Sunday June 11 2017

Follow on us:

Contact Us

ಪ್ರಕೃತಿಯ ಆರಾಧನೆಗಳು ಕಡಿಮೆಯಾದ ಕಾರಣ ಪ್ರಕೃತಿ ವಿಕೋಪಗಳಾಗುತ್ತಿವೆ: ನಳಿನ್ ಕುಮಾರ್ ಕಟೀಲ್

ನ್ಯೂಸ್ ಕನ್ನಡ ವರದಿ-(11.06.17)ಬೆಳ್ತಂಗಡಿ: ನಮ್ಮ ಹಿರಿಯರು ನಂಬಿಕೆಯ ಆಧಾರದ ಮೇಲೆ ಬದುಕನ್ನು ಕಟ್ಟಿದರು. ಸಕಲ ಚೇತನಗಳಲ್ಲಿ ಪರಮಾತ್ಮನನ್ನು ಕಂಡರು. ದೇವರ ಹೆಸರಲ್ಲಿ ಪ್ರಕೃತಿಯ ರಕ್ಷಣೆಯ ಕೆಲಸ ಆಗುತ್ತಿತ್ತು. ಈಗ ಪ್ರಕೃತಿಯ ಆರಾಧನೆ ಕಡಿಮೆ ಆಗಿದೆ. ಪರಿಣಾಮ ಪ್ರಕೃತಿ ವಿಕೋಪ, ವೈಪರಿತ್ಯಗಳು ಕಾಣುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು

ಅವರು, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಮತ್ತು ದ.ಕ ಪರಿಸರಾಸಕ್ತರ ಒಕ್ಕೂಟದ ಆಶ್ರಯದಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ sಸಭಾ ಭವನದಲ್ಲಿ ನಡೆದ ‘ವಿಶ್ವ ಪರಿಸರ ದಿನಾಚರಣೆ’ಯನ್ನು ಗಿಡಗಳನ್ನು ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾಕ್ಷರನೇ ರಾಕ್ಷಸನಾಗುತ್ತಿದ್ದಾನೆ. ನಾನು ಬದುಕಬೇಕು, ಎಲ್ಲವೂ ನನಗಾಗಿ ಎಂಬ ಸ್ವಾರ್ಥ ಮನೋಭಾವ ಹೆಚ್ಚಾಗುತ್ತಿದೆ. ಈಗಾಗಲೇ ನದಿ ಬತ್ತಿ ಜಲಕ್ಷಾಮ ಉಂಟಾಗಿದೆ. ಸರಕಾರ ಮಾಡಬೇಕು ಎಂದು ಕೈಚಾಚುತ್ತಾ ಕುಳಿತರೆ ದಿನ ಕಳೆಯಬಹುದು. ಆದರೆ ಕೆಲಸ ಸಾಧ್ಯವಾಗುವುದಿಲ್ಲ. ಟ್ರಸ್ಟ್ ಪ್ರಕೃತಿಯ ಆರಾಧನೆ ಮಾಡುತ್ತಿದೆ, ತಾನು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡುದಲ್ಲದೇ ಇತರರನ್ನೂ ತೊಡಗಿಸಿಕೊಂಡಿದೆ. ಇದಕ್ಕಾಗಿ ಸೇವಾ ಟ್ರಸ್ಟ್‍ನ್ನು ಅಭಿನಂದಿಸುತ್ತೇನೆ ಎಂದರು.

ಬೆಳ್ತಂಗಡಿ ತಾ. ಪಂ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ, ಅಕೇಶಿಯಾ, ನೀಲಗಿರಿಗಳಂತಹ ಪರಿಸರ ಮಾರಕ ಸಸಿಗಳನ್ನು ನೆಡದೆ ಹಣ್ಣುಹಂಪಲುಗಳ ಗಿಡ ಮತ್ತು ಅರಣ್ಯ ಸಸಿಗಳನ್ನು ನೆಡುವಂತೆ ತಿಳಿಸಿ ಜೀವ ವೈವಿಧ್ಯದ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಅಶೋಕ ಕೋಟ್ಯಾನ್ ವಹಿಸಿದ್ದರು. ಜಿ.ಪಂ. ಸದಸ್ಯೆ ಮಮತಾ ಎಂ.ಶೆಟ್ಟಿ, ತಾ.ಪಂ. ಸದಸ್ಯ ಗೋಪಿನಾಥ ನಾಯಕ್, ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್ ಉಪಸ್ಥಿತರಿದ್ದರು.

ದ.ಕ ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷ ಉಮೇಶ ನಿರ್ಮಲ್ ಸ್ವಾಗತಿಸಿ, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಜತೆಕಾರ್ಯದರ್ಶಿ ವನಿತಾ ಜೈನ್ ವಂದಿಸಿದರು. ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ಶ್ರೀ ನಾರಾಯಣ ಕಿಲಂಗೋಡಿ ನಿರ್ವಹಣೆ ಮಾಡಿದರು. ಕಾರ್ಯಕ್ರಮದ ಬಳಿಕ ಅರಣ್ಯ ಇಲಾಖೆಯಿಂದ ಪಡೆದ ಸಸಿಗಳನ್ನು ವಿತರಿಸಲಾಯಿತು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಟ್ರಾವೆಲರ್ ಗೆ ಇನ್ನೋವಾ ಢಿಕ್ಕಿ: ಚಾಲಕ ಗಂಭೀರ

ಮುಂದಿನ ಸುದ್ದಿ »

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಲಾರಿ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×