Friday June 16 2017

Follow on us:

Contact Us

ದುಬೈನಲ್ಲಿ ಎಚ್.ಎಮ್.ಸಿ ಯುನೈಟೆಡ್ ವತಿಯಿಂದ ಸರ್ವಧರ್ಮ ಸೌಹಾರ್ದತೆಯ ಇಫ್ತಾರ್ ಕೂಟ

ನ್ಯೂಸ್ ಕನ್ನಡ ವರದಿ (16.06.2017) : ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್ ಯುನೈಟೆಡ್(ಎಚ್.ಎಮ್.ಸಿ) ವತಿಯಿಂದ ಸರ್ವ ಧರ್ಮ ಸೌಹಾರ್ದಯ ಇಫ್ತಾರ್ ಕೂಟ ದುಬೈನ ಗ್ರ್ಯಾಂಡ್ ಎಕ್ಸಾವ್ವಿಯರ್ ಹೋಟೆಲ್ ನಲ್ಲಿ ಜೂನ್ 16 ಶುಕ್ರವಾರದಂದು ಬಹಳಾ ಯಶಸ್ವಿಯಾಗಿ ನಡೆಯಿತು.

ಎಚ್.ಎಮ್.ಸಿಯ ಸ್ಥಾಪಕಾಧ್ಯಕ್ಷ ಶಕೀಲ್ ಹಸನ್ ನೇತೃತ್ವದಲ್ಲಿ ನಡೆದ ಜಾತ್ಯಾತೀತ ಭಾರತದ ಸೌಹಾರ್ದತೆಯ ಸಂದೇಶವನ್ನು ಸಾರುವ ಈ ಇಫ್ತಾರ್ ಕೂಟ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಎಮ್.ಸಿ ಯುನೈಟೆಡ್ ನ ಗೌರವಾಧ್ಯಕ್ಷರಾದ ಕೆ.ಪಿ. ಇಬ್ರಾಹಿಮ್ ಮಟ್ಪಾಡಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್‌ನ ಚೇರ್‌ಮೆನ್ ಪ್ರವೀಣ್ ಕುಮಾರ್ ಶೆಟ್ಟಿ ಭಾರತ ದೇಶ ಸೌಹಾರ್ದತೆಗೆ ಹೆಸರುವಾಸಿಯಾಗಿದೆ, ನಾವು ಬಾಲ್ಯದಲ್ಲಿ ನಮ್ಮ ಊರಲ್ಲಿ ಕಂಡ ಜಾತಿಧರ್ಮ ಬೇಧವಿಲ್ಲದೇ ಕೂಡಿ ಬಾಳುವ ಸಾಮಾಜಿಕ ವಾತಾವರಣ ಇನ್ನೊಮ್ಮೆ ಬರಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ಆಕ್ಯ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ನ ಚೇರ್‌ಮೆನ್ ಹರೀಶ್ ಶೇರಿಗಾರ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕೆ.ಎನ್.ಆರ್.ಐ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅಂಬಳತೆರೆ, ಯೋಗೀಶ್ ದೇಶಪಾಂಡೆ, ಇಮ್ರಾನ್ ಖಾನ್, ಸುನಿಲ್ ಬಾಗಲ್ಕೋಟ್ಕರ್, ಗಣೇಶ್ ರೈ, ಬಿ.ಡಬ್ಲ್ಯು.ಎಫ್ ಅಧ್ಯಕ್ಷ ಮಹಮದ್ ಅಲಿ ಉಚ್ಚಿಲ ಉಪಸ್ಥಿತರಿದ್ದರು. ಎಚ್.ಎಮ್.ಸಿ ಯುನೈಟೆಡ್ ನ ಕಾರ್ಯಕರ್ತರು ಇಫ್ತಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಒಳಗಾದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಲೇರಿಯ ಮಾಸಾಚರಣೆ ಪ್ರಯುಕ್ತ ಆರೋಗ್ಯ ಇಲಾಖೆಯಿಂದ ಬೃಹತ್ ಜನ ಜಾಗೃತಿ ರ್ಯಾಲಿ

ಮುಂದಿನ ಸುದ್ದಿ »

ಪಾಕ್ ನಾಯಕನ ಮಗ ಅಬ್ದುಲ್ಲಾ ಜೊತೆ ಧೋನಿ ಫೋಟೋ: ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×