Monday June 12 2017

Follow on us:

Contact Us

ಎಲ್ಲೂರು; ಸಲೀಂ ಮದನಿ ನೇತ್ರತ್ವದಲ್ಲಿ ಬಡ ಕುಟುಂಬಕ್ಕೆ ವಿವಿಧ ಸವಲತ್ತು ವಿತರಣೆ

ನ್ಯೂಸ್ ಕನ್ನಡ ವರದಿ-(12.06.17)ಕಾಪು: ಉಚ್ಚಿಲ ಸಮೀಪದ ಎಲ್ಲೂರುಗ್ರಾಮದಲ್ಲಿರು ದಾರುಲ್ ಅಮಾನ್ ಅಸೋಸಿಯೇಷನ್ ವತಿಯಿಂದ ನಿರ್ಗತಿಕ, ಬಡ ಕುಟುಂಬಕ್ಕೆ ರಂಝಾನ್ ಪ್ರಯುಕ್ತ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಎಲ್ಲೂರು ಪೆಜತಕಟ್ಟೆಯ ಹೀರಾ ನಗರದಲ್ಲಿ ನಿರ್ಗತಿಕರ ಆಶಾಕಿರಣವಾಗಿ ತಲೆಯೆತ್ತಿ ನಿಂತಿರುವ ಅಲ್ಹಾಜ್ ಸಲೀಂ ಮದನಿ ಉಸ್ತಾದರ ನೇತ್ರತ್ವದ ದಾರುಲ್ ಅಮಾನ್ ಎಜುಕೇಶನಲ್  ಅಕಾಡೆಮಿಯ ಅದೀನ ಸಂಸ್ಥೆ ದಾರುಲ್ ಅಮಾನ್   ಅಸೋಸಿಯೇಷನ್  ಹಲವಾರು ಬಡ ಕುಟುಂಬಕ್ಕೆ ಉಚಿತ ವಸತಿ ವ್ಯವಸ್ಥೆ ಹಾಗೂ ಅರ್ಹ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ,ಅನಾರೋಗ್ಯ ಪೀಡಿತರಿಗೆ ವೀಲ್ ಚೆಯರ್ ಗಳನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದ ಬಳಿಕ ಇಪ್ತಾರ್ ಕೂಟವು ನಡೆಯಿತು. ಈ ವೇಳೆ ಮಾತನಾಡಿದ ಸಲೀಂ ಮದನಿ, ಸಂಸ್ಥೆಯು ದಾನಿಗಳಿಂದ ನೆರವು ಪಡೆದು ಅರ್ಹ ನಿರ್ಗತಿಕರು ಮತ್ತು ಬಡಜನರಿಗೆ ಸಹಾಯ ಹಸ್ತವಾಗಿ ಕಾರ್ಯಚರಿಸುತ್ತಿದೆ. ಸರ್ವ ಧರ್ಮಿಯರನ್ನು ಸಮಾನವಾಗಿ ಪರಿಗಣಿಸಿ ಮುಸ್ಲಿಮೇತರ ಬಡಕುಟುಂಬಕ್ಕೂ ಸಹಾಯ ನೀಡುವಲ್ಲಿ ಶ್ರಮಿಸುತ್ತಿದೆ. ಇದೀಗ ಕೇವಲ 6 ಮನೆಗಳನ್ನು ಮಾತ್ರ ನೀಡಿದ್ದೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಸತಿಯನ್ನು ಬಡವರಿಗೆ ನೀಡಲಿದ್ದೇವೆ ಎಂದರು.

ದಾರುಲ್ ಅಮಾನ್ ಇದರ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಮುನ್ನುಡಿ ಪ್ರಸ್ತಾಪಿಸಿದರು. ದಾರುಲ್ ಅಮಾನ್ ಅಸೋಸಿಯೇಷನ್ ಇದರ ಉಪಾಧ್ಯಕ್ಷ ವೈಬಿಸಿ ಬಾವ ಮೂಳೂರು, ಕಾರ್ಯದರ್ಶಿ ಸಿರಾಜ್ ಎನ್.ಎಚ್ ಉಚ್ಚಿಲ, ಕೋಶಾಧಿಕಾರಿ ಕೆ ಉಸ್ಮಾನ್ ಕಟ್ಟಿಂಗೇರಿ, ಸಂಚಾಲಕರಾದ ಅಬ್ಬು ಹಾಜಿ ಮೂಳೂರು,ಇಬ್ರಾಹಿಂ ತವಕ್ಕಲ್, ರಿಯಾಝ್ ಮುದರಂಗಡಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಂಝಾನ್ ಸಂತೋಷದಲ್ಲಿ ಬಡ ಕುಟುಂಬದ ಕಣ್ಣೀರೊರೆಸೋಣ: ಅಲ್ ಅಮೀನ್ ಹೆಲ್ಪ್ ಲೈನ್ ದ.ಕ ಜಿಲ್ಲಾ ಅಭಿಯಾನ

ಮುಂದಿನ ಸುದ್ದಿ »

ಮಳೆಯ ಅಬ್ಬರಕ್ಕೆ ವಿದ್ಯುತ್ ತಂತಿ ಮೇಲೆ ಉರುಳಿದ ಮರ: ತಪ್ಪಿದ ಭಾರೀ ಅನಾಹುತ  

ಸಿನೆಮಾ

 • ನಟಿ ಅಪಹರಣ ಪ್ರಕರಣ: 4ನೇ ಬಾರಿಯೂ ದಿಲೀಪ್ ಜಾಮೀನು ಅರ್ಜಿ ವಜಾ!

  September 18, 2017

  ನ್ಯೂಸ್ ಕನ್ನಡ ವರದಿ-(18.9.17): ನಟಿಯೊಬ್ಬಳ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಮತ್ತೆ ತಿರಸ್ಕರಿಸಿದೆ. ಜುಲೈ 10ರಂದು ಬಂಧಿತರಾಗಿದ್ದ ದಿಲೀಪ್ ಈ ಹಿಂದೆ ಜುಲೈ 24ರಂದು ಜಾಮೀನಿಗೆ ಅರ್ಜಿ ...

  Read More
 • ಅ.6: ಗಲ್ಫ್ ನಲ್ಲಿ ಮಾರ್ಚ್ 22 ಸಿನಿಮಾ ಬಿಡುಗಡೆ

  September 17, 2017

  ನ್ಯೂಸ್ ಕನ್ನಡ ವರದಿ-(17.9.17): ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ಹಾಗು ಮಾಧ್ಯಮಗಳ ಪ್ರಶಂಶೆಯ ಸುರಿಮಳೆಗೆ ಭಾಜನವಾಗಿರುವ  ‘ಮಾರ್ಚ್ 22’  ಸಿನೆಮಾ  ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇ(ಗಲ್ಫ್) ಯಾದ್ಯಂತ ಅಕ್ಟೊಬರ್ 6 ರಂದು ಬಿಡುಗಡೆಯಾಗುತ್ತಿದೆ. ಸಿನೆಮಾದ ಪ್ರಥಮ ಪ್ರದರ್ಶನದಲ್ಲಿ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×