Tuesday November 22 2016

Follow on us:

Contact Us
fire

8 ಎಕರೆ ಕೃಷಿ ಭೂಮಿ ಬೆಂಕಿಗಾಹುತಿ; ರಿಕ್ಷಾ ಚಾಲಕನ ಉದ್ಧಟತನ

ನ್ಯೂಸ್ ಕನ್ನಡ ವರದಿ-ಕುಂದಾಪುರ: ಇಲ್ಲಿಗೆ ಸಮೀಪದ ಆನಗಳ್ಳಿ ಕಳಂಜೆಯಲ್ಲಿ ಹುಲ್ಲು ಸಾಗಿಸುತ್ತಿದ್ದ ಆಟೋ ರಿಕ್ಷಾ ಸರ್ವಿಸ್ ವಯರನ್ನು ಎಳೆದೊಯ್ದ ಪರಿಣಾಮ ಕಂಬ ಮುರಿದು ಶಾರ್ಟ್ ಸಕ್ರ್ಯೂಟ್ ಆಗಿ ಸುಮಾರು 8 ಎಕರೆ ಕೃಷಿ ಭೂಮಿ ಬೆಂಕಿಗಾಹುತಿಯಾದ ಘಟನೆ ಸೋಮವಾರ ಘಟಿಸಿದೆ.

ಸೋಮವಾರ ಮದ್ಯಾಹ್ನ ವೇಳೆ ಯಂತ್ರದ ಮೂಲಕ ಮಾಡಲಾದ ಹುಲ್ಲಿನ ಕಟ್ಟನ್ನು ಗದ್ದೆಯಿಂದ ಮನೆಗೆ ಸಾಗಾಟ ಮಾಡುತ್ತಿದ್ದು, ಅಗತ್ಯದ ಮಿತಿಗಿಂತ ಎತ್ತರದ ಕಟ್ಟನ್ನು ಮಾಡಿಕೊಂಡ ಪರಿಣಾಮ ಸಾಗಾಟ ಸಂದರ್ಭ ಸರ್ವಿಸ್ ವಯರ್‍ ಗೆ ಹುಲ್ಲಿನ ಕಟ್ಟು ತಗುಲಿದ್ದು, ಈ ಸಂದರ್ಭ ಆದ ಎಳೆದಾಟದಲ್ಲಿ ಗದ್ದೆಯ ಮಧ್ಯದಲ್ಲಿದ್ದ ವಿದ್ಯುತ್ ಕಂಬ ತುಂಡಾಗಿ ಬಿದ್ದು ಸುಮಾರು ಎಂಟು ಎಕರೆ ಕೃಷಿ ಭೂಮಿ ಬೆಂಕಿಗಾಹುತಿಯಾಗಿದೆ.

ಸ್ಥಳೀಯರು ತಕ್ಷಣ ವಿದ್ಯುತ್ ಇಲಾಖೆಗೆ ದೂರು ಸಲ್ಲಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ನಂತರ ತಕ್ಷಣ ಕಾರ್ಯಪ್ರವರ್ತರಾದ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ಚುರುಕುಗೊಳಿಸಿ ಅಗ್ನಿಯನ್ನು ಶಮನಗೊಳಿಸುವಲ್ಲಿ ಯಶಸ್ವಿಯಾದರು. ಗದ್ದೆಯಲ್ಲಿನ ಬೆಳೆಗಳನ್ನು ಕಟಾವು ಮಾಡಿ ಧಾನ್ಯಗಳನ್ನು ಸಾಗಾಟ ಮಾಡಲಾಗಿದ್ದರಿಂದ ಹೆಚ್ಚಿನ ನಷ್ಟ ಸಂಭವಿಸಿಲ್ಲ.

ತಪ್ಪಿದ ಭಾರಿ ದುರಂತ
ರಿಕ್ಷಾ ಚಾಲಕ ತಪ್ಪಿ ಮುಖ್ಯ ಲೈನ್ ಸ್ಪರ್ಶಿಸಿದ್ದಲ್ಲಿ ರಿಕ್ಷಾ ಸಂಪೂರ್ಣ ಭಸ್ಮಗೊಂಡು ಪ್ರಾಣಹಾನಿಯಾಗುವ ಸಂಭವವಿತ್ತು. ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ.

ರಿಕ್ಷಾ ಚಾಲಕನ ಉದ್ಧಟತನ
ಕೆಇಬಿ ಅಧಿಕಾರಿಗಳು ಮತ್ತು ಸ್ಥಳೀಯರು, ರಿಕ್ಷಾ ಚಾಲಕನಲ್ಲಿ ಘಟನೆಯ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಉದ್ದಟತನ ತೋರಿದ ಘಟನೆ ನಡೆಯಿತು. ಕುಡಿತದ ಅಮಲಿನಲ್ಲಿದ್ದ ಅವನು ಅಧಿಕಾರಿಗಳಲ್ಲಿ ನನಗೇ ನೀವೇನು ಹೇಳುವುದು, ನಾನು ಮಾಡಿದ್ದು ಅನ್ನುವುದಕ್ಕೆ ನಿಮ್ಮಲ್ಲ ಏನು ಸಾಕ್ಷಿ ಇದೆ, ಎಂದು ಮರು ಪ್ರಶ್ನೆ ಹಾಕುತ್ತಿರುವುದು ಕಂಡು ಬಂತು. ಈ ಘಟನೆ ಸಂದರ್ಭ ಸಂಪೂರ್ಣ ನಶೆಯಲ್ಲಿದ್ದುದು ಮತ್ತು ರಿಕ್ಷಾ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಈ ಘಟನೆಗೆ ಕಾರಣವೆಂದು ಸ್ಥಳೀಯರು ಆರೋಪಿಸಿದರು.

nkmq

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸಮಾಜದಲ್ಲಿ ಒಡಕು ಮೂಡಿಸಲು ಕೋಮುವಾದಿಗಳಿಂದ ಷಡ್ಯಂತ್ರ: ಮುಸ್ಲಿಂ ಹಿತರಕ್ಷಣಾ ವೇದಿಕೆ ಆರೋಪ

ಮುಂದಿನ ಸುದ್ದಿ »

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿವೃತ್ತ ಬ್ಯಾಂಕ್ ನೌಕರರಿಂದ ಪ್ರತಿಭಟನೆ

ಸಿನೆಮಾ

 • kattappa

  ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

  March 18, 2017

  ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

  Read More
 • eega

  ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

  March 1, 2017

  ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×