Saturday January 7 2017

Follow on us:

Contact Us
12

ಡಿಜಿಟಲ್, ಕ್ಯಾಶ್‍ ಲೆಸ್ ಹೆಸರಿನಲ್ಲಿ ದೇಶದ ಜನರನ್ನು ಭ್ರಮೆಗೆ ನೂಕುವ ಯತ್ನ: ಸುದರ್ಶನ್

ನ್ಯೂಸ್ ಕನ್ನಡ ವರದಿ (6-1-17): ಕೋಲಾರ: ಡಿಜಿಟಲ್, ಕ್ಯಾಶ್‍ ಲೆಸ್ ಹೆಸರಿನಲ್ಲಿ ಜನರನ್ನು ಭ್ರಮೆಗೆ ನೂಕುವ ಯತ್ನದಲ್ಲಿ ನಡೆದ ನೋಟಿನ ಅಮಾನ್ಯೀಕರಣ ಈ ದೇಶಕ್ಕೆ ಪ್ರಧಾನಿ ಮೋದಿ ನಿರ್ಮಿತ ದುರಂತ ಎಂದು ಪ್ರದೇಶ ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಟೀಕಿಸಿದರು.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪ್ರಜಾಸತ್ತೆಯಲ್ಲಿ ನಂಬಿಕೆಗೆ ಜಾಗವಿಲ್ಲದಂತೆ ಮಾಡಿ, ಸಂಸತ್ತಿನ ಮುಂದೆಯೂ ವಿಷಯ ತಿಳಿಸದೇ ಮೋದಿ ಏಕಪಕ್ಷೀಯವಾಗಿ ಕೈಗೊಂಡ ತೀರ್ಮಾನವನ್ನು ಖಂಡಿಸಿ ಕಾಂಗ್ರೆಸ್ ದೇಶವ್ಯಾಪಿ ಜನಜಾಗೃತಿ ಮೂಡಿಸುತ್ತಿದೆ ಎಂದರು.

ನೋಟ್ ಬ್ಯಾನ್ ಮೂಲಕ ಸಾಮಾನ್ಯ ಜನ ಕಂಗಾಲಾಗಿದ್ದಾರೆ, ಆರ್ಥಿಕ ವ್ಯವಸ್ಥೆಯೇ ಅದ್ವಾನವಾಗಿದೆ, ಆದರೆ ಮೋದಿ ವಿರೋಧಿಗಳನ್ನು ಟೀಕೆ ಮಾಡುವುದರಲ್ಲಿ ಕಾಲ ಕಳೆದಿದ್ದಾರೆ ಎಂದರು. ನ.8 ರಂದು ಮೋದಿ ಮಾಡಿದ ಭಾಷಣದಲ್ಲಿ ನೋಟು ಅಮಾನ್ಯದಿಂದ ಕಪ್ಪುಹಣ, ಭ್ರಷ್ಟತೆ ನಿರ್ಮೂಲನೆ, ಭಯೋತ್ಪಾದನೆ, ನಕ್ಸಲೀಸಂ ನಾಶ ಎಂಬೆಲ್ಲಾ ಉದ್ದೇಶಗಳನ್ನು ಪ್ರಸ್ತಾಪಿಸಿದ್ದರಿಂದಾಗಿ ಕಾಂಗ್ರೆಸ್ ಸಹಿತ ದೇಶದ ಎಲ್ಲಾ ಜನತೆ ತಕರಾರು ಎತ್ತಲಿಲ್ಲ ಎಂದರು. ನಂತರದ ದಿನಗಳಲ್ಲಿ ಇದೊಂದು ಆತುರದ ನಿರ್ಧಾರ ಎನಿಸಿದೆ, ಸಂಸತ್ತಿನೊಳಗೆ ಪ್ರವೇಶಿಸುವಾಗ ನಮಸ್ಕರಿಸಿ ಒಳ ಹೋದ ಪ್ರಧಾನಿ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದ ಅವರು, ಆರ್ಥಿಕ ತಜ್ಞರಿಗಾಗಲಿ, ತಮ್ಮ ಸಂಪುಟ ಸದಸ್ಯರಿಗಾಗಲಿ, ಪ್ರಜಾಪ್ರತಿನಿಧಿಗಳ ಸಂಸ್ಥೆ ಸಂಸತ್ತಿಗಾಗಲಿ ತಿಳಿಸದೇ ಕೈಗೊಂಡ ನಿರ್ಧಾರ ಸರಿಯೇ ಎಂದು ಪ್ರಶ್ನಿಸಿದರು.

