Tuesday January 9 2018

Follow on us:

Contact Us

ರೋಹಿ ಮಿಲನ್ ಕಮಿಟಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ನ್ಯೂಸ್ ಕನ್ನಡ ವರದಿ-(9.01.18): ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಕಿಸಾನ್ ಆಗ್ರೋ ಮಾವಿನ ಮಂಡಿಯಲ್ಲಿ ರೋಹಿ ಮಿಲನ್ ಕಮಿಟಿಯಿಂದ ಮುಸ್ಲಿಮ್ ಸಮುದಾಯದ ವಧು ವರರ ಉಚಿತ ಸಾಮೂಹಿಕ ವಿವಾಹ ಸಮಾರಂಭ ಜರಗಿತು.

ಈ ಸಂದರ್ಭದಲ್ಲಿ ಮಾತನಾಡಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಧುವರರಿಗೆ ಶುಭ ಹಾರೈಸಿ, ಕೋಲಾರ ಶಾಸಕ ವರ್ತೂರ್ ಪ್ರಕಾಶ್ ನಿನ್ನೆ ಮೊನ್ನೆಯ ರಾಜಕೀಯ ಬಚ್ಚಾ ನನಗೆ ಮತ್ತು ನಸೀರ್ ಅಹ್ಮದ್ ಕೋಲಾರ ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ಕೊಡಿ ವರ್ತೂರನ್ನು ಗಂಟು ಮೂಟೆ ಕಟ್ಟುವ ಹಾಗೆ ಮಾಡುತ್ತೇವೆ ಎಂದು ಹೇಳಿದರು.

ಹಿರಿಯ ಮುತ್ಸದ್ದಿ ಸಚಿವ ರಮೇಶ್ ಕುಮಾರ್ ವಿರುದ್ದ ಮಾತನಾಡುವ ನೈತಿಕ ಹಕ್ಕು ವರ್ತೂರಿಗೆ ಇಲ್ಲ ಆತನನ್ನು ಈ ಬಾರಿ ಗಂಟುಮೂಟೆ ಕಟ್ಟಿಸಬೇಕು ಎಂದು ನುಡಿದರು. ಬಿಜೆಪಿ ಮತ್ತು ಜೆಡಿಎಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ ಜೆ ಡಿ ಎಸ್ ಗೆ ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ನೈತಿಕತೆಯೇ ಇಲ್ಲ ಜೆಡಿಎಸ್ ಗೆ ಮತ ನೀಡಿದರೆ ಅದು ಪರೋಕ್ಷವಾಗಿ ಬಿಜೆಪಿ ಮತಪೆಟ್ಟಿಗೆಗೆ ಬಿದ್ದಂತೆ ಎಂದು ವಾಗ್ದಾ ನಡೆಸಿದರ.

ಮುಸಲ್ಮಾನರಿಗೆ ಭಾರತದಲ್ಲಿ ನೀಡುವ ಗೌರವ ಬೇರೆ ದೇಶಗಳಲ್ಲಿ ಇಲ್ಲ ಇಲ್ಲಿ. ಎಲ್ಲ ಜನಾಂಗದವರು ಐಕ್ಯತೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶಗಳಲ್ಲಿ ಮತೀಯ ಗಲಬೆಗಳು ಹೆಚ್ಚಾಗುತ್ತಿವೆ ಬಿ ಜೆ ಪಿ ಯವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಹೇಳಿದರು.

ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿ ಶ್ರೀಮಂತರು ಆದ್ದೂರಿ ವಿವಾಹ ಮಾಡುತ್ತಾರೆ ಅದನ್ನು ಅನುಸರಿಸಲು ಹೋಗುವ ಮಧ್ಯಮ ವರ್ಗ ಸಾಲದ ಹೊರೆಯನ್ನು ಹೊತ್ತು ನರಳುತ್ತಿದೆ ಈ ಪರಿಸ್ಥಿತಿ ಬದಲಾಗಬೇಕು, ವಿವಾಹ ವ್ಯಾಪಾರವಾಗಬಾರದು ಎರಡು ಹೃದಯಗಳನ್ನು ಬೆಸೆಯುವ ಬಂಧನವಾಗಬೇಕು ಎರಡು ಕುಟುಂಬಗಳ ಸಂಭ್ರಮವಾಗಬೇಕು ಎಂದರು. ಈ ಬೆಸುಗೆ ಬಹುಕಾಲ ಬಾಳಬೇಕು ಕಿರಿಯರಿಗೆ ಆದರ್ಶವಾಗಬೇಕು, ಯಾವುದೇ ಕಾರಣಕ್ಕೂ ಸಾಮಾಹಿಕ ವಿವಾಹದ ಬಗ್ಗೆ ಕೀಳರಿಮೆ ಕೂಡದು ಸರಳ ವಿವಾಹ ಹೆಮ್ಮೆಯ ಪ್ರತಿಕ ಎಂಬುದನ್ನು ಮರೆಯಬಾರದು ಉಳ್ಳವರು ಬಡವರ ಮಕ್ಕಳ ಮದುವೆಗೆ ಸಹಾಯ ಹಸ್ತ ನೀಡಬೇಕು ಎಂದರು.

