Thursday January 11 2018

Follow on us:

Contact Us

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನರನ್ನು ಸ್ವಾವಲಂಬನೆಯತ್ತ ಮುನ್ನಡೆಸುತ್ತಿದೆ-ಸುರೇಶ್ ಶೆಟ್ಟಿ

ನ್ಯೂಸ್ ಕನ್ನಡ(11-01-2018): ಶ್ರೀನಿವಾಸಪುರ: ಯಾವುದೇ ಜಾತಿ ಮತ ಧರ್ಮ ಭೇದವೆಣಿಸದೇ ಗ್ರಾಮೀಣ ಹಾಗು ಪಟ್ಟಣದ ಕುಟುಂಬಗಳ ಶ್ರೇಯೋಭಿವೃದ್ದಿಗೆ ಕಳೆದ 3 ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಅವರನ್ನು ಸ್ವಾವಲಂಬನೆಯತ್ತ ಮುನ್ನಡೆಸುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಶೆಟ್ಟಿ ರವರು ತಿಳಿಸಿದರು.

ಶ್ರೀನಿವಾಸಪುರ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ ಅಡಿಯಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಹಾಗು ಕ್ರೀಡಾಕೂಟ ಮತ್ತು ಸ್ವ-ಉದ್ಯೋಗ ತರಬೇತಿದಾರರಿಗೆ ಪ್ರಮಾಣ ಪತ್ರಗಳನ್ನು ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಅಭಿವೃದ್ದಿ ಅಥವಾ ಸಂಘಟನೆಗೆ ಮಾತ್ರ ಸೀಮಿತವಾಗಿದೆ ಸ್ವಾವಲಂಬನೆ ಬದಕು ನಡೆಸುವ ವೃತ್ತಿ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು. ಜೊತೆಗೆ ಸಾಂಸ್ಕೃತಿಕವಾಗಿ ಮಹಿಳೆಯರನ್ನು ಸಂಘಟಿಸಿ ಜಾನಪದ ಸೊಗಡನ್ನು ಬಿಂಬಿಸುವ ಕಾರ್ಯಕ್ರಮಗಳಲ್ಲಿ ಇಂದಿನ ಕಾರ್ಯಕ್ರಮವಾಗಿದೆ ಎಂದರು ಅದೇ ರೀತಿ ಮಹಿಳೆಯರು ತಮಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ಹೇಳಿದರು.

ಸಮಾಜ ಸೇವಾ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ವಿ.ನಾಗರಾಜ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬದಕಿನ ಚಿತ್ರಣ ಜೊತೆಗೆ ಮಾನವೀಯ ಸಂಬಂಧಗಳನ್ನು ತಿಳಿಸಿಕೊಡುವ ಜನರ ಬಾಯಿಂದ ಬಂದ ಜನಪದ ಸಾಹಿತ್ಯ ಸಾಂಸ್ಕೃತಿಕವಾಗಿ ಇಂದಿನ ಸಿನಿಮಾ ದೂರದರ್ಶನದಂತಹ ಕಾರ್ಯಕ್ರಮಗಳಿಗೆ ಸಹಕಾರಿಯಾಗಿದೆ ಎಂದರು. ಶ್ರೀ.ಕ್ಷೇ.ಧ.ಗ್ರಾ.ಯೋ. ವಿವಿಧ ಕಾರ್ಯಕ್ರಮಗಳಲ್ಲಿ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಇಂದು ಮಹಿಳೆಯರಿಗೆ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದರು. ಬದಕಿನ ಜಂಜಾಟದ ನಡುವೆ ಮನಸ್ಸಿಗೆ ಖುಷಿ ತರುವ ಜಾನಪದ ಸಂಪತ್ತನ್ನು ಬೆಳೆಸುವ ಅಥವಾ ಪೋಷಿಸುವ ಮನಸ್ಸುಗಳು ಬರಬೇಕಾಗಿದೆ ಎಂದರು. ಅದೇ ರೀತಿ ಸಂಘಗಳು ತಾನು ಹಾಗು ಕುಟುಂಬಗಳ ಅಭಿವೃದ್ದಿಗೆ ಮಾತ್ರ ಸೀಮಿತವಾಗದೇ ಎಳೆಯ ಮಕ್ಕಳ ಮೇಲೆ ನಡೆಸುವ ಕ್ರೌರ್ಯ, ದಬ್ಬಾಳಿಕೆ ಅತ್ಯಾಚಾರದಂತ ಪಿಡುಗಿನ ಬಗ್ಗೆ ಸಿಡಿದೇಳಬೇಕು ಇತ್ತೀಚಿಗಿನ ವಿಜಯಯಪುರದ ವಿಧ್ಯಾರ್ಥಿನಿ ದಾನಮ್ಮ ಮೇಲೆ ನಡೆದ ಅತ್ಯಾಚಾರ ಕೊಲೆ ಮಾಡಿದ ಕಿಡಿಗೇಡಿಗಳ ವಿರುದ್ದ ಮಹಿಳೆಯರು ಸಂಘಟಿತ ದ್ವನಿಯಾಗಿ ನಿಂತಾಗ ಸಂಘಗಳ ರಚನೆಗೆ ಸಾರ್ಥಕವೆನಿಸಿಕೊಳ್ಳುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ತಾಲ್ಲೂಕು ಸಮನ್ವಯಾಧಿಕಾರಿ ಶ್ಯಾಲಿನಿ, ಪುರಸಭಾ ವಲಯ ಮೇಲ್ವಿಚಾರಕ ಶೇಖರ್‍ ಶೆಟ್ಟಿ, ಮಹಿಳಾ ಸಂಘದ ಒಕ್ಕೂಟಗಳ ಅಧ್ಯಕ್ಷರಾದ ನಾಗವೇಣಿ ರೆಡ್ಡಿ, ಉಮಾದೇವಿ, ಹೊಗಳಗೆರೆ ಸುನಂದಮ್ಮ, ಕಾರಂಗಿ ಆಂಜಮ್ಮ, ಎನ್‍ ಆರ್‍ ಎಲ್‍ ಎಂ ಜಿಲ್ಲಾ ಸಂಚಾಲಕ ಸಿ.ಕೆ.ಶಿವಕುಮಾರ್, ವಲಯ ಮೇಲ್ವಿಚಾರಕ ವಿಶ್ವನಾಥ್, ಜಗದಾಂಬಿಕಾ ಇತರರು ಉಪಸ್ಥಿತರಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಧನ್ಯಶ್ರೀ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ಸಂತೋಷ್ ಬಂಧನ!

ಮುಂದಿನ ಸುದ್ದಿ »

ತಾಕತ್ತಿದ್ದರೆ ಆರೆಸ್ಸೆಸ್, ಬಜರಂಗದಳ, ಶ್ರೀರಾಮಸೇನೆಯನ್ನು ನಿಷೇಧಿಸಲಿ: ಮುತಾಲಿಕ್ ಚಾಲೆಂಜ್!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×