Saturday October 21 2017

Follow on us:

Contact Us

ರಕ್ತದಾನ ಮನುಷ್ಯ ಸಂಬಂಧವನ್ನು ಹೆಚ್ಚಿಸುತ್ತದೆ: ನಾಗರಾಜ ಹರಪನಹಳ್ಳಿ

ನ್ಯೂಸ್ ಕನ್ನಡ ವರದಿ-(21.10.17): ಕಾರವಾರ: ‘ರಕ್ತದಾನ ಶ್ರೇಷ್ಠದಾನವಾಗಿದ್ದು, ಇದು ಜಾತಿ, ಧರ್ಮ ಮೀರಿದ ಮನುಷ್ಯ ಸಂಬಂಧವನ್ನು ಹೆಚ್ಚಿಸುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಹೇಳಿದರು.

ಇಲ್ಲಿನ ಆಝಾದ್ ಯೂಥ್ ಕ್ಲಬ್, ಸಾರ್ವಜನಿಕ ಶ್ರೀಮಹಾಕಾಳಿ ಮಾತಾ ಪೂಜಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಡೆಪ್ಕೋ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.‘ಇದು ಇನ್ನೊಂದು ಜೀವವನ್ನು ಉಳಿಸಲು ನೆರವಾಗುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ರಕ್ತವನ್ನು ದಾನ ಮಾಡಬೇಕು. ಇಂಥ ಸಮಾಜಮುಖಿ ಕಾರ್ಯಗಳಲ್ಲಿ ಎಲ್ಲರೂ ತೊಡಗಿಕೊಳ್ಳುವುದರಿಂದ ಅದು ಉಳಿದವರಿಗೆ ಪ್ರೇರಣೆ ನೀಡುತ್ತದೆ’ ಎಂದರು.

ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಆಝಾದ್ ಯೂಥ್ ಕ್ಲಬ್ನ ಅಧ್ಯಕ್ಷ ನಜೀರ್ ಅಹಮದ್ ಯು.ಶೇಖ್, ನಗರಸಭಾ ಸದಸ್ಯ ಪ್ರದೀಪ್ ಗುನಗಿ, ಕಸಾಪ ಸದಸ್ಯೆ ಫೈರೋಜಾ ಬೇಗಂ ಶೇಖ್, ಶ್ರೀಮಹಾಕಾಳಿ ಮಾತಾ ಪೂಜಾ ಸಮಿತಿಯ ಅಧ್ಯಕ್ಷ ತಪನ್ ಭುನಿಯಾ, ಕಾರ್ಯದರ್ಶಿ ಬಿಸ್ವನಾಥ ಮಂಡಲ್ ಉಪಸ್ಥಿತರಿದ್ದರು

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅಪ್ರಬುದ್ಧ ಮಾತನ್ನಾಡುವ ಅನಂತ್ ಕುಮಾರ್ ಹೆಗ್ಡೆಯನ್ನು ಸಚಿವಸ್ಥಾನದಿಂದಲೇ ಹೊರಹಾಕಬೇಕು: ದೇವೇಗೌಡ

ಮುಂದಿನ ಸುದ್ದಿ »

ನನ್ನ ಹೆಸರು ಮುದ್ರಿಸಿದರೆ ವೇದಿಕೆಯಲ್ಲೆ ಟಿಪ್ಪುವಿಗೆ ಧಿಕ್ಕಾರ ಕೂಗುತ್ತೇನೆ: ಅನಂತಕುಮಾರ್ ಹೆಗ್ಡೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×