Saturday January 9 2016

Follow on us:

Contact Us
rang

ಕಾರವಾರ: ರಂಗು ರಂಗಿನ ‘ ರಂಗೋಲಿ ಜಾತ್ರೆ’

ನ್ಯೂಸ್ ಕನ್ನಡ ವರದಿ – ಕಾರವಾರ: ಜಾತ್ರೆ-ಉತ್ಸವಗಳು ಎಂದರೆ ಸಾಮಾನ್ಯವಾಗಿ ದೇವರ ಹೆಸರಿನಲ್ಲಿ ನಡೆಯುತ್ತವೆ. ಅಲ್ಲಿ ದೇವರಿಗೆ ಹರಕೆ ಸಲ್ಲಿಸಿ ಕೃತಾರ್ಥವಾಗುವುದು. ಉಳಿದಂತೆ ತರಾವರಿ ಆಟಿಕೆ ಸಾಮಗ್ರಿಗಳು ಹಾಗೂ ಸಿಹಿತಿನಿಸುಗಳ ಅಂಗಡಿ ಮಳಿಗೆಗಳು. ಆದರೆ ನಗರದಲ್ಲಿ ಶುಕ್ರವಾರ ನೆರವೇರಿದ ಮಾರುತಿ ದೇವರ ಜಾತ್ರೆಯು ಉಳಿದೆಲ್ಲ ಜಾತ್ರೆಗಿಂತ ತುಸು ಭಿನ್ನ ಎನ್ನಬಹುದು.

ಈ ಜಾತ್ರೆಯನ್ನು ರಂಗೋಲಿಯ ಜಾತ್ರೆ ಎಂದೆ ಕರೆಯಲಾಗುತ್ತದೆ. ದೇವರ ಪೂಜೆ ವಿಧಿವಿಧಾನಗಳು ಉಳಿದ ಜಾತ್ರೆಗಳಂತೆ ನಡೆಯುತ್ತವಾದರೂ ಇಲ್ಲಿ ರಂಗೋಲಿದ್ದೇ ವಿಶೇಷ ಮೆರಗು. ಹಾಗಾಗಿ ಚಿಕ್ಕ ಮಕ್ಕಳಾದಿಯಿಂದ ಹಿಡಿದು ದೊಡ್ಡವರು ಕರೆಯುವುದು ಇದನ್ನು ರಂಗೋಲಿ ಜಾತ್ರೆ ಎಂದು. ಅಷ್ಟರ ಮಟ್ಟಿಗೆ ಈ ಜಾತ್ರೆ ಜನಜನಿತವಾಗಿದೆ.

ಈ ರಂಗೋಲಿಯ ಜಾತ್ರೆ ಇಂದು ನಿನ್ನೆಯದಲ್ಲ. ನಾಲ್ಕು ದಶಕಗಳ ಇತಿಹಾಸವಿದೆ. ವರ್ಷದಿಂದ ವರ್ಷಕ್ಕೆ ಇದು ತನ್ನ ಪ್ರಚಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಹಾಗಾಗಿ ಎರಡು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಕಲಾವಿದರ ಕೈಯಲ್ಲಿ ಅರಳುವ ಹಲವು ರೀತಿಯ ವೈವಿಧ್ಯಮಯವಾದ ಕಲಾಕೃತಿಗಳ ವೀಕ್ಷಣೆಗೆ ಇಲ್ಲಿ ಜನರ ನೂಕು ನುಗ್ಗಲು ನಡೆಯುತ್ತದೆ.

rang2

ಕಾರವಾರ ಪಟ್ಟಣದ ಮಾರುತಿ ಗಲ್ಲಿ, ಬ್ರಾಹ್ಮಣ ಗಲ್ಲಿ, ಹೆಸ್ಕಾಂ ರಸ್ತೆ ಹಾಗೂ ಸಬನೀಸ ಛಾಳಗಳ ರಸ್ತೆಗಳು ವಾಹನ ಓಡಾಟದಿಂದ ಮುಕ್ತಗೊಂಡು ಜನರ ಓಡಾಟದಿಂದ ತುಂಬಿರುತ್ತವೆ. ಸಂಜೆಯಾಗುತ್ತಿದ್ದಂತೆ ಈ ರಸ್ತೆಗಳ ಇಕ್ಕೆಲದಲ್ಲಿರುವ ಮನೆಗಳು ದೀಪಾಲಂಕಾರದಿಂದ ಶೃಂಗಾರಗೊಂಡು ಮನೆಯ ಮುಂದೆ ಬಣ್ಣ ಬಣ್ಣದ ಹಿಟ್ಟಿನಿಂದ ಕಲಾವಿದರ ಕಲ್ಪನೆಗೆ ತಕ್ಕಂತೆ ಕಲಾಕೃತಿಗಳು ಅರಳಿ ನಿಲ್ಲುತ್ತವೆ.