ನೋಟು ಬದಲಿಸಲು 150 ಮಂದಿ ಸಾವು:
ಇಂದಿನವರೆಗೂ ದೇಶದಲ್ಲಿ ನೋಟು ಅಮಾನ್ಯೀಕರಣದಿಂದ ಹಿರಿಯ ನಾಗರೀಕರು, ಅಂಗವಿಕಲರು, ಕೂಲಿ, ಕಾರ್ಮಿಕರು, ಸಾಮಾನ್ಯ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಮೋದಿ ಅವರು ಹೇಳಿದಂತೆ ಶ್ರೀಮಂತರ್ಯಾರೂ ಬ್ಯಾಂಕ್ ಮುಂದೆ ಸಾಲಿನಲ್ಲಿ ನಿಲ್ಲಲಿಲ್ಲ, ನಿಂತ ಹಿರಿಯ ನಾಗರೀಕರು 150 ಮಂದಿ ಪ್ರಾಣ ಕಳೆದುಕೊಂಡರು ಎಂದರು.

ಡಿಜಿಟಲ್,ಕ್ಯಾಶ್‍ ಲೆಸ್ ಕ್ರಾಂತಿ ಎನ್ನುವ ಇವರಿಗೆ ಇಲ್ಲಿ ಹಳ್ಳಿಗಳ ಭಾರತ, ನಗರಗಳ ಇಂಡಿಯಾ ಎರಡೂ ಇದೆ ಎಂಬ ಅರಿವಿರಬೇಕಾಗಿತ್ತು ಎಂದರು.
ಕ್ರಾಂತಿ ಎಂದರೆ ಇಂದಿರಾಗಾಂಧಿ ತಂದ ಬ್ಯಾಂಕುಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿ, ಕ್ಷೀರಕ್ರಾಂತಿ ಎಂದು ಉಲ್ಲೇಖಿಸಿದ ಅವರು, ಡಿಜಿಟಲ್ ಬಗ್ಗೆ ಮಾತನಾಡುವ ಬಿಜೆಪಿಗೆ ರಾಜೀವ್‍ಗಾಂಧಿ ಕಂಪ್ಯೂಟರೀಕರಣಕ್ಕೆ ಮುಂದಾದಾಗ ಮಾಡಿದ ಟೀಕೆಗಳ ಅರಿವಿದೆಯೇ ಎಂದು ಪ್ರಶ್ನಿಸಿದರು.

ನೋಟು ಅಮಾನ್ಯದಿಂದ ಅಭಿವೃದ್ದಿ ಕುಂಠಿತ:
ವಿಶ್ವದಲ್ಲಿ ಬರ್ಮಾದಲ್ಲಿ 1987 ರಲ್ಲಿ ನೋಟು ಅಮಾನ್ಯದಿಂದ ಜನ ದಂಗೆಯೆದ್ದರು, ರಷ್ಯಾದಲ್ಲಿ 1991 ರಲ್ಲಿ ಈ ಕ್ರಮದಿಂದ ದೇಶವೇ ಛಿದ್ರವಾಯಿತು, ಉತ್ತರಕೋರಿಯಾ ಇಂದಿಗೂ ಹಸಿವಿನಿಂದ ನಲುಗುತ್ತಿದೆ ಎಂದು ಉದಾಹರಿಸಿದರು.

