Thursday October 19 2017

Follow on us:

Contact Us

ಉಡುಪಿ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ವಿಶ್ವಾಸದ ಮನೆಯಲ್ಲಿ ದೀಪಾವಳಿ ಆಚರಣೆ

ನ್ಯೂಸ್ ಕನ್ನಡ ವರದಿ-(19.10.17: ಉಡುಪಿ: ಉಡುಪಿ ಜಿಲ್ಲಾ ರಾಷ್ಟ್ರೀಯ ವಿದ್ಯಾರ್ಥಿ  ಕಾಂಗ್ರೆಸ್ (NSUI)  ವತಿಯಿಂದ ದೀಪಾವಳಿ ಸಂಭ್ರಮವನ್ನು ಕಟಪಾಡಿ ಬಳಿಯ ಶಂಕರಪುರ ವಿಶ್ವಾಸದ ಮನೆಯ ಅಶಕ್ತ ಮತ್ತು ಅನಾಥರೊಂದಿಗೆ ಗುರುವಾರ ಆಚರಿಸಲಾಯಿತು. ದೀಪಾವಳಿಯ ಪ್ರಯುಕ್ತ ಅನಾಥಶ್ರಮದಲ್ಲಿನ ಮಕ್ಕಳಿಗೆ ಹಾಗೂ ವೃದ್ದರಿಗೆ ಸಿಹಿ ತಿಂಡಿ, ಪಾಯಸ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು ಮತ್ತು ಅವರೊಂದಿಗೆ ಸುಡುಮದ್ದುಗಳನ್ನು ಹಚ್ಚಿ ಸಂಭ್ರಮಿಸಲಾಯಿತು.

ಈ ವೇಳೆ ಮಾತನಾಡಿದ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಆಲ್ಮೇಡಾ ಮಾತನಾಡಿ ದೀಪಾವಳಿ ಬೆಳಕಿನ ಹಬ್ಬವಾಗಿದ್ದು ಪ್ರತಿಯೊಬ್ಬರ ಜೀವನದಲ್ಲಿ ಅಡಗಿರುವ ಕತ್ತಲನ್ನು ದೂರಗೊಳಿಸಿ ಸಂತೋಷದ ಬೆಳಕು ಮೂಡುವಂತಾಗಲಿ ಎಂದು ಹಾರೈಸಿದರು. ಈ ವೇಳೆ ಅರ್ಥರ್ ಚಾರ್ಲಸ್, ಎನ್ ಎಸ್ ಯು ಐ ಸದಸ್ಯರಾದ ಪ್ರಜ್ವಲ್ ಕುಂದರ್, ಮಾರ್ಸ್ ಸಿಕ್ವೇರಾ, ಮೊಹಮ್ಮದ್ ಸ್ವಲಾಹ್, ದೀರಜ್, ಆಶೀಶ್ ಹಾಗೂ ಇತರರು ಉಪಸ್ಥಿತರಿದ್ದರು

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಎಸ್ ಐ ಓ ಸಂಸ್ಥಾಪನಾ ದಿನ: ಉಳ್ಳಾಲ ಶಾಖೆಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ

ಮುಂದಿನ ಸುದ್ದಿ »

ಎಸ್ ಐ ಓ ಸಂಸ್ಥಾಪನಾ ದಿನ: ಧ್ವಜಾರೋಹಣ, ಬಡ ಕುಟುಂಬಕ್ಕೆ ರೇಷನ್ ವಿತರಣೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×