Sunday June 18 2017

Follow on us:

Contact Us

ರಾಷ್ಟ್ರಪತಿ ವಾಹನವನ್ನು ನಿಲ್ಲಿಸಿ ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮನಗೆದ್ದ PSI ನಿಜಲಿಂಗಪ್ಪ

ನ್ಯೂಸ್ ಕನ್ನಡ ವರದಿ (18.06.2017): ಶನಿವಾರ ಬೆಂಗಳೂರಿಗೆ ನಮ್ಮ ಮೆಟ್ರೋ ಉದ್ಘಾಟನೆಗೆಂದು ಆಗಮಿಸಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ವಾಹನಕ್ಕಿಂತ ರೋಗಿಯನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಸಬ್ ಇನ್ಸ್ಪೆಕ್ಟರ್ ನಿಜಲಿಂಗಪ್ಪ ದಿನ ಬೆಳಗಾಗೋದರೊಳಗೆ ಹೀರೋ ಆಗಿದ್ದಾರೆ.

VIP, VVIP ಬಂದಾಗ, ರಸ್ತೆಯ ಮೇಲೆ ಆಂಬ್ಯುಲೆನ್ಸ್ ಸೈರನ್ ಹೊಡೆದುಕೊಳ್ಳುತ್ತಿದ್ದರೂ ಮೊದಲು ಪ್ರಾಶಸ್ತ್ಯ ಸಿಗುವುದೇ VVIPಗಳಿಗೆ. ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಸತ್ತರೂ ಅಡ್ಡಿಯಿಲ್ಲ, ರಸ್ತೆಯನ್ನು ಬ್ಲಾಕ್ ಮಾಡಿ VVIPಗಳಿಗೆ ದಾರಿಮಾಡಿ ಕೊಡಲಾಗುತ್ತದೆ.

ಅಂಥದ್ದರಲ್ಲಿ ಟ್ರಿನಿಟಿ ಜಂಕ್ಷನ್ ನಲ್ಲಿ ಪ್ರಣಬ್ ಮುಖರ್ಜಿಯವರು ವಾಹನ ಸಾಗುತ್ತಿದ್ದರೂ, ಅದನ್ನು ತಡೆದು ನಿಲ್ಲಿಸಿ ಆಂಬ್ಯುಲೆನ್ಸ್ ಸಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಹಲಸೂರು ಟ್ರಾಫಿಕ್ ಪೊಲೀಸ್ ಎಸ್ ಎಚ್ ನಿಜಲಿಂಗಪ್ಪ ಅವರು. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಕೃಪೆ : ಪಬ್ಲಿಕ್ ಟಿವಿ ನ್ಯೂಸ್

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪಾಕ್ ನಾಯಕನ ಮಗ ಅಬ್ದುಲ್ಲಾ ಜೊತೆ ಧೋನಿ ಫೋಟೋ: ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್

ಮುಂದಿನ ಸುದ್ದಿ »

ಫೈನಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ ಸಿಕ್ಸರ್ ಗಳ ವೀಡಿಯೋ ನೋಡಿ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×