Tuesday January 10 2017

Follow on us:

Contact Us
protest

ಮುನ್ಸೂಚನೆ ನೀಡದೆ ಶುಲ್ಕ ಏರಿಕೆ: ಪ್ರಾದೇಶಿಕ ಸಾರಿಗೆ ಇಲಾಖೆಯ ವಿರುದ್ಧ ಪ್ರತಿಭಟನೆ

ನ್ಯೂಸ್ ಕನ್ನಡ ವರದಿ(10.01.2017)-ಕಾರವಾರ: ಪ್ರಾದೇಶಿಕ ಸಾರಿಗೆ ಇಲಾಖೆಯು ಯಾವುದೇ ಮುನ್ಸೂಚನೆ ನೀಡದೆ ಶುಲ್ಕ ಹೆಚ್ಚಿಸಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಉಂಟು ಮಾಡಿದೆ ಎಂದು ವಿವಿಧ ಸಂಘಟನೆಯ ಪದಾಧಿಕಾರಿಗಳು ನಗರದ ಆರ್ ಟಿ ಓ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಪ್ರಾದೇಶಿಕ ಕಚೇರಿಯ ಎದರು ಪ್ರತಿಭಟನೆ ನಡೆಸಿದ ಅವರು ಶನಿವಾರದಿಂದ ಶುಲ್ಕವನ್ನು ಹೆಚ್ಚಿಸಲಾಗಿದೆ. ಆದರೆ ಶುಲ್ಕ ನವೀಕರಣಗೊಂಡ ಸಾಫ್ಟ್ ವೇರ್ ಇಲ್ಲದ ಕಾರಣ ಯಾವುದೇ ರಸೀದಿಯನ್ನು ಆದಿನ ನೀಡಲಾಗಿಲ್ಲ. ಆದ್ದರಿಂದ ಬಾಡಿಗೆ ವಾಹನ ಚಲಾಯಿಸುವ ಜನರು ತಮ್ಮ ವಾಹನಗಳಿಗೆ ಬಾಡಿಗೆ ಬಂದರೂ ಅದನ್ನು ಬಿಟ್ಟು ಕೊಡುವ ಪರಿಸ್ಥಿತಿ ಎದುರಾಗಿದೆ. ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ, ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಕಾರ್ಯಕ್ರಮಗಳಿರುತ್ತವೆ. ದುಡಿಮೆಯು ಅನಿವಾರ್ಯವಾಗಿರುವ ಕಾರಣ ಹಲವು ಚಾಲಕರು ನವೀಕರಣವಿಲ್ಲದಿದ್ದರೂ ತಮ್ಮ ಮ್ಯಾಕ್ಸಿಕ್ಯಾಬ್, ಆಟೋ ಮುಂತಾದ ವಾಹನಗಳನ್ನು ಅಪಾಯವಿದ್ದರೂ ಚಲಾಯಿಸಿದ್ದಾರೆ. ಪ್ರಯಾಣದಲ್ಲಿ ಏನಾದರು ಅವಘಡ ಸಂಭವಿಸಿದರೆ ಅದಕ್ಕೆ ಅವರೇ ಜವಾಬ್ದಾರರಾಗಿ ಬೀದಿ ಪಾಲಾಗುವ ಸಂಭವವಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಡಿಗೆ ವಾಹನಗಳ ಮಾಲಕರು ಒಂದು ದಿನದ ದುಡಿಮೆ ಇಲ್ಲದಿದ್ದರೂ ಅನೇಕ ಕಷ್ಟ ಪಡಬೇಕಾಗುತ್ತದೆ. ಅವರಿಗೆ ಬಿ.ಪಿ.ಎಲ್. ಕಾರ್ಡ್ ಕೂಡ ಇಲ್ಲದಿರುವುದರಿಂದ ಯಾವುದಾದರೂ ಕಾಯಿಲೆಗೆ ತುತ್ತಾದರೆ ಆಸ್ಪತ್ರೆಯ ಖರ್ಚನ್ನು ಅವರೇ ಭರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸರಕಾರವು ಅವರಿಗೆ ಆರ್ಥಿಕ ನೆರವು ನೀಡುವ ಬದಲು ಶುಲ್ಕವನ್ನು ಏರಿಸಿದ್ದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದರು. ಶುಲ್ಕ ಏರಿಕೆಯಿಂದ ಜನಸಾಮಾನ್ಯರಿಗೆ ಹಾಗೂ ಬಾಡಿಗೆ ವಾಹನ ನಡೆಸುವುವರಿಗೆ ವಿಪರೀತ ತೊಂದರೆ ಉಂಟಾಗಿದ್ದು ಹಿಂದಿನ ಶುಲ್ಕವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ಶುಲ್ಕ ಏರಿಕೆ ಬಗ್ಗೆ ಮೊದಲೇ ವಿಚಾರ ತಿಳಿಸುವುದು ಸಾಮಾನ್ಯವಾದ ವಿಷಯ. ಆದರೆ ಇಲ್ಲಿ ಶುಲ್ಕವನ್ನು ಡಿ. 29ರಿಂದಲೇ ಹೆಚ್ಚು ಮಾಡಿರುವ ಆದೇಶವನ್ನು ಜ.7 ರಂದು ಪ್ರಕಟಿಸಿ ಈಗಾಗಲೇ ಪಾವತಿಸಿರುವ ಶುಲ್ಕಗಲಿದ್ದರೆ ಅವುಗಳ ವ್ಯತ್ಯಾಸ ಶುಲ್ಕವನ್ನು ಭರಿಸಬೇಕು ಎಂಬುದು ಯಾವ ನ್ಯಾಯ? ಎಂದು ಪ್ರಶ್ನಸಿದರು. ಬಹುಶಃ ಶುಲ್ಕ ಏರಿಕೆಯ ದಿನಾಂಕ ಜ.29 ಆಗುವ ಬದಲು ಡಿ.29 ಆಗಿ ಎನಾದರೂ ತಪ್ಪು ಮುದ್ರಣವಾಗಿದೆಯಾ ಎಂಬುದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗಣೇಶ ಟೆಂಪೊ ಯೂನಿಯನ್, ಸಾಯಿ ಟ್ಯಾಕ್ಸಿ ಯೂನಿಯನ್, ಭಾರತ್ ಆಟೋ ಯೂನಿಯನ್, ಜಿಲ್ಲಾ ವಿದ್ಯಾರ್ಥಿ ಘಟಕ, ಸಾಯಿ ಪಿಕ್‍ಅಪ್ ಸ್ಟ್ಯಾಂಡ್, ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಯಾವುದಕ್ಕೆ ಎಷ್ಟು ಏರಿಕೆ?

