Friday June 16 2017

Follow on us:

Contact Us

ಮಲೇರಿಯ ಮಾಸಾಚರಣೆ ಪ್ರಯುಕ್ತ ಆರೋಗ್ಯ ಇಲಾಖೆಯಿಂದ ಬೃಹತ್ ಜನ ಜಾಗೃತಿ ರ್ಯಾಲಿ

ನ್ಯೂಸ್ ಕನ್ನಡ ವರದಿ-(16.06.17)ದಿನಾಂಕಃ 16-06-2017 ರಂದು ಬೀದರ ಜಿಲ್ಲೆಯಲ್ಲಿ ಜೂನ್-2017 ಮಲೇರಿಯ ಮಾಸಾಚರಣೆ ಪ್ರಯುಕ್ತ ಆರೋಗ್ಯ ಇಲಾಖೆಯಿಂದ ಬೃಹತ್ ಮಲೇರಿಯ ವಿರೋಧಿ ಮಾಸಾಚರಣೆ ಅಂಗವಾಗಿ ಬೀದರ ನಗರದಲ್ಲಿ “ಬೃಹತ್ ವಾಹನಗಳ ಜನ ಜಾಗೃತಿ ರ್ಯಾಲಿಯನ್ನು” ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣದಲ್ಲಿ ಮಾನ್ಯ ಡಾಃಆರ್.ಶಲ್ವಮಣಿ, ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೀದರ ರವರು ರ್ಯಾಲಿಯನ್ನು ಉದ್ಘಾಟಿಸಿದರು ಮತ್ತು ಶ್ರೀಮತಿ.ಶಾಲಿನಿ ರಾಜು ಚಿಂತಾಮಣಿ ಅಧ್ಯಕ್ಷರು ನಗರ ಸಭೆ ಬೀದರ ರವರು ಬಾವೂಟವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು.

ಈ ಜಾಥಾದಲ್ಲಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಡಾ: ಅನೀಲ್ ಚಿಂತಾಮಣಿ, ಡಾಃಶಿವಶಂಕರ್ ಬಿ, ಡಾಃರವೀಂದ್ರ ಸಿರಸಗೆ, ಡಾಃರಾಜಶೇಖರ ಪಾಟೀಲ್, ಡಾಃಇಂದುಮತಿ ಪಾಟೀಲ್, ಎಎಲ್‍ಒ ಜಿ.ಎನ್.ಸತ್ಯಪ್ಪಾ, ಎಯುಒ ಶಾಂತಪ್ಪಾ ಸುಂದರಕರ್, ಶ್ರವಣ ಜಾಧವ, ಅರುಣ ಕುಮಾರ್, ಹಿರಿಯ ಮೇಲ್ವಿಚಾರಕಾದ ಮೆಹಿಬುಬಮಿಯಾ, ಮಲ್ಲಿಕಾರ್ಜುನ ಸದಾಶಿವ, ಪ್ರಕಾಶ್ ಎನ್, ಶಿವಕಾಂತ ಮಿತ್ರ, ಬಾಬುರಾವ ಪ್ರಿಯಾ, ರಾಜುಕುಲರ್ಣಿ, ನಾಗಶಟ್ಟಿ ತರನಳ್ಳಿ, ಶರಣಪ್ಪಾ ರಾಗ, ವೀರಶಟ್ಟಿ ಚನ್ನಶಟ್ಟಿ, ಕಿಆಸ ರಾದ ಸಂಗಶೇಟ್ಟಿ ಬಿರಾದರ್, ಸಮಿಯೋದ್ದಿನ್ ಹಾಗು ಆರೋಗ್ಯ ಮತ್ತು ಕು.ಕ.ಇಲಾಖೆಯ, ಜಿಲ್ಲಾ ಮಲೇರಿಯ ಕಛೇರಿಯ,ಜಿಲ್ಲಾ ಪ್ರಯೋಗಾಲಯದ, ಡಿಎಲ್‍ಒ ಕಛೇರಿಯ ಸಿಬ್ಬಂದಿಗಳು ಮತ್ತು ಜಿಲ್ಲಾ ಜಿಎನ್‍ಎಂ ತರಬೇತಿ ಕೇಂದ್ರದ ಸಿಬ್ಬಂಧಿ ವರ್ಗದವರು ಮತ್ತು ವಿದ್ಯಾಥಿರ್üಗಳು ರ್ಯಾಲಿಯಲ್ಲಿ ಭಾಗವಹಿಸಿದರು.

