Tuesday February 13 2018

Follow on us:

Contact Us

ಆರ್’ಟಿಐ ನಿರ್ಲಕ್ಷ್ಯ: ನಿರ್ಗಮಿತ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಜಗದೀಶ್ ಗೆ ದಂಡ

ನ್ಯೂಸ್ ಕನ್ನಡ ವರದಿ-(13.2.18): ಕೋಲಾರ: ಆರ್ ಟಿ ಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ತಾಲೂಕಿನ ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್ ರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ ಮೂರು ಸಾವಿರ ರೂಪಾಯಿಗಳ ದಂಡವನು ವಿಧಿಸಿದೆ.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಬಿ.ಜಗದೀಶ್ ರ ಕಾರ್ಯವೈಖರಿ ಕುರಿತಂತೆ ಶ್ರೀನಿವಾಸಪುರ ಆರ್ ಟಿ ಐ ಮಾಹಿತಿ ಕಾರ್ಯಕರ್ತ ಶಬ್ಬೀರ್ ಆಹಮದ್ ಸುಮಾರು ಎರಡು ವರ್ಷಗಳ ಹಿಂದೆ ಮಾಹಿತಿ ಹಕ್ಕು ಆರ್ಜಿ ಸಲ್ಲಿಸಿದರು. ಅದರೆ ಕ್ಷೇತ್ರ ಶಕ್ಷಣಾಧಿಕಾರಿ ಬಿ.ಜಗದೀಶ್ ಈ ಅರ್ಜಿಯನ್ನು ನಿರ್ಲಕ್ಷಿಸಿದ್ದರು ಈ ಕುರಿತು ಶಬ್ಬೀರ್ ಆಹಮದ್ ಮೇಲ್ಮನವಿ ಪ್ರಾಧಿಕಾರಕ್ಕೊ ಅರ್ಜಿಯನ್ನು ಸಲ್ಲಿಸಿದ್ದರು.

ಮೇಲ್ಮನವಿ ಪ್ರಾಧಿಕಾರವು ಅರ್ಜಿದಾರರು ಕೇಳಿರುವ ಮಾಹಿತಿಯನ್ನು ನೀಡುವಂತೆ ಸುಚಿಸಿದತ್ತು ಆದರೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಜಗದೀಶ್ ಆದೇಶವನು ಪಾಲಿಸಿರಲಿಲ್ಲ ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ದೂರ ಸಲ್ಲಿಸಲಾಗಿತು. ಲಭ್ಯ ಇದ್ದ ಮಾಹಿತಿ ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಪ್ರತಿವಾದಿಯು ಉದ್ದೇಶಪೂರ್ವಕವಾಗಿ ಅರ್ಜಿದಾರರಿಗೆ ಮಾಹಿತಿ ಒದಗಿಸಿರುವುದಿಲ್ಲವೆಂದು ಪರಿಗಣಿಸಿ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 20 (1) ರನ್ವಯ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪ್ರತಿವಾದಿಯದ ಬಿ. ಜಗದೀಶ್ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೋಲಾರ
ಪ್ರಸ್ತುತ ಉಪನ್ಯಾಸಕರು ಸರಕಾರಿ ಶಿಕ್ಷಣ, ಶಿಕ್ಷಣ ಮಹಾವಿದ್ಯಾಲಯ ವಸಂತಮಹಲ್ ಮೈಸೂರು ಸಂಸ್ಥೆಯಲ್ಲಿ ಉಪನ್ಯಾಸಕರು ಆಗಿರುವ ಬಿ. ಜಗದೀಶ್ ರಿಗೆ ರೂ 3 ಸಾವಿರ ದಂಡವನು ವಿಧಿಸಿದೆ.

ಈ ದಂಡ ಮೊತ್ತ ಸರ್ಕಾರದ ಲೆಕ್ಕ ಶೀರ್ಷಿಕೆ Head of Account 0070-60-118-0-03- Penalties under the Act under New minor 0070-60-118-0-00-receipts under the RTI Act ಪಾವತಿಸಿ ರಸೀದಿಯ ನಕಲು ಪ್ರತಿಯನ್ನು ಆಯೋಗದ ಕಾರ್ಯದರ್ಶಿಗಳಾದ ಡಾ ಸುನೀಲ್ ಪನ್ವಾರ್ ರವರಿಗೆ ಸಲ್ಲಿಸಿಬೇಕೆಂದು ಆಯೋಗ ಅದೇಶದಲ್ಲಿ ಸೂಚಿಸಿದೆ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪೀಸ್ ಸ್ಕೂಲ್ ಸುಳ್ಯ: ವಿಜೃಂಭಣೆಯಿಂದ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ

ಮುಂದಿನ ಸುದ್ದಿ »

ಗಂಟಲಲ್ಲಿ ಸಿಲುಕಿಕೊಂಡ ಅವಲಕ್ಕಿ: ಮೂರು ವರ್ಷದ ಮಗು ಮೃತ್ಯು!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×