Thursday October 12 2017

Follow on us:

Contact Us

ತ್ಯಾಜ್ಯ ಘಟಕಕ್ಕೆ ವಿರೋಧದ ಹಿಂದೆ ರಾಜಕೀಯ ನಡೆಯುತ್ತಿದೆ; ಸೊರಕೆ ಆರೋಪ

ನ್ಯೂಸ್ ಕನ್ನಡ ವರದಿ-(12.10.17): ಕಾಪು: ಯುಪಿಸಿಎಲ್ ವಿಸ್ತರಣೆಗೆ ತಕರಾರು ಮಾಡದ ಮಂದಿ ರಾಜಕೀಯ ಉದ್ದೇಶದಿಂದ ತ್ಯಾಜ್ಯ ಘಟಕಕ್ಕೆ ವಿರೋಧ ಮಾಡುತ್ತಿದ್ದಾರೆ. ಬಡವರ ಮನೆ ಹಾಳು ಮಾಡಿದ ಮಂದಿ, ಹಿಂದೆ ಮನೆ ನಿವೇಶನ ನೀಡುವ ವಿಷಯದಲ್ಲಿಯೂ ವಿರೋಧ ಮಾಡಿದ್ದರು ಎಂದು ಶಾಸಕ ವಿನಯಕುಮಾರ್ ಸೊರಕೆ ಆರೋಪಿಸಿದ್ದಾರೆ.

ಎಲ್ಲೂರಿನಲ್ಲಿ ಸ್ಥಾಪಿಸಲುದ್ದೇಶಿಸಿರುವ ಕಾಪು ಪುರಸಭೆಯ ಘನತ್ಯಾಜ್ಯ ಸಂಸ್ಕರಣ ಘಟಕಕ್ಕೆ ರಾಜಕೀಯ ಉದ್ದೇಶದಿಂದ ವಿರೋಧ ಮಾಡುತ್ತಿರುವುದು ಸಮಂಜಸವಲ್ಲ. ಘನತ್ಯಾಜ್ಯ ಸಂಸ್ಕರಣ ಘಟಕ ಮಾಡಲು ಪುರಸಭೆಗೆ ಅನುದಾನ ತರಲು ಅವಕಾಶವಿರುವುದರಿಂದ ಘಟಕ ಸ್ಥಾಪನೆಗೆ ಮುಂದಾಗಿದೆ. ಎಲ್ಲೂರಿನಲ್ಲಿಯೇ ಜಮೀನು ನೀಡುವಂತೆ ನಾವು ಕೇಳಿಲ್ಲ. ಆದರೆ ಜಿಲ್ಲಾಡಳಿತ ಜಾಗ ಗುರುತಿಸಿ ಪುರಸಭೆ ಹೆಸರಿನಲ್ಲಿ ಆರ್.ಟಿ.ಸಿ ಮಾಡಿ ನೀಡಿದೆ. ಶೂನ್ಯ ಶೇಕಡ ಮಾಲಿನ್ಯ ರಹಿತವಾಗಿರುವ ಘಟಕದಲ್ಲಿ ಗೊಬ್ಬರ ತಯಾರಿಸಿ ಸಂಪೂರ್ಣವಾಗಿ ಉಪಯೋಗಿಸಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಕಾಪು ಪುರಸಭೆ ಸುತ್ತಮುತ್ತಲಿನ ಗ್ರಾಪಂಗಳ ತ್ಯಾಜ್ಯವನ್ನು ಸಂಸ್ಕರಣ ಮಾಡಲು ಇಲ್ಲಿ ಆವಕಾಶ ಕಲ್ಪಿಸಲಾಗುವುದು ಎಂದು ಸೊರಕೆ ಹೇಳಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

400 ಮೀ ಓಟದಲ್ಲಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡ ತೃಶಾ ರಾಜ್ಯಮಟ್ಟಕ್ಕೆ ಆಯ್ಕೆ

ಮುಂದಿನ ಸುದ್ದಿ »

ಹಾದಿ ತಪ್ಪಿಸುವ ಸಾಮಾಜಿಕ ಜಾಲತಾಣಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕರೆ: ಅಭಿನವ ಖರೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×