Saturday August 12 2017

Follow on us:

Contact Us

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸುಧಾಕರ್ ಪಡುಬಿದ್ರಿ

ನ್ಯೂಸ್ ಕನ್ನಡ ವರದಿ-(12.08.17): ಪಡುಬಿದ್ರಿ: ಸಮಾಜ ಸೇವಕ ಸುಧಾಕರ್ ಕೆ ಪಡುಬಿದ್ರಿ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು,ಇದೀಗ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರನ್ನು ಉಡುಪಿ ಜಿಲ್ಲಾ ಯುವ ಕಾಂಗ್ರಸ್ ಅಧ್ಯಕ್ಷ ವಿಶ್ವಾಸ್ ವಿ ಅಮೀನ್ ನೇತ್ರತ್ವದಲ್ಲಿ ಶಾಸಕ ವಿನಯ ಕುಮಾರ ಸೂರಕೆ ಸಮ್ಮುಖದಲ್ಲಿ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ನವೀನಚಂದ್ರ ಜೆ.ಶೆಟ್ಟಿ ಯವರು ಪಕ್ಷದ ಧ್ವಜ ನೀಡಿ ಕಾಂಗ್ರಸ್ ಪಕ್ಷಕ್ಕೆ ಸೇರ್ಪಡೆಗೂಳಿಸಿದರು.

ಕಾಂಗ್ರೆಸ್ ಪಕ್ಷ ಹಾಗು ಶಾಸಕ ವಿನಯಕುಮಾರ್ ಸೊರಕೆಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಪಕ್ಷಕ್ಕೆ ಸೇರ್ಪಡಿಯಾಗಿರುವುದಾಗಿ ಸುಧಾಕರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮೀನುಗಾರಿಕ ನಿಗಮದ ನೀರ್ದೇಶಕ ದೀಪಕ್ ಕುಮಾರ್ ಎರ್ಮಾಳ್,ವ್ಯೆ.ಸುಧೀರ್ ಕುಮಾರ್, ಕಾಂಗ್ರಸ್ ಗ್ರಾಮ ಸಮಿತಿ ಅಧ್ಯಕ ವಿಜಯ ಎಂ ಅಮೀನ್, ಎ.ಪಿ.ಎಂ.ಸಿ ಸದಸ್ಯ ನವೀನಚಂದ್ರ ಸುವರ್ಣ ಅಡ್ವೆ, ಗ್ರಾ.ಪ.ಆಧ್ಯಕ್ಷೆ ದಮಯಂತಿ ವಿ.ಅಮೀನ್, ಸದಸ್ಯರಾದ ರವೀನ್ ಪಡುಬಿದ್ರಿ,ಜಾನಕಿ,ಬುಡಾನ್ ಸಾಹೇಬ್  ಮತಿತ್ತರರು ಉಪಸ್ಧಿತರಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕಲ್ಲಡ್ಕ ಶಾಲೆಗೆ ಅನುದಾನ ರದ್ದುಪಡಿಸಿದ್ದು ರಾಕ್ಷಸೀಯ ಪ್ರವೃತ್ತಿ: ಜನಾರ್ದನ ಪೂಜಾರಿ

ಮುಂದಿನ ಸುದ್ದಿ »

ಕಾಪು ಕ್ಷೇತ್ರವನ್ನು ಶಿಕ್ಷಣ ಕೇಂದ್ರವನ್ನಾಗಿಸುವ ಸಂಕಲ್ಪ : ಸೊರಕೆ 

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×