Wednesday January 11 2017

Follow on us:

Contact Us
sethuve shankusthapane1

ಸೇತುವೆ ನಿರ್ಮಾಣಕ್ಕೆ ಚಾಲನೆ: ಇಚ್ಛಾಶಕ್ತಿಯಿದ್ದಾಗ ಅಭಿವೃದ್ಧಿ ಕಾರ್ಯ ಸುಗಮ – ಸಚಿವ ರೈ

ನ್ಯೂಸ್ ಕನ್ನಡ ವರದಿ(11.01.2017)-ಸುಳ್ಯ: ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ 4 ಕೋಟಿ 90 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸೇತುವೆ ಕಾಮಗಾರಿಗೆ ಚಾಲನೆ ದೊರೆತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೂತನ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಬೇಕು. ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಗ್ರಾಮ, ತಾಲೂಕಿನ ಅಭಿವೃದ್ಧಿ ಕೆಲಸಮಾಡುವ ಹಂಬಲ ಮತ್ತು ಜನರ ಮೇಲಿನ ಅಭಿಮಾನವಿದ್ದರೆ ಯಾವ ಕೆಲಸವನ್ನಾದರು ಮಾಡಲು ಸಾಧ್ಯ ಎಂದು ಅವರು ಹೇಳಿದರು.

ಮಹಿಳಾ ಪ್ರತಿನಿಧಿಯಾಗಿ ದಿವ್ಯಪ್ರಭಾ ಚಿಲ್ತಡ್ಕ ಅವರು ಈ ಭಾಗದ ಜನತೆಗೆ ಬಹುಕಾಲದ ಬೇಡಿಕೆಯಾದ ಜನಮನಗಳ ಸಂಪರ್ಕದ ಕೊಂಡಿಯಾದ ಸೇತುವೆ ನಿರ್ಮಿಸಲು ಪ್ರಯತ್ನಿಸಿ 4.90 ಕೋಟಿ ರೂ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಜನರ ಅಪೇಕ್ಷೆಗೆ ಸರಿಯಾಗಿ ಕೆಲಸ ಮಾಡಬೇಕು. ಸಂಪರ್ಕ ಸೇತುವೆ ಈ ಭಾಗದ ಜನರಿಗೆ ವರದಾನ ಆಗಲಿದೆ. ಜನ ಹಿತ ಕಾರ್ಯಕ್ರಮಗಳ ಮೂಲಕ ನಾಡಿನಲ್ಲಿ ಸಾಮಾಜಿಕ ಸಾಮರಸ್ಯ ಇದ್ದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಅಡಿಕೆ, ರಬ್ಬರ್ ಮುಂತಾದ ಕೃಷಿಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರಕಾರ ಇಲ್ಲಿಯ ವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ಸೇರಿ ಬೆಂಬಲ ಬೆಲೆಯ ನೀಡುವಂತಹದ್ದು. ಆದರೆ ಇಂದು ಕೇಂದ್ರದ ಅನುದಾನ ನಯಾಪೈಸೆ ಬಂದಿಲ್ಲ ಎಂದು ಸಚಿವ ರಮಾನಾಥ ರೈ ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು ಮಾತನಾಡಿ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಪೆಂಡಿಕ್ಸ್ ಇ ನಲ್ಲಿ 4.95 ಕೋಟಿ ರೂ. ಅನುದಾನವನ್ನು ಎಲ್ಲರ ಸಹಕಾರದಿಂದ ತರಿಸಲು ಕಾರಣವಾಯಿತು. ನನಗೆ ನಾನು ಅನುದಾನ ತರಿಸಿದ್ದೇನೆ ಎಂದು ಹೆಮ್ಮೆ ಇಲ್ಲ. ಇಂದು ವೃತ್ತಿ ಧರ್ಮದಲ್ಲಿ ತೃಪ್ತಿ ಕಂಡಿದ್ದೇನೆ. ಸುಳ್ಯ ತಾಲೂಕಿನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಮೂಲಭೂತ ಸೌಲಭ್ಯಕ್ಕಾಗಿ ಪಕ್ಷಾತೀತವಾಗಿ ಶ್ರಮಿಸಿದಾಗ, ಗ್ರಾಮ ಅಭಿವೃದ್ಧಿ ಆದಾಗ ದೇಶ ಅಭಿವೃದ್ಧಿಯಾಗುತ್ತದೆ ಎಂದರು.

