Sunday November 12 2017

Follow on us:

Contact Us

ಪಡುಬಿದ್ರಿಯಲ್ಲಿ ರಾಜ್ಯಮಟ್ಟದ ಅಂತರ್‍ಶಾಖಾ ಕರಾಟೆ ಸ್ಪರ್ಧೆ

ನ್ಯೂಸ್ ಕನ್ನಡ ವರದಿ(12.11.2017): ಕಾಪು : ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಮಕ್ಕಳು ಕಠಿಣ ಪರಿಶ್ರಮ, ಏಕಾಗ್ರತೆ ರೂಡಿಸಿಕೊಂಡು ಎಲ್ಲಾ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ 2020 ರ ಒಲಂಪಿಕ್‍ನಲ್ಲಿ ಸೇರ್ಪಡೆಯಾಗಿರುವ ಕರಾಟೆ ಸ್ಪರ್ಧೆಯಲ್ಲಿ ಸ್ಥಾನ ಪಡೆಯಲು ಅವಕಾಶ ಒದಗಿ ಬರಲಿದೆ ಎಂದು ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು ಅಭಿಪ್ರಾಯ ಪಟ್ಟರು.

ಪಡುಬಿದ್ರಿಯ ಸಾಯಿ ಸಭಾಂಗಣದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ 28ನೇ ರಾಜ್ಯಮಟ್ಟದ ಅಂತರ್‍ಶಾಖಾ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧೆಯಲ್ಲಿ ನೂರಾರು ಕರಾಟೆಪಟುಗಳು ಪಾಲ್ಗೊಂಡಿದ್ದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಪುಟಾರ್ಡೋ, ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ವೈ. ಸುಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ರಮೀಜ್ ಹುಸೇನ್, ಉದ್ಯಮಿ ಸಂತೋಷ್‍ಕುಮಾರ್ ಶೆಟ್ಟಿ, ದೀಪಕ್ ಗಂಗೊಳ್ಳಿ, ಮಂಗಳೂರಿನ ಇನ್‍ಸ್ಟಿಟ್ಯೂಟ್ ಆಫ್ ಕರಾಟೆ ಅಲೈಡ್ ಆಟ್ರ್ಸ್‍ನ ಮುಖ್ಯಶಿಕ್ಷಕ ಪ್ರವೀಣ್‍ಕುಮಾರ್, ಸಂಘಟನಾ ಸಮಿತಿ ಸಂಚಾಲಕ ಮುಜಾಫರ್ ಹುಸೇನ್, ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಇನ್ನ, ಸಂಘಟಕ ಅಬ್ದುಲ್ ಖಾದರ್ ಹುಸೈನ್, ಹಿರಿಯ ಶಿಕ್ಷಕರಾದ ರಘುಪತಿ ಬ್ರಹ್ಮಾವರ, ದಿನೇಶ್ ಆಚಾರ್ಯ, ಸಂಘಟನಾ ಸಮಿತಿ ಸದಸ್ಯ ಪ್ರಶಾಂತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನೆಲ-ಜಲ ಸಂರಕ್ಷಣೆಯೊಂದಿಗೆ ವಿಜ್ಞಾನ ಬೆಳೆಯಬೇಕಾಗಿದೆ; ಶೇಖರ ಪೂಜಾರಿ

ಮುಂದಿನ ಸುದ್ದಿ »

ಗೌರಿಲಂಕೇಶ್ ರನ್ನು ಕೊಂದವರು ಯಾರೆಂದು ತಿಳಿದು ಬಂದಿದೆ: ಶೀಘ್ರವೇ ಬಂಧಿಸಲಾಗುವುದು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×