Saturday October 21 2017

Follow on us:

Contact Us

ಒಂಟಿಯಾಗಿದ್ದ ವೃದ್ಧೆಯ ಮನೆಯಲ್ಲಿ ದೀಪಾವಳಿ ಆಚರಿಸಿದ ಪಡುಬಿದ್ರಿ ರೋಟರಿ ಕ್ಲಬ್ ಸದಸ್ಯರು

ನ್ಯೂಸ್ ಕನ್ನಡ ವರದಿ-(21.10.17): ಪಡುಬಿದ್ರಿ: ಹೆಜಮಾಡಿ ಗ್ರಾಮದ ಕೊಕ್ಕರ್ಣೆ ಕುದ್ರುವಿನ ಬಡ ಒಂಟಿ ಮಹಿಳೆ ಅಪ್ಪಿ ಪೂಜಾರ್ತಿ ಮನೆಯಲ್ಲಿ ರೋಟರಿ ಕ್ಲಬ್ ಪಡುಬಿದ್ರಿ  ವತಿಯಿಂದ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕೊಕ್ಕರ್ಣೆ ನಿವಾಸಿ ಅಪ್ಪಿ ಪೂಜಾರ್ತಿಯವರು 15ವರ್ಷಗಳಿಂದ ಕೊಕ್ಕರ್ಣೆ ಎಂಬ ಕುದ್ರುವಿನಲ್ಲಿ ವಾಸಿಸುತಿದ್ದಾರೆ.

ಅವಿವಾಹಿತರಾಗಿದ್ದ ಇವರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ.ಇವರ ಮನೆಯನ್ನು ಗುರುತಿಸಿ ಶುಕ್ರವಾರ ಸಂಜೆ ದೀಪ ಬೆಳಗಿಸಿ ಅವರಿಗೆ ಒಂದು ತಿಂಗಳ ದಿನಬಳಕೆ ಸಾಮಾಗ್ರಿಗಳು, ಹೊಸ ಸೀರೆ, ಸಿಹಿ ತಿಂಡಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್, ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ ಪ್ರಮುಖವಾದೂದು. ಇಂತಹ ಕಾರ್ಯಕ್ರಮಗಳ ಬಡವರ ಬಾಳಿನಲ್ಲಿ ಕತ್ತಲಿನಿಂದ ಬೆಳಕಿನಡೆಗೆ ಕೊಡೊಯ್ಯಲು ಸಹಕಾರಿಯಾಗುತ್ತದೆ ಎಂದರು.

ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ರಮೀಝ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ವಲಯ ಸೇನಾನಿ ಪಿ.ಕೃಷ್ಣ ಬಂಗೇರಾ, ನಿಕಟ ಪೂರ್ವ ಅಧ್ಯಕ್ಷ  ಅಬ್ದುಲ್ ಹಮೀದ್, ಪೂರ್ವಾಧ್ಯಕ್ಷ ಬುಡಾನ್ ಸಾಹೇಬ್, ಕಾರ್ಯದರ್ಶಿ ಸಂದೀಪ್ ಫಲಿಮಾರ್, ಸುಧಾಕರ ಕೆ, ಸಂತೋಷ್ ಪಡುಬಿದ್ರಿ, ಅಶ್ರಫ್ ಕಾಡಿಪಟ್ಣ, ಅಬ್ದುಲ್ ರಝಾಕ್, ಆದಶ್ ಫಲಿಮಾರ್, ರೋಹಿತ್ ಕೋಟ್ಯಾನ್, ಮನೋಜ್ ಕುಮಾರ್, ಪ್ರವೀಣ್ ಕಲ್ಲುರಾಯ ಉಪಸ್ಥಿತರಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಆಮಂತ್ರಣ ಪತ್ರಿಕೆಯಲ್ಲಿ ಹೆಗ್ಡೆ ಹೆಸರು ಹಾಕುತ್ತೇನೆ, ಬರುವುದು, ಇರುವುದು ಅವರಿಷ್ಟ: ಸಿಎಂ

ಮುಂದಿನ ಸುದ್ದಿ »

ಜಿಲ್ಲೆಯಲ್ಲಿ ವ್ಯಾಪಕ ಮಾದಕ ಜಾಲ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ದ.ಕ. ಜಿಲ್ಲಾಧಿಕಾರಿಗೆ ಎಸ್’ಐಓ ಮನವಿ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×