Sunday June 18 2017

Follow on us:

Contact Us

ಪಾಕ್ ನಾಯಕನ ಮಗ ಅಬ್ದುಲ್ಲಾ ಜೊತೆ ಧೋನಿ ಫೋಟೋ: ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್

ನ್ಯೂಸ್ ಕನ್ನಡ ವರದಿ-(18.6.17): ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳ ದೃಷ್ಟಿಯು ಇಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಮೇಲಿದೆ. ಭಾರತ ಮತ್ತು ಪಾಕಿಸ್ತಾನ ತಂಡವು ಫೈನಲ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು ಈ ಮಧ್ಯೆ ಭಾರತೀಯ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಒಂದು ಫೋಟೋ ಎಲ್ಲರ ಹೃದಯ ಗೆದ್ದಿದೆ.

ಪಾಕಿಸ್ತಾನ ಕಪ್ತಾನ ಸರ್ಫರಾಝ್ ರವರ ಮಗ ಅಬ್ದುಲ್ಲಾ ಜೊತೆ ಧೋನಿ ತೆಗೆದ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎರಡೂ ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಭಾವನಾತ್ಮಕವಾಗಿ ಪರಿಣಮಿಸಿದೆ. ಧೋನಿ ಮತ್ತು ಪಾಕಿಸ್ತಾನ ಕಪ್ತಾನ ಸರ್ಫರಾಝ್ ಮಗ ಅಬ್ದುಲ್ಲಾ ಫೋಟೋವನ್ನು ಟ್ವಿಟರ್ ಮೂಲಕ ಪೋಸ್ಟ್ ಮಾಡಿದ ವರಿಷ್ಠ ಟಿವಿ ನಿರೂಪಕ ರಾಜ್ ದೀಪ್ ಸರ್ ದೇಸಾಯಿ, ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯಕ್ಕಿಂತ ಮುಂಚೆ ಒಂದು ಉತ್ತಮ ಫೋಟೋ ಬಂದಿದೆ. ಕ್ರೀಡೆಯು ಗಡಿಯನ್ನು ಮೀರಿದೆ ಎಂದು ಬರೆದಿದ್ದಾರೆ. ಅವರ ಈ ಫೋಟೋ ವೈರಲ್ ಆಗಿದ್ದು ಬಹಳಷ್ಟು ಮಂದಿ ಶೇರ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಹಲವಾರು ಮಂದಿ ಧೋನಿಯವರನ್ನು ಪ್ರಶಂಸಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಇಂಗ್ಲೀಷ್ ಬಾರದೆ ಟ್ವಿಟ್ಟರ್‌ನಲ್ಲಿ ಟ್ರೋಲ್ ಆದ ಪಾಕಿಸ್ತಾನದ ನಾಯಕನಿಗೆ ಸೆಹ್ವಾಗ್ ಬೆಂಬಲ

ಮುಂದಿನ ಸುದ್ದಿ »

ಕೇರಳದಲ್ಲಿ ಪುನಃ H1N1ಜ್ವರ ದಾಳಿ: ವಡಗರದಲ್ಲಿ ಗರ್ಭಿಣಿ ಮೃತ್ಯು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×