ಕ್ಯಾಶ್‍ ಲೆಸ್ ಎಷ್ಟು ಸರಿ, ಮುಂದುವರೆದ ಅಮೇರಿಕಾದಲ್ಲಿ ಶೇ.45 ,ಚೀನಾದಲ್ಲಿ ಶೇ.10 ಮಾತ್ರ ಕ್ಯಾಶ್‍ ಲೆಸ್ ವ್ಯವಹಾರ ನಡೆಯುತ್ತಿದೆ ಎಂದ ಅವರು, ಇಂತಹ ಕ್ರಮಗಳಿಗೆ ಅಲ್ಪಾವಧಿ, ಧೀರ್ಘಾವದಿ ಕ್ರಮಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ರಿಸರ್ವ್ ಬ್ಯಾಂಕ್‍ ನ ಘನತೆಯೇ ಹರಾಜು:
ನೋಟ್ ಬ್ಯಾನ್ ಕೇವಲ ಪ್ರಚಾರಕ್ಕಾಗಿ ಮಾಡಿದ ತಂತ್ರ ಎಂದು ಟೀಕಿಸಿದ ಅವರು, ಈವರೆಗೂ ಎಷ್ಟು ಹಣ ಬಂದಿದೆ ಎಂಬ ಮಾಹಿತಿಯನ್ನಾದರೂ ಜನರಿಗೆ ನೀಡಿದ್ದೀರಾ ಎಂದು ಪ್ರಶ್ನಿಸಿದರು. ನೋಟ್‍ ಬ್ಯಾನ್ ನಂತರ ರಿಸರ್ವ್ ಬ್ಯಾಂಕ್ ತನ್ನ ಘನತೆ ಕಳೆದುಕೊಂಡಂತಾಗಿದೆ, ಇದು ರಿವರ್ಸ್ ಬ್ಯಾಂಕ್ ಆಗಿದ್ದು, 50 ದಿನಗಳಲ್ಲಿ 135 ಆದೇಶ ಹೊರಡಿಸಲಾಗಿದೆ, ಇದರಲ್ಲಿ 30 ಉಲ್ಟಪಲ್ಟಾ ಆದೇಶಗಳು ಎಂದು ಟೀಕಿಸಿದರು.

ಮೇಕ್ ಇನ್ ಇಂಡಿಯಾ – ಬ್ರೇಕಿಂಗ್ ಇಂಡಿಯಾ:
ಮೇಕಿಂಗ್ ಇಂಡಿಯಾ ಆಗುವ ಬದಲಿಗೆ ನೋಟು ಅಮಾನ್ಯದಿಂದ ಆರ್ಥಿಕ ಮಟ್ಟ ಕುಸಿಯುವ ಮೂಲಕ ಬ್ರೇಕಿಂಗ್ ಇಂಡಿಯಾ ಆಗಿದೆ ಎಂದು ವ್ಯಂಗ್ಯವಾಡಿ, ಚುನಾವಣೆಗೆ ಮುನ್ನಾ ವಿದೇಶದಿಂದ ಬ್ಲಾಕ್ ಮನಿ ತರುವುದಾಗಿ ಹೇಳಿದ ಇವರು ಇದೀಗ ಜನರನ್ನು ದಿಕ್ಕು ತಪ್ಪಿಸಲು ನೋಟ್ ಬ್ಯಾನ್ ಮಾಡಿದರು ಎಂದರು.
ನೋಟ್ ಬ್ಯಾನ್ ನಂತಹ ಮಹತ್ವದ ಕೆಲಸ ಮಾಡುವಾಗ ಆರ್ಥಿಕ ತಜ್ಞರು, ರಿಸರ್ವ್‍ಬ್ಯಾಂಕ್ ಮಾಜಿ ಗೌವರ್ನರ್ ರಘುರಾಮ್ ರಾಜನ್, ಮನಮೋಹನ್ ಸಿಂಗ್ ಅವರೊಂದಿಗಾದರೂ ಮಾತನಾಡಬೇಕಿತ್ತು ಎಂದರು.

