Wednesday June 14 2017

Follow on us:

Contact Us

ಮೃತ್ಯುವನ್ನು ಆಹ್ವಾನಿಸುತ್ತಿರುವ ಹೆದ್ದಾರಿ ಪಕ್ಕದಲ್ಲಿ ಕುಸಿದ ಬಾವಿ!

 

ನ್ಯೂಸ್ ಕನ್ನಡ ವರದಿ-(14.06.17)ಕಾಪು: ಆಕಸ್ಮಿಕವಾಗಿ ಕೆರೆ, ಕೊಳವೆ ಬಾವಿ, ತೆರೆದ ಬಾವಿಗೆ ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ಈಗಾಗಲೇ ಅಲ್ಲಲ್ಲಿ ಕೇಳಿ ಬರುತ್ತಿದ್ದಂತೆಯೇ ಇವುಗಳ ಸಾಲಿಗೆ ಎರ್ಮಾಳು ಜನಾರ್ದನ ದೇವಳದ ಪಶ್ಚಿಮ ದಿಕ್ಕಿನಲ್ಲಿರುವ ಹೆದ್ದಾರಿ ಪಕ್ಕದಲ್ಲಿರುವ ಹಲೆಯ ಬಾವಿಯೊಂದು ಬಾಯಿ ತೆರೆದು ಮೃತ್ಯುವನ್ನು ಆಹ್ವಾನಿಸುತ್ತಿದೆ.

ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದ ಪೇಟೆಮನೆ ಲಕ್ಷ್ಮೀ ಶೆಟ್ಟಿಯವರು ಚತುಷ್ಪತ ರಸ್ತೆ ಕಾಮಗಾರಿಗೆ ಹೆದ್ದಾರಿ ಇಲಾಖೆಗೆ ಜಾಗ ಬಿಟ್ಟುಕೊಟ್ಟಿದ್ದರು.ಅವರ ತೋಟದಲ್ಲಿದ್ದ ಹಲವು ವರ್ಷಗಳ ಹಿಂದಿನ  ಆಳವಾದ ಪುರಾತನ ಬಾವಿಯೊಂದು ತೋಟ ಬಿಟ್ಟು ಹೆದ್ದಾರಿಗೆ ಸಮೀಪಿಸಿದೆ. ಇದಕ್ಕೆ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ಸರಿಯಾಗಿ ಮಣ್ಣು ತುಂಬದೆ  ಬಾವಿಯ ಸುತ್ತಲೂ ಕಟ್ಟಲಾಗಿದ್ದ ಕಟ್ಟೆಯನ್ನು ಒಡೆದು ಬಾವಿಯೊಳಗೆ ಹಾಕಿರುವುದರಿಂದ ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಬಾರಿ ಮಳೆಗೆ ಒಳಗಿಂದೊಳಗೆ ಮಣ್ಣು ಕುಸಿದು ಮೃತ್ಯುವನ್ನು ಆಹ್ವಾನಿಸುವಂತೆ ನಿಂತಿದ್ದು ಯಾವಾಗ ಬೇಕಾದರೂ ಅವಘಡ ಸಂಭವಿಸುವುದನ್ನು ತಳ್ಳಿ ಹಾಕುವಂತಿಲ್ಲ.

ಸಾರ್ವಜನಿಕ  ಸ್ಥಳವಾದ ಈ ಭಾಗದಲ್ಲಿ ದಾರಿ ಹೋಕರು,ಶಾಲಾ ಮಕ್ಕಳು, ವಾಹನ ಪ್ರಯಾಣಿಕರು ಈ ಬಾವಿಗೆ ಬೀಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಒಂದೋ ಸಂಪೂರ್ಣ ಮಣ್ಣು ಹಾಕಿ ಬಾವಿ ಮುಚ್ಚಲಿ ಅಥವಾ ಕಟ್ಟೆ ಕಟ್ಟಿ ಅಭಿವೃದ್ಧಿಪಡಿಸಲಿ ಎಂಬ ಆಕ್ರೋಶದ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಒಟ್ಟಾರೆಯಾಗಿ ಮೃತ್ಯಕೂಪದಂತೆ ಕಂಡು ಬರುತ್ತಿರುವ ಬಾವಿಗೊಂದು ಸಂಬಧಪಟ್ಟ ಇಲಾಖೆ ಮುಕ್ತಿ ತೋರಿಸಬೇಕಿದೆ ಎಂಬುವುದೆ ಸಾರ್ವಜನಿಕರ ಆಗ್ರಹ.

ವಿಶೇಷ ವರದಿ : ಶಫೀ ಉಚ್ಚಿಲ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಉಡುಪಿ: ಇಂದ್ರಾಳಿ ಸಮೀಪ ಬೈಕ್ ಸವಾರನ ಕಿಸೆಯಲ್ಲಿದ್ದ ಮೊಬೈಲ್ ಸ್ಫೋಟ !!

ಮುಂದಿನ ಸುದ್ದಿ »

ಗುಡ್ಡ ಕುಸಿತ: ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಹಾಗೂ ಐ.ಆರ್‌.ಬಿ ಸಂಸ್ಥೆಗೆ ಜಿಲ್ಲಾಧಿಕಾರಿ ತಾಕೀತು 

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಕ್ರಿಕೆಟಿಗ ಶ್ರೀಶಾಂತ್!

    August 16, 2017

    ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್‌ ಆರೋಪಗಳಿಂದ ಕಂಗಾಲಾಗಿದ್ದ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶ್ರೀಶಾಂತ್ ಇತ್ತೀಚೆಗಷ್ಟೆ ನಿರಾಳರಾಗಿದ್ದಾರೆ. ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×