Thursday December 8 2016

Follow on us:

Contact Us
op

ಪಾಸ್ ಪೋರ್ಟ್ ನವೀಕರಿಸಲು ಅರ್ಜಿ ಸಲ್ಲಿಸಿದ ಯುವಕನ ಬಂಧನ

ನ್ಯೂಸ್ ಕನ್ನಡ ವರದಿ(08.12.2016)ಕಾಸರಗೋಡು: ನಕಲಿ ಪಾಸ್ ಪೋರ್ಟ್ ಪಡೆದು ಕಾಲಾವಧಿ ಮುಗಿದ ಬಳಿಕ ನವೀಕರಿಸಲು ಅರ್ಜಿ ಸಲ್ಲಿಸಿದ ಯುವಕನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ದೇಳಿಯ ಅಬ್ದುಲ್ ಸತ್ತಾರ್ (36) ಎಂದು ಗುರುತಿಸಲಾಗಿದೆ. ಬೇಕಲ ಪೆರು೦ಬಳ ತುರುತ್ತಿ ನಿವಾಸಿಯಾಗಿದ್ದ ಅಬ್ದುಲ್ ಸತ್ತಾರ್ ಕೆಲ ವರ್ಷಗಳ ಹಿಂದೆ ಕಾಸರಗೋಡು ದೇಳಿಗೆ ವಾಸ ಬದಲಿಸಿದ್ದರು.

ಈ ಹಿಂದೆ ನಕಲಿ ಪಾಸ್ ಪೋರ್ಟ್ ಪಡೆದು ವಿದೇಶಕ್ಕೆ ತೆರಳಿದ್ದ ಈತ ಪಾಸ್ ಪೋರ್ಟ್ ಕಾಲಾವಧಿ ಮುಗಿದ ಹಿನ್ನೆಲೆಯಲ್ಲಿ ನವೀಕರಿಸಲು ಮತ್ತೆ ಅರ್ಜಿ ಸಲ್ಲಿಸಿದ್ದನು.

ಮಲಪ್ಪುರಂನ ಕುಂಞಮೊಯ್ದಿನ್ ಎಂಬವರ ಪುತ್ರ ಸಲ್ಮಾನ್ ಹಾರಿಸ್ ಎಂಬ ಹೆಸರಿನಲ್ಲಿ ಪಾಸ್ ಪೋರ್ಟ್ ಪಡೆದಿದ್ದನು. ಆದರೆ ಈ ಬಾರಿ ದೇಳಿಯ ವಿಳಾಸ ನೀಡಿ ಪಾಸ್ ಪೋರ್ಟ್ ಗೆ ಮರು ಅರ್ಜಿ ಸಲ್ಲಿಸಿದ್ದನು. ಆದರೆ ದಾಖಲೆಗಳನ್ನು ತಪಾಸಣೆ ನಡೆಸಿದಾಗ ನಕಲಿ ಪಾಸ್ ಪೋರ್ಟ್ ಎಂದು ಬೆಳಕಿಗೆ ಬಂತು.

ಅಬ್ದುಲ್ ಸತ್ತಾರ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪೊಯಿನಾಚಿಯ ಓರ್ವ ವ್ಯಕ್ತಿ ನಕಲಿ ಪಾಸ್ ಪೋರ್ಟ್ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಕಾಸರಗೋಡು ನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು, ನಕಲಿ ಪಾಸ್ ಪೋರ್ಟ್ ಜಾಲ ಕುರಿತು ಹೆಚ್ಚಿನ ಮಾಹಿತಿ ಲಭಿಸುವ ಸಾಧ್ಯತೆ ಇದೆ.

nkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹಳೆ ವಿದ್ಯಾರ್ಥಿ ಸಂಘದಿಂದ SSLC ಹಾಗೂ PUC ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತಾ ಶಿಬಿರ

ಮುಂದಿನ ಸುದ್ದಿ »

ಅಂಜುಮನ್ ವಿದ್ಯಾ ಸಂಸ್ಥೆಯ 29 ನೇ ವಾರ್ಷಿಕೋತ್ಸವ

ಸಿನೆಮಾ

 • kattappa

  ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

  March 18, 2017

  ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

  Read More
 • eega

  ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

  March 1, 2017

  ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×