ನೋಟ್ ಬ್ಯಾನ್‍ಮುನ್ನಾ ಭ್ರಷ್ಟತೆ ಬಯಲು:
ನೋಟ್ ಬ್ಯಾನ್ ಮುನ್ನಾ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅನೂಪ್ ಎನ್ನುವವರು 3 ಕೋಟಿ ರೂ. ಗಳೊಂದಿಗೆ ಸಿಕ್ಕಿಬಿದ್ದಾಗ ಇದು ಕೇಂದ್ರ ಬಿಜೆಪಿಯಿಂದ ರಾಜ್ಯ ಬಿಜೆಪಿಗೆ ತರುತ್ತಿರುವುದಾಗಿ ತಿಳಿಸಿದ್ದರು, ಅಮಿತ್‍ ಷಾ ಅಹಮದಾಬಾದ್ ಸಹಕಾರಿ ಬ್ಯಾಂಕ್‍ ನ ನಿರ್ದೇಶಕರಾಗಿದ್ದು, ಅಲ್ಲಿ 500 ಕೋಟಿ ಅವ್ಯವಹಾರವಾಗಿದೆ ಎಂದು ಉದಾಹರಿಸಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಸಚಿವೆ ಪಂಕಜ್‍ ಮುಂಡೆ 10 ಕೋ.ಅವ್ಯವಹಾರ ನಡೆಸಿದ್ದರು ಈ ಎಲ್ಲಾ ತನಿಖೆಗಳು ಯಾವ ಹಂತದಲ್ಲಿವೆ ಎಂದು ಪ್ರಶ್ನಿಸಿದರು.ಇಂತಹ ಸ್ಥಿತಿ ಪುನರಾವರ್ತನೆಯಾಗದಂತೆ ತಡೆಯಲು ಕಾಂಗ್ರೆಸ್ ರಾಷ್ಟ್ರವ್ಯಾಪಿ ಹೋರಾಟ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು. ನೋಟು ಅಮಾನ್ಯಕ್ಕೆ ಕೆಲವು ಸಚಿವರು, ಕಾಂಗ್ರೆಸ್ ಮುಖಂಡರು ಬೆಂಬಲ ವ್ಯಕ್ತಪಡಿಸಿರುವ ಕುರಿತು ಪ್ರಶ್ನಿಸಿದಾಗ ಇದು ಅವರ ವೈಯುಕ್ತಿಕ ಅಭಿಪ್ರಾಯ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‍ ಬಾಬು, ಮೈಸೂರು ಮಿನರಲ್ಸ್ ಮಾಜಿ ನಿರ್ದೇಶಕ ಆರ್.ಕಿಶೋರ್‍ ಕುಮಾರ್, ಬಯಲು ಸೀಮೆ ಅಭಿವೃದ್ದಿ ಮಂಡಳಿ ಸದಸ್ಯ ಜಯದೇವ್, ಜಿಲ್ಲಾ ಕಾಂಗ್ರೆಸ್ ವಕ್ತಾರ ನಾಗನಾಳ ಮಂಜುನಾಥ್, ನಗರಸಭಾ ಸದಸ್ಯರಾದ ಸಲಾಲುದ್ದೀನ್ ಬಾಬು, ಸಾಧಿಕ್ ಮುಖಂಡರಾದ ವೆಂಕಟಪತಿ, ಶಿವಕುಮಾರ್, ರಾಜೇಶ್‍ಸಿಂಗ್ ಮತ್ತಿತರರು ಹಾಜರಿದ್ದರು.

nkhap

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಯುಪಿಸಿಎಲ್ ನಿಂದ ರಿಕ್ಷಾ ತಂಗುದಾಣ ಕೊಡುಗೆ

ಮುಂದಿನ ಸುದ್ದಿ »

ಬಸ್ ಗಳ ಮಧ್ಯೆ ಸಿಲುಕಿ ಚಾಲಕ ಸಾವು

ಸಿನೆಮಾ

 • kattappa

  ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

  March 18, 2017

  ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

  Read More
 • eega

  ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

  March 1, 2017

  ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×