Wednesday December 14 2016

Follow on us:

Contact Us

ತುಳುನಾಡ ಒತ್ತೊರ್ಮೆ-ಜನಮೈತ್ರಿ ಸಂಗಮ

ನ್ಯೂಸ್ ಕನ್ನಡ ವರದಿ(14.12.2016)ಕಾಸರಗೋಡು: ಹೃದಯಕ್ಕಿಂತ ಮಿಗಿಲು ಜಾತಿ, ಭಾಷೆಯಲ್ಲ , ಭಾಷೆ ಕೇವಲ ವ್ಯವಹಾರಿಕವಾದುದು ಹೊರತು ಯಾವುದೇ ಸಮುದಾಯಕ್ಕೆ ಮೀಸಲಾದುದಲ್ಲ ಎಂದು ರಾಜ್ಯ ಸಭಾ ಮಾಜಿ ಸದಸ್ಯ ಹಾಗೂ ಪ್ರಮುಖ ವಾಗ್ಮಿ ಅಬ್ದುಲ್ ಸಮದ್ ಸಮಾದಾನಿ ಅಭಿಪ್ರಾಯಪಟ್ಟರು.

ಅವರು ಬದಿಯಡ್ಕದಲ್ಲಿ ನಡೆಯುತ್ತಿರುವ ವಿಶ್ವ ತುಳುವೆರೆ ಆಯನೊದ ಕೊನೆಯ ದಿನವಾದ ಮಂಗಳವಾರ ಸಂಜೆ ನಡೆದ ತುಳುನಾಡ ಒತ್ತೊರ್ಮೆ-ಜನಮೈತ್ರಿ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹೃದಯದೊಳಗಿನ ಭಾಷೆಯಲ್ಲಿ ಅನುಸರಿಸುವುದು ನಾವೆಲ್ಲ ಒಂದೆಂಬ ಭಾವ ಇರಬೇಕು. ತುಳುನಾಡು ವೈವಿಷ್ಟ್ಯಪೂರ್ಣ ಸಂಸ್ಕೃತಿ,ಜೀವನ ಶೈಲಿಯೊಂದೊಡಗೂಡಿ ಮಾನವೀಯತೆ,ಸಮೃದ್ದತೆಯ ಪ್ರತೀಕವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಸರ್ವೋತ್ತಮ ಶೆಟ್ಟಿ ಅಬುದಾಬಿ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ರಾಹುಲ್ ಈಶ್ವರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಅಥಿತಿಗಳಾಗಿ ಲೇಖಕ ಸ್ಟೀಫನ್ ಕ್ವಾಡ್ರಸ್ ಪೆರ್ಮುದೆ, ಮಲ್ಲಿಕಾ ರೈ ಬೆಂಗಳೂರು, ವೇ.ಮೂ.ಶಂಕರನಾರಾಯಣ ಭಟ್ ಪಳ್ಳತ್ತಡ್ಕ, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಶಾಸಕ ಎನ್ ಎ ನೆಲ್ಲಿಕುನ್ನು, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ, ಮುನಿರಾಜ ರೆಂಜಾಳ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ, ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್.ಜನಮೈತ್ರಿ ಪ್ರಶಸ್ತಿ ಮೆಟ್ರೋ ಮುಹಮ್ಮದ್ ಹಮ್ಮದ್ ಹಾಜಿ,ಬಶೀರ್ ವೆಳ್ಳಿಕ್ಕೋತ್ ಮೊದಲಾದವರು ಉಪಸ್ಥಿತರಿದ್ದರು.

nkskkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮೀಲಾದುನ್ನೆಬಿಯಂದು “ಬ್ಲಡ್ ಡೋನರ್ಸ್ ಮಂಗಳೂರು” ತಂಡದಿಂದ ರಕ್ತದಾನ

ಮುಂದಿನ ಸುದ್ದಿ »

ಕರ್ತವ್ಯ ನಿರತ ಪೇದೆ ಮೇಲೆ ಹಲ್ಲೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ರಾಜಕೀಯ ಪ್ರವೇಶದ ಕುರಿತು ನಟ ಯಶ್ ಹೇಳಿದ್ದೇನು ಗೊತ್ತೇ?

    October 9, 2017

    ನ್ಯೂಸ್ ಕನ್ನಡ ವರದಿ-(09.10.17): ಸದ್ಯ ಚಿತ್ರರಂಗದೊಂದಿಗೇ ನಟರು ರಾಜಕೀಯದತ್ತ ಒಲವು ತೋರಿಸುತ್ತಿದ್ದು, ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಉಪೇಂದ್ರ ಪ್ರಜಾಕೀಯ ಎಂಬ ಪಕ್ಷವನ್ನೇ ಕಟ್ಟಿದ್ದರು. ಇನ್ನು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಕಮಲ್ ಹಾಸನ್ ಕೂಡಾ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×