Thursday August 18 2016

Follow on us:

Contact Us

ಗೋರಕ್ಷಣೆ ಹೆಸರಿನಲ್ಲಿ ಪ್ರವೀಣ್ ಪೂಜಾರಿ ಹತ್ಯೆ: ಎಸ್ ಡಿ ಪಿ ಐ ಖಂಡನೆ

ನ್ಯೂಸ್ ಕನ್ನಡ ವರದಿ-ಮಂಗಳೂರು: ಬ್ರಹ್ಮಾವರ ಸಮೀಪದ ಕೊಕ್ಕರ್ಣೆ ಎಂಬಲ್ಲಿ ಜಾನುವಾರು ಸಾಗಾಟದ ಆರೋಪ ಹೊರಿಸಿ ಹಿಂದೂ ಜಾಗರಣೆ ವೇದಿಕೆಯ ಸುಮಾರು 30 ಮಂದಿ ಗೂಂಡಾಗಳು ಪ್ರವೀಣ್ ಪೂಜಾರಿ ಎಂಬ ಯುವಕನನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ ಖಂಡಿಸಿದೆ.

ಕಳೆದ ಹಲವಾರು ದಿನಗಳಿಂದ ದೇಶಾದ್ಯಂತ ಗೋರಕ್ಷಣೆಯ ಹೆಸರಿನಲ್ಲಿ ಹಿಂದುತ್ವ ಫ್ಯಾಶಿಸ್ಟ್ ಶಕ್ತಿಗಳು ದಲಿತರ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಮೇಲೆ ನಿರಂತರವಾಗಿ ಅಮಾನುಷವಾದ ದಾಳಿ ನಡೆಯುತ್ತಿದ್ದು, ಈದೀಗ ನಮ್ಮ ರಾಜ್ಯದಲ್ಲಿಯು ಗೋರಕ್ಷಣೆಯ ವಿಚಾರವನ್ನು ಮುಂದಿಟ್ಟುಕೊಂಡು ಹಿಂದುತ್ವದ ಶಕ್ತಿಗಳು ದಾಳಿ ನಡೆಸುತ್ತಿರುವಾಗ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಇದನ್ನು ತಡೆಯಲು ಸಾಧ್ಯವಾಗದೇ ಇರುವುದು ದುರಂತವಾಗಿದೆ. ಚಿಕ್ಕಮಂಗಳೂರಿನ ಕೊಪ್ಪಳದಲ್ಲಿ ದನದ ಮಾಂಸ ಮನೆಯಲ್ಲಿದೆ ಎಂದು ಹೇಳಿ ದಲಿತರ ಮೇಲೆ ದಾಳಿ ನಡೆಸಿದರು.

ಅದೇ ಶಕ್ತಿಗಳು ಬ್ರಹ್ಮಾವರದ ಕೊಕ್ಕರ್ಣೆಯಲ್ಲಿ ಜಾನುವಾರು ಸಾಗಾಟದ ಆರೋಪ ಹೊರಿಸಿ ಮೂವರು ಯುವಕರ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಸಿ ಅದರಲ್ಲಿ ತೀವ್ರವಾಗಿ ಹಲ್ಲೆಗೊಳಗಾದ ಪ್ರವೀಣ್ ಪೂಜಾರಿ ಸಾವನ್ನಪ್ಪಿದ್ದಾನೆ. ಈ ರೀತಿ ದಿನಂಪ್ರತಿ ಹಿಂದುತ್ವ ಶಕ್ತಿಗಳು ವ್ಯಾಪಕವಾಗಿ ಗೋರಕ್ಷಣೆಯ ಹೆಸರಿನಲ್ಲಿ ಹತ್ಯೆಗಳು ದೌರ್ಜನ್ಯಗಳು ನಡೆಸಿ ಕಾನೂನನ್ನು ಕೈಗೆತ್ತಿಗೊಂಡಿರುವಾಗ ಇದನ್ನು ತಡೆಯಬೇಕಾದ ಸರಕಾರಗಳು ಮತ್ತು ಪೊಲೀಸ್ ಇಲಾಖೆ ಮೌನವಾಗಿರುವುದು ವಿಪರ್ಯಾಸವಾಗಿದೆ. ಈ ರೀತಿಯ ಗೂಂಡ ಪ್ರವೃತ್ತಿಯ ಹಿಂದುತ್ವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸಬೇಕೆಂದು ಎಸ್ ಡಿ ಪಿ ಐ ದ.ಕ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸೌದಿ ಅರೇಬಿಯಾದಲ್ಲಿ ಆ.19 ರಂದು ಇಂಡಿಪೆಂಡೆನ್ಸ್ ಡೇ ಸ್ಪೋರ್ಟ್ಸ್ ಮೀಟ್

ಮುಂದಿನ ಸುದ್ದಿ »

ಕಾನೂನು ಉಲ್ಲಂಘಿಸಿ ಬಾರ್ ಗೆ ಪರವಾನಿಗೆ; ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ

ಸಿನೆಮಾ

 • ಮದುವೆಯಾಗಲಿದ್ದಾರೆ ಲೂಸ್ ಮಾದ ಯೋಗೀಶ್

  May 23, 2017

  ಬೆಂಗಳೂರು: ಸ್ಯಾಂಡಲ್‍ವುಡ್‍ನ ಲೂಸ್ ಮಾದ ಖ್ಯಾತಿಯ ಯೋಗೀಶ್ ಗೃಹಸ್ಥಾಶ್ರಮಕ್ಕೆ ಸೇರಲು ಸಜ್ಜಾಗಿದ್ದಾರೆ. ಬಾಲ್ಯದಗೆಳತಿ, ಬಹುರಾಷ್ಟ್ರಿಯ ಕಂಪನಿಯ ಉದ್ಯೋಗಿ ಸಾಹಿತ್ಯ ಅರಸ್ ಅವರೊಂದಿಗೆ ಯೋಗೀಶ್ ಸಪ್ತಪದಿ ತುಳಿಯಲಿದ್ದಾರೆ. ಸಾಹಿತ್ಯ ಅರಸ್ ಯೋಗಿ 2 ವರ್ಷದಿಂದ ಲವ್ ಮಾಡುತ್ತಿದ್ದು, ಸದ್ಯದಲ್ಲೇ ...

  Read More
 • ಮಕ್ಕಳಿಗಾಗಿ ಮತ್ತೆ ಒಂದಾದ ಹೃತಿಕ್ ರೋಶನ್-ಸೂಸೇನ್

  May 23, 2017

  ನ್ಯೂಸ್ ಕನ್ನಡ-(23.5.17):ಬಾಲಿವುಡ್‌ನ ಸ್ನೇಹಪರ ದಂಪತಿ ಎಂದೇ ಗುರುತಿಸಿಕೊಂಡಿದ್ದ ಹೃತಿಕ್‌ ರೋಷನ್ ಮತ್ತು ಸೂಸೇನ್ ಖಾನ್ ಅವರು ವೈವಾಹಿಕ ವಿಚ್ಛೇದನ ಪಡೆದಾಗ ಎಲ್ಲರೂ ನಿಬ್ಬೆರಗಾಗಿದ್ದರು. ಸೂಸೇನ್ ಅಂತೂ ಪತಿಯ ಬಗ್ಗೆ ಖಾರವಾಗಿ ಮಾತನಾಡಿದ್ದರು. ಆದರೆ ವಿಚ್ಛೇದನ ಪಡೆದ ಮೇಲೂ ...

  Read More
 • ಸೀರಿಯಲ್ ಗಳಲ್ಲಿ ಅವಕಾಶ ಸಿಗದೇ ಪೈಂಟರ್ ಆದ ಖ್ಯಾತ ನಟ!

  May 22, 2017

  ನ್ಯೂಸ್ ಕನ್ನಡ ವರದಿ-(22.5.17)ಇಸ್ಲಾಮಾಬಾದ್: ಪಾಕ್ ನಟ ಶಾಹಿದ್ ನಸೀಬ್  ಕೆಲಸವಿಲ್ಲದೆ ಗೋಡೆಗೆ ಬಣ್ಣಬಳಿಯುವ ಕೆಲಸ ಮಾಡುತ್ತಿದ್ದಾರೆ. ಹಲವಾರು ಟಿವಿ ಸೀರಿಯಲ್‍ಗಳಲ್ಲಿ ನಟಿಸಿರುವ ಪ್ರತಿಭಾಂತ ನಟ ಈತ. ಈಗ ಒಂದು ಹೊತ್ತಿನ ಕೂಲಿಗಾಗಿ ಗೋಡೆಗೆ ಪೈಂಟ್ ಬಳಿಯುತ್ತಿದ್ದಾರೆ. ದುಲ್ಲಾರಿ, ...

  Read More
 • 80ರ ಹರೆಯದ ವೃದ್ಧೆಯ ಪಾತ್ರದಲ್ಲಿ ನಟಿಸಲಿರುವ ಕಂಗನಾ ರಣಾವತ್!

  May 20, 2017

  ನ್ಯೂಸ್ ಕನ್ನಡ ವರದಿ-(20.5.17): ನಟಿ ಕಂಗನಾ ಅವರು ತಮ್ಮ ಸ್ವಂತ ನಿರ್ದೇಶನದ “ತೇಜು” ಸಿನೆಮಾದಲ್ಲಿ ವೃದ್ಧೆ ಮಹಿಳೆಯ ಪಾತ್ರ ನಿರ್ವಹಿಸುವುದಾಗಿ ಘೋಷಿಸಿದ್ದಾರೆ. “ನನ್ನ ಮೊದಲ ನಿರ್ದೇಶನದ ‘ತೆಜು’ ಚಿತ್ರದಲ್ಲಿ ನಾನು 80 ವರ್ಷ ವಯಸ್ಸಿನ ಮಹಿಳೆ ಪಾತ್ರವಹಿಸುತ್ತೇನೆ. ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×