ಕಲಿಕಾ ಚಾಲನಾಪತ್ರಕ್ಕೆ(ಎಲ್.ಎಲ್.ಆರ್.) 30 ರೂ. ಇದ್ದದ್ದು 200 ರೂ. ಹೊಸ ಚಾಲನಾ ಪತ್ರಕ್ಕೆ(ಡಿ.ಎಲ್.) 250 ರೂ ನಿಂದ 300 ರೂ. ಅಂತಾರಾಷ್ಟ್ರೀಯ ಚಾಲನಾ ಪತ್ರ 500 ರಿಂದ 1000ಕ್ಕೆ, ಚಾಲನಾ ಪತ್ರ ನವೀಕರಣಕ್ಕೆ 50 ರಿಂದ 200 ರೂ ಹಾಗೂ ತಡವಾದರೆ ಇದ್ದ ದಂಡದ ಮೊತ್ತ 100 ರಿಂದ 300 ರೂ., ಚಾಲನಾ ತರಬೇತಿ ಶಾಲೆಗಳ ನವೀಕರಣಕ್ಕೆ 2500 ಇದದ್ದು 10000 ರೂ., ವಾಹನವನ್ನು ಸಾಲಕ್ಕೆ ಪಡೆದಿದ್ದರೆ ಅದನ್ನು ನೋಂದಾಯಿಸಲು ಈ ಮೊದಲು ಎಲ್ಲ ವಾಹನಗಳಿಗೂ 100 ರೂ ಇತ್ತು. ಆದರೆ ಈಗ ದ್ವಿಚಕ್ರ ವಾಹನಗಳಿಗೆ 500ರೂ, ತ್ರಿಚಕ್ರ ವಾಹನಗಳಿಗೆ 1500 ರೂ ಉಳಿದ ಇನ್ನಿತರ ಸಾರಿಗೆ ವಾಹನಗಳಿಗೆ 3000 ರೂಗಳನ್ನು ನಿಗದಿ ಪಡಿಸಲಾಗಿದೆ. ಸಾರಿಗೆ ವಾಹನಗಳಿಗೆ ಪ್ರತಿವರ್ಷ ಯೋಗ್ಯತೆ ಪ್ರಮಾಣಪತ್ರ ಪಡೆಯುವುದು ಅನಿವಾರ್ಯ ವಾಗಿರುತ್ತದೆ. ಇವುಗಳ ಶುಲ್ಕವನ್ನು ಕೂಡ ವಾಹನಗಳ ವರ್ಗಕ್ಕೆ ತಕ್ಕಂತೆ 3 ಪಟ್ಟು ಹೆಚ್ಚಿಸಲಾಗಿದೆ. ಉದಾ: ಆಟೋಗಳಿಗೆ 200ರೂ ಇದ್ದದ್ದು 400 ರೂ. ಹಾಗೆ ಮಧ್ಯಮ ಸರಕು ಸಗಣೆ ವಾಹನಗಳಿಗೆ 400 ರಿಂದ 1000 ಗಳಿಗೆ ಏರಿಸಲಾಗಿದೆ. ಹೊಸ ವಾಹನಗಳ ನೋಂದಣಿಯಲ್ಲಿ ಕೂಡ ಶುಲ್ಕ ಏರಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 60 ಇದ್ದದ್ದು 500 ರೂ., ಹಾಗೂ ಇನ್ನುಳಿದ ಇತರ ವಾಹನಗಳ ವರ್ಗಕ್ಕೆ ತಕ್ಕಂತೆ ಇದ್ದ 200, 300, 500 ಇದ್ದದ್ದು 1000 ರೂ. ಗಳಿಗೆ ಏರಿಕೆ ಮಾಡಲಾಗಿದೆ.

nksbkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಜ.13 ರಂದು ಕುಂಞಿಯಡ ಕೊಡವ ಜನಪದ ಸಾಂಸ್ಕೃತಿಕ ನಮ್ಮೆ

ಮುಂದಿನ ಸುದ್ದಿ »

ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ಸಮಾಲೋಚನಾ ಸಭೆ: ವರದಕ್ಷಿಣೆ ರಹಿತ ವಿವಾಹದ ಬಗ್ಗೆ ಹಲವು ನಿರ್ಣಯ

ಸಿನೆಮಾ

 • marali

  “ಮರಳಿ ಮನೆಗೆ” ಧ್ವನಿಸುರುಳಿ ಬಿಡುಗಡೆ ಸಂಭ್ರಮ

  February 24, 2017

  ನ್ಯೂಸ್ ಕನ್ನಡ(24-2-2017): ಖ್ಯಾತ ಬರಹಗಾರ, ಚಿಂತಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ನಿರ್ದೇಶನದ ಚೊಚ್ಚಲ ಚಲನಚಿತ್ರ “ಮರಳಿ ಮನೆಗೆ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯೋಗೇಶ್ ಮಾಸ್ಟರ್ ನಾದಬ್ರಹ್ಮ ಹಂಸಲೇಖ ಅವರು “ದೇಸಿ ಸಂಗೀತದ ...

  Read More
 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×