ಸುಳ್ಯ ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಾತನಾಡಿ, ತಾಲೂಕಿನ ಕೃಷಿಕರು ಅಡಿಕೆ ಇಳುವರಿ ಇಲ್ಲದೆ, ಬೆಂಬಲ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಅವರನ್ನು ಕೈ ಹಿಡಿದು ಎತ್ತವ ಕೆಲಸ ಉಸ್ತುವಾರಿ ಸಚಿವರ ಮೂಲಕ ಆಗಬೇಕು ಎಂದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ರಾಜೀವ ಗಾಂಧಿ ಆರೋಗ್ಯ ವಿ.ವಿ. ಸಿಂಡಿಕೇಟ್ ಸದಸ್ಯ ಡಾ.ರಘು, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸುಂದರ ನಾಯ್ಕ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂಶುದ್ದೀನ್, ಎನ್.ಎ.ರಾಮಚಂದ್ರ, ಸೇತುವೆ ನಿರ್ಮಾಣ ಸಮಿತಿಯ ಅಧ್ಯಕ್ಷ ಉದಯಕುಮಾರ್, ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಂಚಡ್ಕ, ತಾಲೂಕು ಪಂಚಾಯತ್ ಸದಸ್ಯರಾದ ತೀರ್ಥರಾಮ ಜಾಲ್ಸೂರು, ಪದ್ಮಾವತಿ ಕುಡೆಕಲ್ಲು, ಅಶೋಕ ನೆಕ್ರಾಜೆ, ರಾಜ್ಯ ಕೆಫೆಕ್ ನಿರ್ದೇಶಕ ಪಿ.ಎ.ಮಹಮ್ಮದ್, ಮಾಜಿ ಮಂಡಲ ಉಪ ಪ್ರಧಾನ ಬಾಪೂಸಾಹೇಬ್, ತಹಸೀಲ್ದಾರ್ ಎಂ.ಎಂ.ಗಣೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ಆಲೆಟ್ಟಿ ಗ್ರಾ.ಪಂ. ಉಪಾಧ್ಯಕ್ಷೆ ಸುಂದರಿ, ಸದಸ್ಯರಾದ ಯೂಸುಫ್ ಅಂಜಿಕಾರ್, ಜಯಲತಾ ಅರಂಬೂರು, ಜಯಂತಿ ಕೂಟೇಲು, ಪುಷ್ಪಾವತಿ, ಕಾಂಗ್ರೆಸ್ ಮುಖಂಡ ಸತ್ಯಕುಮಾರ್ ಆಡಿಂಜ ಅತಿಥಿಗಳಾಗಿ ಭಾಗವಹಿಸಿದರು. ವೇದಿಕೆಯಲ್ಲಿ ಲೋಕೋಪಯೋಗಿ ಇಲಾಖೆಯ ಜಿಲ್ಲಾ ಇಂಜಿನಿಯರ್ ಕಾಂತರಾಜ್, ಸುಳ್ಯ ಇಲಾಖೆಯ ಇಂಜಿನಿಯರ್ ಸಂದೇಶ್ ಇದ್ದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಪೆಂಡಿಕ್ಸ್ ಇ ನಲ್ಲಿ ಸೇತುವೆ ನಿರ್ಮಾಣಕ್ಕೆ 4.95 ಕೋಟಿ ರೂ. ಅನುದಾನವನ್ನು ತರಿಸಲು ಕಾರಣಕರ್ತರಾದ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಾಪ್ರಭಾ ಗೌಡ ಚಿಲ್ತಡ್ಕ ಅವರನ್ನು ಗ್ರಾಮಸ್ಥರ ಪರವಾಗಿ ಪೇಟತೊಟ್ಟು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸಣ್ಣೇಗೌಡ ಸ್ವಾಗತಿಸಿ, ಗ್ರಾಮ ಲೆಕ್ಕಿಗ ಮರಿಯಪ್ಪ ವಂದಿಸಿದರು. ವೆಂಕಟರಮಣ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು.

nkdksgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರ ದಾರುಣ ಸಾವು

ಮುಂದಿನ ಸುದ್ದಿ »

ಕೋಟತಟ್ಟು ನಗದು ರಹಿತ ಗ್ರಾಪಂ: ಜ.15ಕ್ಕೆ ಸಚಿವ ರಮೇಶ್ ಕುಮಾರ್‍ ರಿಂದ ಚಾಲನೆ

ಸಿನೆಮಾ

 • marali

  “ಮರಳಿ ಮನೆಗೆ” ಧ್ವನಿಸುರುಳಿ ಬಿಡುಗಡೆ ಸಂಭ್ರಮ

  February 24, 2017

  ನ್ಯೂಸ್ ಕನ್ನಡ(24-2-2017): ಖ್ಯಾತ ಬರಹಗಾರ, ಚಿಂತಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ನಿರ್ದೇಶನದ ಚೊಚ್ಚಲ ಚಲನಚಿತ್ರ “ಮರಳಿ ಮನೆಗೆ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯೋಗೇಶ್ ಮಾಸ್ಟರ್ ನಾದಬ್ರಹ್ಮ ಹಂಸಲೇಖ ಅವರು “ದೇಸಿ ಸಂಗೀತದ ...

  Read More
 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×