ಮಲೇರಿಯ ಮಾಸಾಚರಣೆಯ ಮಹತ್ವ ಸಾರ್ವಜನಿಕರಿಗೆ ಮಲೇರಿಯ ನಿಯಂತ್ರಣಕ್ಕಾಗಿ ಅರಿವನ್ನು ಮೂಡಿಸುವ ಫಲಕಗಳಾದ, ಯಾವುದೇ ಜ್ವರ ಇರಲಿ ಇದು ಮಲೇರಿಯ ಇರಬಹುದು, ಮಲೇರಿಯ ಸೊಳ್ಳೆ ಕಡಿತ ದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ, ಮಲಗುವಾಗ ಮೈ ತುಂಬ ಬಟ್ಟೆ ಧರಿಸುವುದು ಹಾಗೂ ಸೊಳ್ಳ ಉಪಯೋಗಿಸುವುದು,ಮನೆಯಲ್ಲಿ ಬಳಕೆಗಾಗಿ ಬಳಸುವ ನೀರಿನ ತಾಣಗಳನ್ನು ವಾರಕ್ಕೊಂದು ಬಾರಿ ತಪ್ಪದೇ ಖಾಲಿ ಮಾಡುವುದು, ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಹಾಗೂ ಸಮುದಾಯದಲ್ಲಿ ಮಲೇರಿಯ ನಿಯಂತ್ರಣ ಕುರಿತು ಅರಿವು ಮೂಡಿಸುವ ಫಲಕಗಳು ಸಾರ್ವಜನಿಕರಿಗೆ ಆಕರ್ಷಿಸಿದವು. ಯಾವುದೇ ಜ್ವರ ಇರಲಿ, ಜ್ವರ ಬಂದ ಕೂಡಲೇ ರಕ್ತ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು, ಹಾಗೂ ಮಲೇರಿಯ ರೋಗವು ಸೊಳ್ಳೆಗಳಿಂದ ಹರಡುತ್ತದೆ ಮತ್ತು ಸಮುದಾಯವು ತಮ್ಮ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಿದಲ್ಲಿ ಸೊಳ್ಳೆಗಳ ಬೆಳವಣಿಗೆ ನಿಯಂತ್ರಿಸಿ ಮಲೇರಿಯ ಹಾಗೂ ಇತರ ಸೊಳ್ಳೆ ಜನಿತ ರೋಗಗಳನ್ನು ನಿಯಂತ್ರಿಸಬಹುದಾಗಿದೆ ಎಂದು ವಿವರಿಸಿದರು.

ಜಾವೇದ ಕಲ್ಯಾಣಕರ್‍ ರವರು ಮೈಕ್ ಮೂಲಕ ಘೋಷಣೆಗಳೊಂದಿಗೆ ಜನ ಜಾಗೃತಿ ರ್ಯಾಲಿಯು ನಗರದ ಪ್ರಮುಖ ರಸ್ತೆಗಳಾದ ಜನವಾಡಾ ರಸ್ತೆ, ಅಂಬೇಡ್ಕರ ವೃತ್ತ, ಗವಾನ್ ಚೌಕ್, ಚೌಬಾರಾ, ಮಂಗಲಪೇಟ್, ಅಬ್ದುಲ್ ಪೈಜ್ ದರ್ಗಾ, ಲಾಡಗೇರಿ, ಕುಂಬಾರವಾಡ್, ಸಿದ್ಧಾರೂಢ ಮಠ, ಮೈಲೂರು, ಚಿದ್ರಿ, ಆದರ್ಶ ಕಾಲೋನಿ, ನೌಬಾದ ಹೊಸ ಬಸ್ ನಿಲ್ದಾಣ ಮಾರ್ಗದ ಮುಖಾಂತರ ಹಾಯ್ದು ಹೊಸ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ರ್ಯಾಲಿಯು ಕೊನೆಗೊಂಡಿತು. ರ್ಯಾಲಿಯಲ್ಲಿ ಭಾಗವಹಿಸಿ ಭದ್ರತೆ ಒದಗಿಸಿದ ಪೋಲೀಸ್ ಇಲಾಖೆಗೆ, ಮಾಧ್ಯಮ/ಪತ್ರಕರ್ತರಿಗೆ ಹಾಗೂ ಜನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿ ಹಾಗೂ ಗಣ್ಯವ್ಯಕ್ತಿಗಳಿಗೆ ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾಃಅನೀಲ್ ಚಿಂತಾಮಣಿ ಧನ್ಯವಾದಗಳನ್ನು ಅರ್ಪಿಸಿ ಜಾಥಾವನ್ನು ಮುಕ್ತಾಯಗೊಳಿಸಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕೋಮುವಾದಿಗಳೊಂದಿಗೆ ಕೈಜೋಡಿಸಿದ ಜೆಡಿಎಸ್ ನ ಬಣ್ಣ ಮತ್ತೊಮ್ಮೆ ಬಯಲಾಗಿದೆ : ಸಿದ್ದರಾಮಯ್ಯ

ಮುಂದಿನ ಸುದ್ದಿ »

ದುಬೈನಲ್ಲಿ ಎಚ್.ಎಮ್.ಸಿ ಯುನೈಟೆಡ್ ವತಿಯಿಂದ ಸರ್ವಧರ್ಮ ಸೌಹಾರ್ದತೆಯ ಇಫ್ತಾರ್ ಕೂಟ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×