Saturday January 7 2017

Follow on us:

Contact Us

ಸಂಸದ ಅನಂತಕುಮಾರ್ ಹೆಗಡೆಯನ್ನು ತಕ್ಷಣ ಬಂಧಿಸಿ; ವೈದ್ಯರ ಆಗ್ರಹ

ನ್ಯೂಸ್ ಕನ್ನಡ ವರದಿ-ಕಾರವಾರ:ಶಿರಸಿಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮನ್ನು ರಕ್ಷಣೆ ಮಾಡಬೇಕಾದ ಜನಪ್ರತಿನಿಧಿ ಸಂಸದ ಅನಂತಕುಮಾರ್ ಹೆಗಡೆ ಅವರ ಕೃತ್ಯ ಖಂಡನೀಯವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಕಾರವಾರ ಘಟಕದ ಅಧ್ಯಕ್ಷ ಸುರೇಶ ಶೆಟ್ಟಿ ಹೇಳಿದರು.

ಕಾರವಾರದ ಪಿಕ್ಳೆ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಪೊಲೀಸ್ ಇಲಾಖೆ ಸಂಸದ ವಿರುದ್ಧ ಸ್ವಯಂ ಪ್ರೇರಣೆಯಾಗಿ ದೂರು ದಾಖಲಿಸಿಕೊಂಡಿದ್ದು ತಕ್ಷಣ ಅವರನ್ನು ಬಂಧಿಸಬೇಕು. ವೈದ್ಯರ ರಕ್ಷಣೆ ದೃಷ್ಟಿಯಿಂದ ಹಲ್ಲೆ ನಡೆಸುವಂಥವರಿಗೆ ಇದು ತಕ್ಕ ಪಾಠವಾಗಬೇಕು ಎಂದು ಆಗ್ರಹಿಸಿದರು.

ಸಂಸದ ಅನಂತಕುಮಾರ್ ಹೆಗಡೆ ವೈದ್ಯರ ಹಾಗೂ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೇರೆಯಾಗಿದೆ. ಸಂಸ್ಥೆಯೊಂದರ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯರಿಗೆ ಸ್ವಾತಂತ್ರ್ಯವಿರುವುದಿಲ್ಲ. ಆಡಳಿತ ಮಂಡಳಿಯವರ ಒತ್ತಡಕ್ಕೆ ಮಣಿದು ಅನ್ಯಾಯದ ವಿರುದ್ದ ಹೋರಾಡಲು ಆಗುವುದಿಲ್ಲ. ವೈದ್ಯರ ಮೇಲೆ ಇಂತಹ ಸಾಕಷ್ಟು ಒತ್ತಡಬಂದಿದ್ದು, ಇದರಿಂದ ವೈದ್ಯರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ.
ಆದರೆ ಈಗಾಗಲೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಕೂಡಲೇ ಸಂಸದರನ್ನು ಬಂಧಿಸಬೇಕು. ಸಂಸದ ಅನಂತಕುಮಾರ ಹೆಗಡೆ ಅವರ ತಾಯಿಯನ್ನು ಟಿ ಎಸ್‍ ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಬಗ್ಗೆ ತಿಳಿಸಲಾಗಿತ್ತು. ಆದರೆ, ಈ ಬಗ್ಗೆ ಕೆಲ ಸಮಯ ತೆಗೆದುಕೊಂಡಿದ್ದ ಸಂಸದರ ಮನೆಯವರು ತಮ್ಮ ಆಪ್ತ ವೈದ್ಯರೊಂದಿಗೆ ಸಮಾಲೋಚನೆ ನಡೆಸುವದಾಗಿ ತಿಳಿಸಿದ್ದರು. ಇದಾದ ನಂತರ ಅಲ್ಲಿನ ವೈದ್ಯರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.

ಈ ಘಟನೆಯಲ್ಲಿ ಎಲ್ಲಿಯೂ ವೈದ್ಯರ ತಪ್ಪಿಲ್ಲ ಎಂದ ಡಾ. ಸುರೇಶ ಶೆಟ್ಟಿ ಹಲ್ಲೆ ನಡೆಸುವುದು ಕಾನೂನು ಬಾಹಿರ ಕೃತ್ಯವಾಗಿದೆ. ಜನಪ್ರತಿನಿಧಿಯಾದವರು ಜವಾಬ್ದಾರಿಯಿಂದ ವರ್ತಿಸುವುದು ಅಗತ್ಯವಾಗಿದೆಯಲ್ಲದೆ ಈ ರೀತಿ ಅಮಾನುಷವಾಗಿ ವರ್ತಿಸುವುದು ವಿಷಾದನಿಯ ಸಂಗತಿಯಾಗಿದೆ ಎಂದರು. ಸಂಘದ ಕಾರ್ಯದರ್ಶಿ ಕೀರ್ತಿ ನಾಯ್ಕ, ಉಪಾಧ್ಯಕ್ಷ ಶಿವಾನಂದ ಕುಡ್ತಳಕರ್, ಡಾ. ಎನ್. ವಿ. ನಾಯ್ಕ, ಅನ್ವಿತ್ ನಾಯ್ಕ, ದತ್ತಾನಂದ ರಾಯ್ಕರ್ ಹಾಗೂ ನಗರದ ಸರಕಾರ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು.

nkmqsbk

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನೋಟ್ ಬ್ಯಾನ್ ಸಂಪೂರ್ಣ ವಿಫಲ: ಪ್ರಧಾನಿ ಅವರ ಏಕಾಏಕಿ ನಿರ್ಧಾರ ತಪ್ಪು- ಕಾಂಗ್ರೆಸ್

ಮುಂದಿನ ಸುದ್ದಿ »

ಫೆ. 5 ರಂದು ಬೆಳ್ತಂಗಡಿಯಲ್ಲಿ ನಡೆಯಲಿದೆ ಹಿಂದೂ ಧರ್ಮಜಾಗೃತಿ ಸಭೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×