ಎರಡು ದಿನಗಳ ಕಾಲ ರಂಗೋಲಿಯ ಹೊಸ ಲೋಕವೇ ತೆರೆದುಕೊಂಡಂತೆ ಕಾಣಿಸುತ್ತದೆ. ರಾತ್ರಿ ಹನ್ನೊಂದರವರೆಗೂ ಈ ರಸ್ತೆಗಳಲ್ಲಿ ಜನಜಂಗುಳಿಯ ಓಡಾಟ ನಡೆದೆ ಇರುತ್ತದೆ. ಇದರ ಜೊತೆಗೆ ಮಾರುತಿ ದೇವರ ಹರಕೆ ಪೂಜೆ ಸಲ್ಲಿಕೆ ಫಲಾವಳಿಗಳ ಲೀಲಾವುಗಳು ಇನ್ನೊಂದು ಕಡೆಯಿಂದ ಸಾಂಗವಾಗಿ ಮುಂದುರಿಯುತ್ತದೆ.

rang3

ಏಕದಳ-ದ್ವಿದಳ ಧಾನ್ಯಗಳು, ಹೂವು ಎಲೆಗಳು ಮತ್ತು ಬಣ್ಣ ಬಣ್ಣದ ಪುಡಿಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಶೈಲಿಯ ಚುಕ್ಕಿ ರಂಗೋಲಿಯಿಂದ ಹಿಡಿದು ಹಳ್ಳಿಯ ಚಿತ್ರಣವನ್ನು ನೀಡುವ ಕಲಾಕೃತಿಗಳು, ವ್ಯಕ್ತಿ ಚಿತ್ರಣಗಳು, ಪ್ರಸ್ತುತ ವಿದ್ಯಮಾನದಲ್ಲಿರುವ ಚಿತ್ರ ನಟರುಗಳು, ರಾಜಕೀಯ ವ್ಯಕ್ತಿಗಳು ಕ್ರಿಕೆಟ್ ಆಟಗಾರರು, ದೇವರ ಕಲಾಕೃತಿಗಳು ಕಲಾಕರರ ಕಲ್ಪನೆಯಲ್ಲಿ ಮೂಡಿದಂತವುಗಳು ಇಲ್ಲಿ ಬಣ್ಣದ ಹಿಟ್ಟಿನಲ್ಲಿ ವೈವಿಧ್ಯಮಯ ಕಲೆಯ ಚಿತ್ತಾರವಾಗಿ ಅರಳುತ್ತವೆ.

ಇಲ್ಲಿ ರಂಗೋಲಿಯನ್ನು ಬಿಡಿಸುವವರು ಕೇವಲ ಈ ಭಾಗದ ಕಲಾಕಾರರು ಮಾತ್ರವಲ್ಲದೆ ತಾಲೂಕಿನ ಎಲ್ಲ ಆಸಕ್ತ ಕಲಾವಿದರಿಗೂ ತಮ್ಮಲ್ಲಿರುವ ಕಲೆಯನ್ನು ಅಭಿವ್ಯಕ್ತಗೊಳಿಸಲು ಮುಕ್ತ ಅವಕಾಶವಿದೆ. ಅಲ್ಲಿರುವ ಮನೆಗಳ ಜನರೇ ಕಲಾಕಾರರನ್ನು ಕರೆದು ತಮಗಿಷ್ಟವಾದ ಕಲೆಯನ್ನು ತಮ್ಮ ಮನೆಯ ಮುಂದೆ ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತಾರೆ. ಹಾಗಾಗಿ ಈ ಜಾತ್ರೆಯಲ್ಲಿ ತೆರೆಯಮರೆಯಲ್ಲಿರುವ ಕಲಾಕಾರರು ತಮ್ಮ ಪ್ರತಿಭೆಗಳೊಂದಿಗೆ ಬೆಳಕಿಗೆ ಬರುತ್ತಾರೆ.

nksbkslu

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಾರವಾರ: ಒಕ್ಕಲೆಬ್ಬಿಸುವಿಕೆ ಖಂಡಿಸಿ ಶಾಸಕ ಸೈಲ್ ಮನೆಗೆ ಮುತ್ತಿಗೆ

ಮುಂದಿನ ಸುದ್ದಿ »

ಸುಳ್ಯ: ಸ್ನೇಹ ಶಾಲೆಯಲ್ಲಿ ಬಯಲು ಸೂರ್ಯ ಆಲಯ ಸ್ಥಾಪನೆ

ಸಿನೆಮಾ

 • marali

  “ಮರಳಿ ಮನೆಗೆ” ಧ್ವನಿಸುರುಳಿ ಬಿಡುಗಡೆ ಸಂಭ್ರಮ

  February 24, 2017

  ನ್ಯೂಸ್ ಕನ್ನಡ(24-2-2017): ಖ್ಯಾತ ಬರಹಗಾರ, ಚಿಂತಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ನಿರ್ದೇಶನದ ಚೊಚ್ಚಲ ಚಲನಚಿತ್ರ “ಮರಳಿ ಮನೆಗೆ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯೋಗೇಶ್ ಮಾಸ್ಟರ್ ನಾದಬ್ರಹ್ಮ ಹಂಸಲೇಖ ಅವರು “ದೇಸಿ ಸಂಗೀತದ ...

  Read More
 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×