Saturday November 5 2016

Follow on us:

Contact Us
ುಉಉಉಉ

ಎಂಡೋಸಲ್ಫಾನ್ ಪೀಡಿತೆ ನೇಣು ಬಿಗಿದು ಆತ್ಮಹತ್ಯೆ

ನ್ಯೂಸ್ ಕನ್ನಡ ವರದಿ(05.11.2016)ಕಾಸರಗೋಡು: ಚಿಕಿತ್ಸೆಗೆ ಹಣವಿಲ್ಲದೆ ಎಂಡೋಸಲ್ಫಾನ್ ಸಂತ್ರಸ್ಥೆ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಆದೂರು ನಾಟೆಕಲ್ ಬೆಳ್ಳೂರಿನಲ್ಲಿ ನಡೆದಿದೆ.

ಮೃತಪಟ್ಟವರನ್ನು ಬೆಳ್ಳೂರಿನ ರಾಜೀವಿ (60) ಎಂದು ಗುರುತಿಸಲಾಗಿದೆ. ಕೂಲಿ ಕೆಲಸಕ್ಕೆ ತೆರಳಿದ್ದ ಮಕ್ಕಳು ಮನೆಗೆ ಬಂದಾಗ ತಾಯಿ ನೇಣು ಬಿಗಿದಿರುವುದು ಕಂಡುಬಂದಿದೆ.

ಎಂಡೋಸಲ್ಫಾನ್ ಸಂತ್ರಸ್ಥೆಯಾಗಿದ್ದ ರಾಜೀವಿ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಸರಕಾರದ ಸಹಾಯ ಧನ ಲಭಿಸಿರಲಿಲ್ಲ. ತುರ್ತು ಶಸ್ತ್ರಚಿಕಿತ್ಸೆ ಇವರಿಗೆ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.

ಆದರೆ ಹಣ ಇಲ್ಲದೆ ರಾಜೀವಿ ಮನನೊಂದಿದ್ದರು. ಇದರಿಂದಲೇ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಚಿಕಿತ್ಸೆಗೆ 60 ಸಾವಿರ ರೂ.ಬೇಕಾಗಿತ್ತು. ಇದು ಮಾತ್ರವಲ್ಲ ವಾರವೊಂದಕ್ಕೆ ಚಿಕಿತ್ಸೆಗೆ 2 ರಿಂದ 2.500 ರೂ. ವೆಚ್ಚವಾಗುತ್ತಿದೆ. ಇದರಿಂದ ಜಾನಕಿ ಬೇಸತ್ತಿದ್ದರು ಎನ್ನಲಾಗಿದೆ. ಹಲವು ಬಾರಿ ಅರ್ಜಿ ಸಲ್ಲಿಸಿ ಕಚೇರಿಗಳನ್ನು ಅಲೆದಾಡಿದರೂ ಸೌಲಭ್ಯ ಲಭಿಸಿರಲಿಲ್ಲ ಇವರ ಪತಿ ವಿಶ್ವನಾಥ ಕೆಲ ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ.

ಕೂಲಿ ಕೆಲಸ ಮಾಡಿ ಬರುವ ಆದಾಯ ಕುಟುಂಬದ ಆಸರೆಯಾಗಿತ್ತು. ಇವರ ಮೃತದೇಹವನ್ನು ಶನಿವಾರ ಬೆಳಿಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು.

nkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಶರೀಅತ್ ನಲ್ಲಿನ ಹಸ್ತಕ್ಷೇಪ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿ ಹಾಕುವ ರಾಜಕೀಯ ಗಿಮಿಕ್ : ಯಾಕೂಬ್ ಸಅದಿ

ಮುಂದಿನ ಸುದ್ದಿ »

ಟಿಪ್ಪು ಜಯಂತಿ ಆಚರಿಸಿದರೆ ಪ್ರತಿಭಟನೆ: ಟಿಪ್ಪು ಜಯಂತಿ ವಿರೋಧ ಹೋರಾಟ ಸಮಿತಿ ಎಚ್ಚರಿಕೆ

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×