Saturday August 12 2017

Follow on us:

Contact Us

ಕಾಪು ಕ್ಷೇತ್ರವನ್ನು ಶಿಕ್ಷಣ ಕೇಂದ್ರವನ್ನಾಗಿಸುವ ಸಂಕಲ್ಪ : ಸೊರಕೆ 

ನ್ಯೂಸ್ ಕನ್ನಡ ವರದಿ-(12.08.17): ಕಾಪು: ಕಾಪುವಿಗೆ ರಾಜಕೀಯ ಶಕ್ತಿ ನೀಡಿದವರು ದಿ.ಕಾಪು ಬಾಸ್ಕರ್ ಶೆಟ್ಟಿಯವರು .ರಾಜ್ಯದಲ್ಲಿ ಕಾಪು ವಿಧಾನ ಸಭಾ ಕ್ಷೇತ್ರಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಧಾರ್ಮಿಕ ಕ್ಷೇತ್ರದ, ಪ್ರವಾಸೋದ್ಯಮದ ಕೇಂದ್ರವಾಗಿದ್ದು ಅಂತರಾಷ್ಟ್ರೀಯ ಪ್ರಸಿದ್ಧಿ ಪಡೆದಿದೆ. ಕಾಪುವನ್ನು ರಾಷ್ಟ್ರೀಯ ಭೂಪಟದಲ್ಲಿ ಗುರುತಿಸಲ್ಪಡುವ ಶಿಕ್ಷಣ ಕೇಂದ್ರವನ್ನಾಗಿಸುವ ಸಂಕಲ್ಪ ನನ್ನದಾಗಿದೆಂದು ಮಾಜಿ ಸಚಿವರು ,ಶಾಸಕರಾದ ಶ್ರೀ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಕಾಪು ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶವಾಗಿರುವುದರಿಂದ ಈಗಾಗಲೇ ಪುರಸಭೆಯನ್ನಾಗಿಸಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ತಾಲೂಕು ಕೇಂದ್ರವನ್ನಾಗಿ ಘೋಷಿಸಲಾಗಿದ್ದು, 36 ಸರಕಾರಿ ಕಚೇರಿಗಳು ಸಹಿತ ತಾಲೂಕು ನ್ಯಾಯಾಲಯ, ತಾಲೂಕು ಆಸ್ಪತ್ರೆ, ತಾಲೂಕು ಕ್ರೀಡಾಂಗಣ ಅನುಷ್ಠಾನಗೊಳ್ಳಲಿದೆ. ಕ್ಷೇತ್ರದ ಸುಮಾರು 32 ಕೆರೆಗಳ ಪುನಃಶ್ಚೇತನಗೊಳಿಸಲಾಗಿದೆ.   ರಸ್ತೆ-ಸೇತುವೆ-ಕುಡಿಯುವ ನೀರು ಸಹಿತ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸರಕಾರದ ಹಂತದಲ್ಲಿ 600 ಕೋಟಿಗೂ ಮಿಕ್ಕಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಕಾಪುವಿನಲ್ಲಿ ಬೃಹತ್ ಯೋಜನೆಗಳಾದ ಪಾದೂರು ಕಚ್ಚಾ ತೈಲ ಶೇಖರಣಾ ಘಟಕ, ಎಲ್ಲೂರಿನಲ್ಲಿ ಯು.ಪಿ.ಸಿ.ಎಲ್, ಫಲಿಮಾರಿನಲ್ಲಿ ಸುಜ್ಲಾನ್ ಕಾರ್ಯಾಚರಿಸುತ್ತಿದೆ.  ನಂದಿಕೂರು ಮತ್ತು ಬೆಳಪುವಿನಲ್ಲಿ ಸಣ್ಣ ಕೈಗಾರಿಕೆಗಳ ಪಾರ್ಕ್ ನಿರ್ಮಾಣ ವಾಗಿರುತ್ತದೆ. ಈ ಎಲ್ಲಾ ಯೋಜನೆಗಳಲ್ಲಿ ನಮ್ಮ ಕ್ಷೇತ್ರದ ಯುವಕರಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಉದ್ಯೋಗ ದೊರಕಬೇಕು, ಇದಕ್ಕೆ ಬೇಕಾಗುವ ನುರಿತ ಯುವಕರನ್ನು ಬಳಸಿಕೊಳ್ಳಲು ಅದಕ್ಕನುಗುಣವಾಗಿ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗುವುದೆಂದು ಸೊರಕೆ ತಿಳಿಸಿದ್ದಾರೆ.

-ಎಲ್ಲೂರಿನಲ್ಲಿ ಐ.ಟಿ.ಐ ಕೇಂದ್ರ ಸ್ಥಾಪನೆ.

-ಪಡುಬಿದ್ರಿ-ಹೆಜಮಾಡಿ ಪರಿಸರದಲ್ಲಿ ಪಾಲಿಟೆಕ್ನಿಕ್ ಕೇಂದ್ರ.

-ಕಳ್ತೂರಿನಲ್ಲಿ ಮೊರಾರ್ಜಿ ವಸತಿ ಶಾಲೆ.

-ಬೆಳಪುವಿನಲ್ಲಿ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ.

-ಅಲೆವೂರಿನಲ್ಲಿ ವಿ.ವಿ.ವಿಜ್ಞಾನ ಕೇಂದ್ರ ಹಾಗೂ ಕೇಂದ್ರ ವಿದ್ಯಾಲಯ.

-ಮಲ್ಲಾರಿನಲ್ಲಿ ಮೌಲಾನಾ ಅಜಾದ್ ವಸತಿ ಶಾಲೆ.

-ಕಾಪುವಿನಲ್ಲಿ ಪಿ.ಜಿ.ಸೆಂಟರ್ ಸಹಿತ ಎಂ.ಎಸ್.ಡಬ್ಲ್ಯೂ ಶಿಕ್ಷಣ ವ್ಯವಸ್ಥೆಗಳಿಗೆ ಸರಕಾರಿ ನಿವೇಶನ.

ಈಗೆ ಹತ್ತು ಹಲವಾರು ಯೋಜನೆಗಳಿಂದಾಗಿ ಕಾಪು ಮುಂದಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಣ ಕೇಂದ್ರವಾಗಲಿದೆ ಎಂದು ಶಾಸಕರಾದ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸುಧಾಕರ್ ಪಡುಬಿದ್ರಿ

ಮುಂದಿನ ಸುದ್ದಿ »

ಉತ್ತರಪ್ರದೇಶ: ಆಕ್ಸಿಜನ್ ಇಲ್ಲದೇ ಪರದಾಡುತ್ತಿದ್ದ ಹಲವು ಮಕ್ಕಳನ್ನು ರಕ್ಷಿಸಿದ ಡಾ. ಕಫೀಲ್ ಅಹ್ಮದ್

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×