Friday May 5 2017

Follow on us:

Contact Us

ಕೂದಲು ಉದುರುತ್ತಿವೆಯಾ ? ಈ ಅಭ್ಯಾಸಗಳನ್ನು ಕೂಡಲೇ ನಿಲ್ಲಿಸಿ..

ನ್ಯೂಸ್ ಕನ್ನಡ ವರದಿ (05.05.2017) ಪ್ರತಿಯೊಬ್ಬ ಹುಡುಗಿಯೂ ದಪ್ಪನೇಯ, ಸದೃಢ ಕೂದಲು ಇರಲು ಬಯಸುತ್ತಾಳೆ, ಆದರೆ ಈ ಆಧುನಿಕ ತಂತ್ರಜ್ಞಾನ ಜೀವನದಲ್ಲಿ ಕೂದಲು ಉದುರುವುದು ಪ್ರತಿಯೊಂದು ಹುಡುಗಿಯರ ಸಮಸ್ಯೆಯಾಗಿದೆ. ಕಾಲೇಜು ಹುಡುಗಿಯರು, ಮದುವೆಗೆ ತಯಾರಾದ ಮದುಮಗಳು ಈ ಕೂದಲಿನ ಸಮಸ್ಯೆಯನ್ನು ಬಹಳಾ ಕಷ್ಟದಿಂದ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

ಆದರೆ ನಮ್ಮ ಕೆಲವು ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸಿಸುವ ಮೂಲಕ ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.

ಒದ್ದೆ ಕೂದಲು ತುಂಬಾ ಬಲಹೀನವಾಗಿರುತ್ತದೆ ಹಾಗಾಗಿ ಸ್ನಾನ ಮಾಡಿ ಬಂದ ಕೂಡಲೇ ಒದ್ದೆ ಕೂದಲನ್ನು ಬಾಚಿ ಜುಟ್ಟು ಕಟ್ಟುವುದು, ಜಡೆ ಕಟ್ಟುವುದು ಮಾಡಲೇ ಬೇಡಿ.

ರಾಸಾಯನಿಕ ವಸ್ತುಗಳು ನಮ್ಮ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ
ಕೂದಲಿಗೆ ಯಾವುದೇ ರೀತಿಯ ಕಲರಿಂಗ್‌ ಅಥವಾ ಬ್ಲೀಚಿಂಗ್‌ ಯಾವತ್ತೂ ಮಾಡಲೇಬೇಡಿ. ಕಲರಿಂಗ್‌ ಅಥವಾ ಬ್ಲೀಚಿಂಗ್‌ ಕೂದಲಿನ ಬುಡವನ್ನೂ ಹಾನಿ ಗೊಳಿಸುತ್ತೆ, ಕೂದಲಿನ ಧೃಡತೆಯನ್ನು ಕುಂದಿಸುತ್ತದೆ. ನಿಮ್ಮ ಕೂದಲಿಗೆ ಬಣ್ಣ ಹಚ್ಚಲೇ ಬೇಕೆಂದರೆ ಸ್ವಾಭಾವಿಕವಾಗಿ ಸಿಗುವ ಕೆಮಿಕಲ್ ರಹಿತ ಮದರಂಗಿಯನ್ನು ಉಪಯೋಗಿಸಿ.

ಟೀವಿಯಲ್ಲಿ ಬರುವ ಜಾಹೀರಾತಿಗೆ ಮೋಸಹೋಗಿ ಕೂದಲು ನುಣ್ಣಗೆಯಾಗಲು ಸಂಪೂರ್ಣ ಕೆಮಿಕಲ್ ಯುಕ್ತ ಶಾಂಪೂ, ಕಂಡೀಷ್ನರ್ ಬಳಸುವುದನ್ನು ನಿಲ್ಲಿಸಿ. ಈ ಕೆಮಿಕಲ್ ಶಾಂಪುವಿನಿಂದ ಕೂದಲು ತುಂಡಾಗುವ ಹಾಗೂ ದುರ್ಬಲವಾಗುವ ಸಮಸ್ಯೆ ಹೆಚ್ಚಾಗಿದೆ. ಕೆಮಿಕಲ್ ಜಾಸ್ತಿ ಇರದ ಆಯುರ್ವೇದ ಗಿಡಮೂಲಿಕೆಗಳಿಂದ ಮಾಡಿದ ಶಾಂಪೂ ಮೆಡಿಕಲ್ ನಿಂದ ಕೇಳಿ ಪಡೆದು ಟ್ರೈ ಮಾಡಿ ನೋಡಿ.

ಇನ್ನು ಕೆಲವರು ಯಾವತ್ತು ನೋಡಿದರೂ ತಲೆಗೆ ಎಣ್ಣೆ ಹಚ್ಚಿ ಕೂತಿರುತ್ತಾರೆ. ಕೂದಲಿಗೆ ಎಣ್ಣೆ ಹಚ್ಚುವುದು ಉತ್ತಮ ಅಭ್ಯಾಸವೇ ಆದರೆ ಹೆಚ್ಚು ಎಣ್ಣೆ ಹಚ್ಚಿದರೆ ಕೂದಲಿನ ಬುಡಗಳು ಮುಚ್ಚಿಹೋಗುತ್ತದೆ, ನಮ್ಮ ತಲೆಯ ತ್ವಜೆಯಿಂದಲೂ ಎಣ್ಣೆ ಹೊರಬರುತ್ತವೆ ಹಾಗಾಗಿ ನೀವು ಕೂದಲಿನ ಬುಡಕ್ಕೆ ಎಣ್ಣೆ ಹಚ್ಚುವುದರ ಬದಲಾಗಿ ಕೂದಲಿಗೆ ಎಣ್ಣೆ ಹಚ್ಚಿದರೆ ಹೆಚ್ಚು ಉಪಯುಕ್ತ.

ತುಂಬಾ ಮುಖ್ಯವಾದ ಇನ್ನೊಂದು ಅಂಶ, ನೀವು ಈ ಹೇರ್‌ ಡ್ರೈಯರ್‌ನಿಂದ ಆದಷ್ಟು ದೂರವಿರಿ. ಯಾವಾಗಲೊಮ್ಮೆ ಅಪರೂಪಕ್ಕೆ ಅರ್ಜಂಟಿನಲ್ಲಿದ್ದರೆ ಆಗ ಬಳಸಿದರೆ ಓಕೆ, ಅದು ಬಿಟ್ಟು ದಿನಾಲು ಹೇರ್‌ ಡ್ರೈಯರ್‌ ನಿಂದ ತಮ್ಮ ಕೂದಲನ್ನು ಒಣಗಿಸುವ ಪ್ರಯತ್ನ ಪಡುವವರು ನೀವಾಗಿದ್ದರೆ ಕೂಡಲೇ ಈ ಅಭ್ಯಾಸವನ್ನು ಕೈಬಿಡಿ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅಕ್ಷಯ್‌ ಕುಮಾರ್ ಬಿಜೆಪಿಗೆ ? ವಿನೋದ್‌ ಖನ್ನಾ ಸ್ಥಾನ ತುಂಬಲು ರಾಜಕೀಯ ಎಂಟ್ರಿ ?!

ಮುಂದಿನ ಸುದ್ದಿ »

ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಮಾಡಲು ಕೇವಲ ಒಂದು ಮೆಸೇಜ್ ಸಾಕು!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×