ತುದಿಯಡ್ಕ ಸ್ವಾಗತಿಸಿದರು. ಎಂ.ಮೀನಾಕ್ಷಿ ಗೌಡ ಸನ್ಮಾನಪತ್ರ ವಾಚಿಸಿದರು. ಎನ್. ಜಯಪ್ರಕಾಶ್ ರೈ ವಂದಿಸಿದರು. ಗಿರೀಶ್ ಕುಂಠಿನಿ ಕಾರ್ಯಕ್ರಮ ನಿರೂಪಿಸಿದರು.

nkdksgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸುಳ್ಯ ಶ್ರೀಚೆನ್ನಕೇಶವನಿಗೆ ಜಾತ್ರೋತ್ಸವ ಸಂಭ್ರಮ

ಮುಂದಿನ ಸುದ್ದಿ »

ಕನ್ನಡ ಜಾನಪದ ಪರಿಷತ್‍ನ ದ.ಕ. ಜಿಲ್ಲಾ ಅಧ್ಯಕ್ಷರಾಗಿ ಡಾ.ಅನುರಾಧಾ ಕುರುಂಜಿ

ಸಿನೆಮಾ

  • ನಟಿ ಅಪಹರಣ ಪ್ರಕರಣ: 4ನೇ ಬಾರಿಯೂ ದಿಲೀಪ್ ಜಾಮೀನು ಅರ್ಜಿ ವಜಾ!

    September 18, 2017

    ನ್ಯೂಸ್ ಕನ್ನಡ ವರದಿ-(18.9.17): ನಟಿಯೊಬ್ಬಳ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಮತ್ತೆ ತಿರಸ್ಕರಿಸಿದೆ. ಜುಲೈ 10ರಂದು ಬಂಧಿತರಾಗಿದ್ದ ದಿಲೀಪ್ ಈ ಹಿಂದೆ ಜುಲೈ 24ರಂದು ಜಾಮೀನಿಗೆ ಅರ್ಜಿ ...

    Read More
  • ಅ.6: ಗಲ್ಫ್ ನಲ್ಲಿ ಮಾರ್ಚ್ 22 ಸಿನಿಮಾ ಬಿಡುಗಡೆ

    September 17, 2017

    ನ್ಯೂಸ್ ಕನ್ನಡ ವರದಿ-(17.9.17): ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ಹಾಗು ಮಾಧ್ಯಮಗಳ ಪ್ರಶಂಶೆಯ ಸುರಿಮಳೆಗೆ ಭಾಜನವಾಗಿರುವ  ‘ಮಾರ್ಚ್ 22’  ಸಿನೆಮಾ  ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇ(ಗಲ್ಫ್) ಯಾದ್ಯಂತ ಅಕ್ಟೊಬರ್ 6 ರಂದು ಬಿಡುಗಡೆಯಾಗುತ್ತಿದೆ. ಸಿನೆಮಾದ ಪ್ರಥಮ ಪ್ರದರ್ಶನದಲ್ಲಿ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×