Wednesday January 11 2017

Follow on us:

Contact Us
PDP1

ಎಪ್ರಿಲ್ 13ರಂದು ಕೋಮುವಾದಿ ವಿರೋಧಿ ಸಂಗಮ: ಮಅದನಿ ಬಿಡುಗಡೆ ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯ-ಪಿಡಿಪಿ

ನ್ಯೂಸ್ ಕನ್ನಡ ವರದಿ(11.01.2017)-ಕಾಸರಗೋಡು:  ದಲಿತ, ಹಿಂದುಳಿದ, ಆದಿವಾಸಿ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಕೊನೆಗೊಳಿಸಬೇಕು. ಏಕರೂಪ ನಾಗರಿಕ ಸಂಹಿತೆಯನ್ನು  ಜಾರಿಗೊಳಿಸುವ ಹುನ್ನಾರದಿಂದ  ಕೇಂದ್ರ ಸರಕಾರ ಹಿಂದೆ ಸರಿಯಬೇಕು. ಬೆಂಗಳೂರು ಜೈಲ್ ನಲ್ಲಿ  ವಿಚಾರಾಣಾಧೀನ ಕೈದಿಯಾಗಿರುವ ಅಬ್ದುಲ್ ನಾಸರ್ ಮಅದನಿಯನ್ನು  ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಪಿಡಿಪಿ  ರಾಜ್ಯ ರಾಜ್ಯ ಸಮಿತಿ ನೇತೃತ್ವದಲ್ಲಿ  ನಡೆಯುತ್ತಿರುವ ಅಭಿಯಾನದ ಅಂಗವಾಗಿ ಎಪ್ರಿಲ್  13 ರಂದು  ಎರ್ನಾಕುಲಂನಲ್ಲಿ  ಕೋಮುವಾದಿ  ವಿರೋಧಿ ಸಂಗಮ ಆಯೋಜಿಸಲಿದೆ ಎಂದು ಪಿ ಡಿ ಪಿ ರಾಜ್ಯ ಕಾರ್ಯಾಧ್ಯಕ್ಷ  ಪೂಂದುರ ಸಿರಾಜ್  ಹೇಳಿದರು.

ಅವರು ಬುಧವಾರ ಕಾಸರಗೋಡಿನಲ್ಲಿ ಸುದ್ದಿಗಾರರೊಂದಿಗೆ  ಮಾತನಾಡುತ್ತಿದ್ದರು. ಅಬ್ದುಲ್ ಮಆದನಿ ಯವರ ಆರೋಗ್ಯ ಹದೆಗೆಟ್ಟಿದ್ದು, ಇದರಿಂದ ಕೇರಳ  ಸಚಿವರ ನಿಯೋಗ ವನ್ನು ಬೆಂಗಳೂರಿಗೆ ಕಳುಹಿಸಿ  ಚಿಕಿತ್ಸೆಯನ್ನು ಖಾತರಿಪಡಿಸಬೇಕು.  ಆಡಳಿತ ಎಲ್ ಡಿ ಎಫ್  ಸರಕಾರ ಮಅದನಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ವಿಚಾರಾಧೀನ ಕೈದಿಯಾಗಿರುವ ಮಅದನಿ ಯವರ ಬಿಡುಗಡೆಗೆ  ಕರ್ನಾಟಕ ಸರಕಾರ ಮತ್ತು ಎ ಐ ಸಿ ಸಿ ಮಧ್ಯಸ್ಥಿಕೆ  ವಹಿಸಬೇಕು ಎಂದು ಒತ್ತಾಯಿಸಿದ ಅವರು  ಚಲನ ಚಿತ್ರ ನಿರ್ದೇಶಕ ಕಮಲ್  ದೇಶ ಬಿಟ್ಟು ತೆರಳುವಂತೆ  ಹೇಳಿಕೆ ನೀಡಿರುವ  ಬಿಜೆಪಿ ಮುಖಂಡ ಎ.ಎನ್. ರಾಧಾಕೃಷ್ಣನ್ ವಿರುದ್ಧ ಕೇಸು ದಾಖಲಿಸಬೇಕು.  ನೋಟು ಅಮಾನ್ಯದಿಂದ  ಸಾಮಾನ್ಯ ಜನತೆ ಸಮಸ್ಯೆಗೆ ಸಿಲುಕಿದ್ದಾರೆ.  ಬ್ರಹತ್ ಉದ್ಯಮಿಗಳಿಗಾಗಿ  ನೋಟು ಅಮಾನ್ಯಗೊಳಿಸಿದ್ದು, ಇದರಿಂದ ಸಹಕಾರಿ ವಲಯ, ಕೃಷಿ ವಲಯ  ಸಂಪೂರ್ಣ ಅಧ:ಪತನಕ್ಕಿಳಿಯುವಂತಾಗಿದೆ  ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ  ರಾಜ್ಯ ಮುಖಂಡರಾದ  ಕೊಟ್ಟಾರಕರ ಷಾ, ವರ್ಕಲ್ ರಾಜ್, ಕೆ.ಇ. ಅಬ್ದುಲ್ಲ, ಜಾಫರ್ ಅಲಿ , ಮುಹಮ್ಮದ್ ರಜೀಬ್, ವೇಲಾಯುಧನ್ , ಯೂನಸ್ ತಳಂಗರೆ , ಎಸ್.ಎಂ. ಬಷೀರ್,  ನಿಸಾರ್ ಮೇತಾ, ಮೊಯಿದಿನ್ , ಕೃಷ್ಣನ್ ಕುಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

nkskkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕೋಟತಟ್ಟು ನಗದು ರಹಿತ ಗ್ರಾಪಂ: ಜ.15ಕ್ಕೆ ಸಚಿವ ರಮೇಶ್ ಕುಮಾರ್‍ ರಿಂದ ಚಾಲನೆ

ಮುಂದಿನ ಸುದ್ದಿ »

ಶೃಂಗೇರಿ ಕಾಲೇಜು ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣ ಸೂಕ್ತ ತನಿಖೆಯಾಗಲಿ: ಎಸ್. ಐ. ಓ

ಸಿನೆಮಾ

 • marali

  “ಮರಳಿ ಮನೆಗೆ” ಧ್ವನಿಸುರುಳಿ ಬಿಡುಗಡೆ ಸಂಭ್ರಮ

  February 24, 2017

  ನ್ಯೂಸ್ ಕನ್ನಡ(24-2-2017): ಖ್ಯಾತ ಬರಹಗಾರ, ಚಿಂತಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ನಿರ್ದೇಶನದ ಚೊಚ್ಚಲ ಚಲನಚಿತ್ರ “ಮರಳಿ ಮನೆಗೆ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯೋಗೇಶ್ ಮಾಸ್ಟರ್ ನಾದಬ್ರಹ್ಮ ಹಂಸಲೇಖ ಅವರು “ದೇಸಿ ಸಂಗೀತದ ...

  Read More
 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×