Wednesday October 11 2017

Follow on us:

Contact Us

ಗ್ರಾಮಸಭೆಯಲ್ಲಿ ಗ್ಯಾಸ್ ಗೋಡೌನ್ ಗದ್ದಲ; ಸದಸ್ಯರ ನಡುವೆ ಮಾತಿನ ಚಕಮಕಿ

ನ್ಯೂಸ್ ಕನ್ನಡ ವರದಿ-(11.10.17): ಕಾಪು: ಗ್ರಾಮಸಭೆಯಲ್ಲಿ ಗ್ಯಾಸ್ ಗೋಡೌನ್ ತೆರವು ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಗ್ರಾಮಸ್ಥರೊಬ್ಬರು ಬಳಸಿದ ಅವಾಚ್ಯ ಪದ ಹಾಗೂ ದಲಿತ ಮುಖಂಡರೊಬ್ಬರ ಜಾತೀಯತೆ ವಿಚಾರ ಸಭೆಯಲ್ಲಿ ಗೊಂದಲಕ್ಕೀಡಾಗಿ ಮಾತಿನ ಚಕಮಕಿ ನಡೆದ ಘಟನೆ ಪಡುಬಿದ್ರಿಯಲ್ಲಿ ಸಂಭವಿಸಿದೆ.

ಕಳೆದ ಮೂರು ತಿಂಗಳ ಹಿಂದೆ ನಡೆದ ಗ್ರಾಮಸಭೆ ಕೇವಲ ಬಾರ್‍ವೊಂದರ ಸ್ಥಳಾಂತರ ವಿಷಯದಲ್ಲಿಯೇ ಬೆಳಿಗ್ಗಿನಿಂದ ಸಂಜೆಯವರೆಗೆ ಕಾಲಹರಣಗೊಂಡು ಗ್ರಾಮದ ಇತರ ಯಾವುದೇ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ಸಿಗದೆ ಮೊಟಕುಗೊಂಡಿತ್ತು.

ನಾರಾಯಣಗುರು ಸಭಾಭವನದಲ್ಲಿ ಬುಧವಾರ ಮರು ನಿಗಧಿಯಾಗಿದ್ದ ಗ್ರಾಮಸಭೆಯು ಆರಂಭವಾಗುತ್ತಿದ್ದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಕ್ಷರ ಸ್ವಾಮಿ ಕೇರಿಮಠ ವರದಿ ಮಂಡಿಸಿದರು. ನಂತರ ಕಾರ್ಯಸೂಚಿಯಂತೆ ಸಭೆ ನಡೆದಾಗ ದ್ವನಿ ಎತ್ತಿದ ದಲಿತ ಮುಖಂಡ ಲೋಕೇಶ್, ಕಳೆದ ಗ್ರಾಮಸಭೆ ಎಲ್ಲಿ ಕೊನೆಗೊಂಡಿತೋ ಅಲ್ಲಿಂದ ಮುಂದುವರಿಸಿ ಎಂದು ಪಟ್ಟು ಹಿಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಕಾರ್ಯಸೂಚಿಯಂತೆ ಸಭೆ ಮುಂದುವರಿಸಲು ಅಧ್ಯಕ್ಷರಿಗೆ ವಿನಂತಿಸಿದರು. ಅದರಂತೆ ಸಭೆ ನಡೆದು ಎಲ್ಲಾ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿ ಮಂಡಿಸಿದರು.

ಸಭೆಯ ಕೊನೆಯಲ್ಲಿ ಮತ್ತೆ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಹಾಗೂ ಸಂಗಡಿಗರು ಪಾದೆಬೆಟ್ಟು ಗ್ರಾಮದಲ್ಲಿರುವ ಬಿಲ್ಲವ ಸಮುದಾಯದವರಿಗೊಬ್ಬರಿಗೆ ಸೇರಿದ ಗ್ಯಾಸ್ ಗೋಡೌನ್ ತೆರವು ವಿಷಯ ಪ್ರಸ್ತಾಪಿಸಿದರು.

