Thursday October 12 2017

Follow on us:

Contact Us

ಕೆಲಸದಿಂದ ವಜಾ ಮಾಡಿದ್ದಕ್ಕೆ ಕಂಪೆನಿಯ ಗೇಟ್ ಮುಂದೆಯೇ ಕಾರ್ಮಿಕರ ಪ್ರತಿಭಟನೆ

ಕಾರವಾರ: ಕಳೆದ ಸುಮಾರು ೧6 ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದ 10 ಜನ ಕಾರ್ಮಿಕರನ್ನು ತೆಗೆದು ಹಾಕಿರುವ ಕ್ಯಾಸ್ಸೆಲ್ ಎಕ್ಸ್‌ಪೋರ್ಟ್ಸ್‌ ಪ್ರೈ. ಲಿಮಿಟೆಡ್‌ನ ಕ್ರಮವನ್ನು ಖಂಡಿಸಿ ಅಲ್ಲಿನ ಕಂಪೆನಿಯಿಂದ ವಜಾಗೊಂಡ ಕಾರ್ಮಿಕರು ಬುಧವಾರ ಅಲ್ಲೇ ಗೇಟಿನ ಎದುರು ಪ್ರತಿಭಟನೆ ನಡೆಸಿದರು.

‘ಕಂಪೆನಿಯ ೧೦ ಮಂದಿ ಕಾರ್ಮಿಕರಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಮೂವರನ್ನು ಹೊರ ಹಾಕಲಾಗಿದ್ದು, ಉಳಿದ ಏಳು ಮಂದಿಯಲ್ಲಿ ಆರು ಜನರಿಗೂ ಕೂಡ ನೋಟಿಸ್ ಜಾರಿ ಮಾಡಿದೆ. ಗೇಟಿಗೆ ಬೀಗ ಹಾಕಿ, ಅಲ್ಲಿ ನೋಟಿಸ್‌ ಅನ್ನು ಹಚ್ಚಿಡಲಾಗಿದೆ. ಇದರಿಂದ ಕಾರ್ಮಿಕರೆಲ್ಲರೂ ಅತಂತ್ರರಾಗಿದ್ದಾರೆ. ವ್ಯವಸ್ಥಾಪಕರು ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ನಮ್ಮ ಜೀವನ ಬೀದಿ ಪಾಲಾಗುತ್ತಿದೆ’ ಎಂದು ಕಾರ್ಮಿಕ ಸಂತೋಷ್ ಅವಲತ್ತುಕೊಂಡರು.

‘ಆರಂಭದಲ್ಲಿ ಕೇವಲ 1,800 ಸಂಬಳ ನೀಡಿ ತಮಗೆ ಬೇಕಾದಂತೆ ಎಲ್ಲ ಸಮಯದಲ್ಲಿಯೂ ದುಡಿಸಿಕೊಳ್ಳುತ್ತಿದ್ದರು. ಹೀಗಾಗಿ ಸಂಬಳ ಹೆಚ್ಚಿಸುವಂತೆ ಎಲ್ಲರೂ ಒತ್ತಾಯಿಸಿದ್ದೆವು. ಬಳಿಕ 10 ಜನರ ಸಂಘವನ್ನು ರಚಿಸಿಕೊಂಡು ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಲಾಗಿತ್ತು. ಇದಾದ ನಂತರ 11 ಸಾವಿರಕ್ಕೆ ಏರಿಸಿದ್ದರು. ಆದರೆ ಇದನ್ನು ಸಹಿಸದ ಕಂಪೆನಿಯವರು ಆಗಾಗ ಕಿರುಕುಳ ನೀಡುತ್ತಿದ್ದರು. 5 ನಿಮಿಷ ತಡವಾಗಿ ಕೆಲಸಕ್ಕೆ ಹಾಜರಾದರೂ ಕೂಡ ಒಂದು ಹೊತ್ತಿನ ಸಂಬಳವನ್ನು ಕಡಿತಗೊಳಿಸುತ್ತಿದ್ದರು’ ಎಂದು ಹೇಳಿದರು.

‘ಕಚ್ಛಾ ತೈಲಗಳನ್ನು ಸಾಗಣೆ ಮಾಡುವ ಕಂಪೆನಿ ಇದಾಗಿರುವುದರಿಂದ ಕೆಲಸ ಮಾಡುವಾಗ ಹೆಲ್ಮೇಟ್, ಬೂಟು ಸೇರಿದಂತೆ ಅಗತ್ಯ ಸುರಕ್ಷಾ ಪರಿಕರಗಳನ್ನು ಧರಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಆದರೆ ಇದ್ಯಾವುದನ್ನು ಕಂಪೆನಿ ನೀಡಿರಲಿಲ್ಲ. ಸಮಯಕ್ಕೆ ಸರಿಯಾಗಿ ಸಂಬಳ ನೀಡದೇ, ಪಿಎಫ್, ಇಎಸ್‍ಐ ಸೇರಿದಂತೆ ಯಾವುದೇ ಸೌಲಭ್ಯಗಳು ಕೂಡ ನಮಗಿರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಷ್ಟವೆಂಬ ಕಾರಣ ನೀಡಿದರು: ‘ಕಂಪೆನಿಯು ಉತ್ತಮ ಲಾಭದಲ್ಲಿದ್ದು, ಕಳೆದ ಐದಾರು ದಿನಗಳಿಂದಷ್ಟೆ ಯಾವುದೇ ವ್ಯವಹಾರವಿರಲಿಲ್ಲ. ಆದರೆ ಈ ಹಿಂದೆ ಉತ್ತಮ ವ್ಯವಹಾರ ನಡೆಸಿದ್ದು, ರಾಜ್ಯಮಟ್ಟದ ಮೂರು ಪ್ರಶಸ್ತಿಗಳನ್ನು ಕೂಡ ತನ್ನದಾಗಿಸಿಕೊಂಡಿದೆ. ಆದರೆ ಈಗ ನಷ್ಟವಾಗಿದೆ ಎಂದು ಕಾರಣ ನೀಡಿದ್ದಾರೆ. ಕಾರ್ಮಿಕರು ಸಂಘ ಕಟ್ಟಿಕೊಂಡಿದ್ದಾಗಿನಿಂದ ಕಂಪೆನಿ ನಮಗೆ ಕಿರುಕುಳ ನೀಡುತ್ತಿದೆ. ಹೀಗಾಗಿ ಸಂಘದ ಅಧ್ಯಕ್ಷರನ್ನು ವರ್ಷದ ಹಿಂದೆ ವಜಾಗೊಳಿಸಿ, ಕೆಲ ತಿಂಗಳ ಹಿಂದೆ ಮೂರು ಜನರಿಗೆ ಶೋಕಾಸ್ ನೋಟಿ ಜಾರಿಗೊಳಿಸಿ ವಜಾ ಮಾಡಿತ್ತು’ ಎಂದು ದೂರಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹಾದಿ ತಪ್ಪಿಸುವ ಸಾಮಾಜಿಕ ಜಾಲತಾಣಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕರೆ: ಅಭಿನವ ಖರೆ

ಮುಂದಿನ ಸುದ್ದಿ »

ಸೌಹಾರ್ದಯುತ ಸಮಾಜ ನಿರ್ಮಿಸುವುದು ಇಂದಿನ ಅನಿವಾರ್ಯತೆಯಾಗಿದೆ: ಶಕುಂತಲಾ ಶೆಟ್ಟಿ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×