ಸಂಸದ ಕೆ ಎಚ್ ಮುನಿಯಪ್ಪ ಮಾತನಾಡಿ ಮದುವೆ ಪವಿತ್ರವಾದದು ಕೈ ಹಿಡಿದ ಹೆಣ್ಣು ಮಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂದರು ದಂಪತಿಗಳು ಸುಖ ದುಃಖವನ್ನು ಸಮನಾಗಿ ಸ್ವೀಕರಿಸಿ ಬಾಳ್ವೆ ನಡೆಸಬೇಕು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ವಿದ್ಯೆಯ ಮೂಲಕ ಬದುಕು ಕಟ್ಟಿಕೊಡಬೇಕು ಎಂದು ಹೇಳಿದರು

ರಾಜ್ಯ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ನಜೀರ್ ಮಾತನಾಡಿ ನವ ದಂಪತಿಗಳಿಗೆ ಶುಭ ಹಾರೈಸಿ ಮಾತನಾಡಿ ಆರ್ ಎಸ್ ಎಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಗಲಬೆ ಸೃಷ್ಠಿಸುತ್ತದೆ ಸಚಿವ ರಮೇಶ್ ಕುಮಾರ್ ಇಡೀ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರವನ್ನು ಸುಧಾರಿಸಿ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಅಲ್ಪ ಸಂಖ್ಯಾತತರಿಗೂ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯ ಮಾವು ಅಭಿವೃದ್ದಿ ಹಾಗೂ ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್ ಗೋಪಾಲಕೃಷ್ಣ ಕೋಚಿಮುಲ್ ಅಧ್ಯಕ್ಷ ಎನ್ ಜಿ ಬ್ಯಾಟಪ್ಪ ದಿಂಬಾಲ ನಾರಾಯಣಸ್ವಾಮಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಪುರಸಭೆ ಅಧ್ಯಕ್ಷರಾದ ರತ್ನಮ್ಮ ನಾಗರಾಜ್, ಉಪಾಧ್ಯಕ್ಷ ಟಿಎಂಬಿ ಮುಕ್ತಿಯಾರ್, ಜಿಲ್ಲಾ ವಕ್ಪ್ ಮಂಡಳಿ ಅಧ್ಯಕ್ಷ ಇದಾಯತ್‍ವುಲ್ಲಾ ಷರೀಫ್, ಪುರಸಭೆ ಸದಸ್ಯರಾದ ಅಬ್ದುಲ್ ಸತ್ತಾರ್, ಅನಿಸ್ ಅಹಮದ್, ಇಪ್ತಿಕಾರ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರೀಫ್ ಮುಖಂಡರಾದ ಎಮನೂರು ನಾಗರಾಜ್, ಮುನಿರಾಜು, ವಿ ಶಂಕರ್, ಗಂಗಾದರ್, ಕ್ರಿಷ್ಣಗೌಡ ,ವೆಂಕಟಾದ್ರಿ.ಎಲ್, ಬಿ.ಜಿ ಸೈಯದ್ ಖಾದರ್, ಇತಾವುಲ್ಲಾ ಕೆ ಕೆ ಮಂಜು ಮುಂಖರು ಉಪಸ್ಥಿತರಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಹಾತ್ಮಾ ಗಾಂಧಿ ಹತ್ಯೆಯ ಕುರಿತಾದಂತೆ ಮರುತನಿಖೆ ನಡೆಸುವ ಅಗತ್ಯವಿಲ್ಲ: ಸುಪ್ರೀಮ್ ಕೋರ್ಟ್

ಮುಂದಿನ ಸುದ್ದಿ »

ದೀಪಕ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೋರೇಟರ್ ಕೈವಾಡ: ದ.ಕ ಜಿಲ್ಲಾ ಕಾಂಗ್ರೆಸ್ ಆರೋಪ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×