ಇದರಿಂದ ಸಿಟ್ಟಿಗೆದ್ದು ಮಾತಿಗಿಳಿದ ಹರೀಶ್ ಕಂಚಿನಡ್ಕ ಹಾಗು ಲೋಕೇಶ್ ಬೆಂಬಲಿಗರನ್ನು ನಡುವೆ ಮಾತಿನ ಚಕಮಕಿ ನಡೆದು ಹಲವು ಹೊತ್ತು ಗೊಂದಲಕ್ಕೆ ಕಾರಣವಾಯಿತು. ಉಪಾಧ್ಯಕ್ಷ ವೈ ಸುಕುಮಾರ್ ಗ್ಯಾಸ್ ಗೋಡೌನ್‍ಗೆ ನಾವು ಪರವಾನಿಗೆ ನೀಡಿಲ್ಲ. ಅದು ಮೇಲಿನ ಇಲಾಖೆಗಳೇ ನಿರಾಪೇಕ್ಷಣ ಪತ್ರ ನೀಡಿ ಅನುಮತಿ ನೀಡಿದ್ದಾರೆ. ಇದರ ವಿರುದ್ಧ ನಿರ್ಣಯ ಮಾಡಲು ಸಾಧ್ಯವಿಲ್ಲ. ಕೊನೆಗೆ ಗ್ಯಾಸ್ ಗೋಡೌನ್‍ಗೆ ಬೆಂಬಲದ ಬಗ್ಗೆ ಬಹುಮತದ ನಿರ್ಣಯಕ್ಕಾಗಿ ಗ್ರಾಮಸ್ಥರ ಮೊರೆ ಹೋದರು. ಇದರಿಂದ ರೊಚ್ಚಿಗೆದ್ದ ಲೋಕೇಶ್, ಕುಟಿಲ ತಂತ್ರದಿಂದ ಪರವಾನಿಗೆಗೆ ಅವಕಾಶ ನೀಡುವುದು ಸರಿಯಲ್ಲ.

ನೀವು ಈ ವಿಷಯದಲ್ಲಿ ಜಾತೀಯತೆ ಮಾಡುತ್ತಿದ್ದೀರಿ. ಇದನ್ನು ಸಹಿಸುವುದಿಲ್ಲವೆಂದರು. ಇದರಿಂದ ಕೆರಳಿದ ಬಿಲ್ಲವ ಸಮುದಾಯದ ನಾಯಕರು ಹಾಗೂ ಇತರರ ವಾಗ್ವಾದಕ್ಕೆ ದಾರಿ ಮಾಡಿತು. ಲೋಕೇಶ್ ಅವರು ಸಭೆಯಲ್ಲಿ ಕ್ಷಮೆಯಾಚಿಸುವಂತೆ ಪಟ್ಟುಹಿಡಿದರು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಕಂಚಿನಡ್ಕದಲ್ಲಿ ಶಾಶ್ವತ ಹಕ್ಕು ಪತ್ರ ನೀಡಲು 32 ಮನೆಗಳಿಂದ ಹಣ ಪಡೆದು ಹಕ್ಕು ಪತ್ರ ನೀಡದಿರುವ ಬಗ್ಗೆ ಕಂದಾಯ ಅಧಿಕಾರಿ ಸತೀಶ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಇದಕ್ಕುತ್ತರಿಸಿದ ಸತೀಶ್, ಜಮೀನಿನ ಬಗ್ಗೆ ತಹಶೀಲ್ದಾರ್ ನ್ಯಾಯಾಲಯದಲ್ಲಿ ಪಂಬದ ಸಂಘದವರು ವ್ಯಾಜ್ಯ ಹೂಡಿದ್ದಾರೆ. ಇದರಿಂದ ತೊಡಕಾಗಿದೆ ಎಂದು ಸಮಜಾಯಿಷಿ ನೀಡಿದರು. ಗ್ರಾಪಂ ಅಧ್ಯಕ್ಷೆ ದಮಯಂತಿ ಅಮೀನ್, ತಾಪಂ ಸದಸ್ಯರಾದ ನೀತಾ ಗುರುರಾಜ್, ದಿನೇಶ್ ಕೋಟ್ಯಾನ್, ನೋಡೆಲ್ ಅಧಿಕಾರಿ ಹರಿಕೃಷ್ಣ ಶಿವತ್ತಾಯ ಇದ್ದರು.

ಪುರಸಭೆಯ ಘನತ್ಯಾಜ್ಯ ಘಟಕ ವಿರೋಧ
ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ, ಮೆಸ್ಕಾಂ ಉಪ ವಿಭಾಗೀಯ ಕಚೇರಿ, ಪಡುಬಿದ್ರಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಹಾಗೂ ಪಾದೆಬೆಟ್ಟು ಗ್ರಾಮಕ್ಕೆ ಹೊಂದಿಕೊಂಡು ನಿರ್ಮಾಣವಾಗುವ ಕಾಪು ಪುರಸಭೆಯ ಘನತ್ಯಾಜ್ಯ ಘಟಕ ವಿರೋಧಿಸಿ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅ.13ರ ಪೆಟ್ರೋಲ್ ಬಂಕ್ ಮುಷ್ಕರ ರದ್ದು ಮಾಡಿದ ಮಾಲಕರು!

ಮುಂದಿನ ಸುದ್ದಿ »

ವಿಜಯಪುರ: ಯುವಕನಿಗೆ ಚೂರಿ ಇರಿತ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×