Saturday August 12 2017

Follow on us:

Contact Us

ಬಿಜೆಪಿ ಭ್ರಷ್ಟಾಚಾರ-ಬಂಡವಾಳಶಾಹಿಗಳ ಪರವಾಗಿದೆ; ಸೊರಕೆ

ನ್ಯೂಸ್ ಕನ್ನಡ ವರದಿ-(12.08.17): ಕಾಪು: ಬಿ.ಜೆ.ಪಿ ಪ್ರಚಾರ-ಭ್ರಷ್ಟಾಚಾರ-ಬಂಡವಾಳ ಶಾಹಿಗಳ ಪರವಾಗಿ ಕಾರ್ಯಕ್ರಮ ನೀಡಿದೆ. ರಾಷ್ಟ್ರೀಯ ಕಾಂಗ್ರೆಸ್ ನಾಯಕರಾದ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸಹಿತ ಅನೇಕ ನಾಯಕರು ಈ ದೇಶಕ್ಕಾಗಿ ಬಲಿದಾನವಾಗಿದ್ದಾರೆ. ಬಿ.ಜೆ.ಪಿ ಪಕ್ಷದ ಯಾವುದಾದರೂ ಒಬ್ಬ ನಾಯಕ ಈ ದೇಶದ ಹಿತಕ್ಕಾಗಿ ಬಲಿದಾನವಾಗಿರುವ ಇತಿಹಾಸವಿದೆಯೇ ? ಎಂದು ಕಾಪು ಕ್ಷೇತ್ರದ ಶಾಸಕ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಪ್ರಶ್ನಿಸಿದ್ದಾರೆ.

ಅವರು ಕಾಪು ಕ್ಷೇತ್ರದ ಬೆಳಪು ಗ್ರಾಮದ ಬೂತ್ ಮಟ್ಟದ ಬೃಹತ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಬಡವರ ಧ್ವನಿಯಾಗಿ ಈ ದೇಶದ ಸಮಾನತೆ-ಅಭಿವೃದ್ಧಿ-ಬಡತನ ನಿರ್ಮೂಲನ ತೊಡಗಿಸಲು ಕಾರ್ಯಕ್ರಮ ರೂಪಿಸಿದೆ. ಕರ್ನಾಟಕದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 4 ವರ್ಷಗಳಲ್ಲಿ ಚುನಾವಣಾ ಪ್ರಣಾಳಿಕೆಯ ಎಲ್ಲಾ ಭರವಸೆಗಳನ್ನು ಅನುಷ್ಠಾನಗೊಳಿಸಿ ಹತ್ತಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಭ್ರಷ್ಟಾಚಾರ ರಹಿತ ಸ್ಥಿರ ಆಡಳಿತ ನೀಡಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಪಶು ಭಾಗ್ಯ, ಅನಿಲ ಭಾಗ್ಯ, ಶಾದಿ ಭಾಗ್ಯ, ವಸತಿ ಭಾಗ್ಯದಂತಹ ಯೋಜನೆಗಳಿಗೆ ಚಾಲನೆ ನೀಡಿದೆ. ಆದರೆ ಮೋದಿ ಸರಕಾರ ಜನರಿಗೆ ನೀಡಿದ ಆಶ್ವಾಸನೆಗಳೆಲ್ಲಾ ಸುಳ್ಳಾಗಿದೆ. ಮೋದಿ ಸರಕಾರದ ಜನ-ಧನ, ಕಪ್ಪು ಹಣ, ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿ, ಅಚ್ಛೇ ದಿನ್ ಏನಾಯ್ತು ಎಂದು ಸೊರಕೆ ಪ್ರಶ್ನಿಸಿದ್ದಾರೆ.

ಈ ಹಿಂದೆ ನೀಡಿರುವ ಆಶ್ವಾಸನೆಗಳನ್ನು ಜನರಿಗೆ ಈಡೇರಿಸದೆ ಪೇಚಿಗೆ ಸಿಲುಕಿರುವ ಬಿ.ಜೆ.ಪಿ ನಾಯಕರು ಇದೀಗ ಚುನಾವಣೆ ಸಮೀಪಿಸಿದಂತೆ ಬೇರೆ ತಾಲೂಕಿನ ನಾಯಕರುಗಳನ್ನು ವಿಸ್ತಾರಕರ ಜವಾಬ್ದಾರಿ ನೀಡಿ ಕ್ಷೇತ್ರದ ಮನೆ ಮನೆಗೆ ಭೇಟಿ ಕೊಡಿಸಿ ಪಕ್ಷದ ಪ್ರಚಾರ ಮಾಡುತ್ತಿದ್ದಾರೆ. ಸ್ಥಳೀಯ ನಾಯಕರು ಜನರ ಮನೆ ಬಾಗಿಲಿಗೆ ಹೋದರೆ ನಮ್ಮ ಖಾತೆಯ 15 ಲಕ್ಷ ಎಲ್ಲಿ, ನಮ್ಮ ಸಂಸದರನ್ನು ಹುಡುಕಿ ಕೊಡಿ ಎಂದು ಹೇಳುತ್ತಾರೆ. ನೀವು ಮಾಡಿರುವ ಅಭಿವೃದ್ಧಿ ಬಗ್ಗೆ ಮಾಹಿತಿ ಕೊಡಿ ಎನ್ನುತ್ತಾರೆಂದು ಸೊರಕೆ ಟೀಕಿಸಿದ್ದಾರೆ.

ಬೆಳಪು ಬೆಳಕಾಗಲಿದೆ : ಸೊರಕೆ

ಬೆಳಪು ಗ್ರಾಮದ ಅಭಿವೃದ್ಧಿಗಾಗಿ ಕಳೆದ 2 ವರ್ಷಗಳಲ್ಲಿ 19.62 ಕೋಟಿ ಅನುದಾನ ವಿನಿಯೋಗಿಸಲಾಗಿದೆ. 146 ಕೋಟಿ ವೆಚ್ಚದ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಸಚಿವ ಸಂಪುಟದ ಅನುಮೋದನೆಯೊಂದಿಗೆ ಪ್ರಥಮ ಕಂತಿನ ಅನುದಾನ ಬಿಡುಗಡೆಗೊಂಡಿದ್ದು 68 ಎಕ್ರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳ ಪಾರ್ಕ್ ಅನುಷ್ಠಾನದ ಅಂತಿಮ ಹಂತದಲ್ಲಿದೆ. ಶಿಕ್ಷಣ ಕೈಗಾರಿಗಾ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಗ್ರಾಮ ಬೆಳಪು ಮುಂದೆ ಇಡೀ ರಾಜ್ಯಕ್ಕೆ ಬೆಳಕಾಗಲಿದೆ. ಪಂಚಾಯತ್ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿಯವರ ಅಭಿವೃದ್ಧಿ ಚಿಂತನೆ ಶ್ಲಾಘನೀಯ. ಬೆಳಪುವಿನಲ್ಲಿ ಕಾಂಗ್ರೆಸ್ ಪಕ್ಷದ ಬಲಿಷ್ಠ ಸಂಘಟನೆಯಾಗಿದೆಯೆಂದು ಸೊರಕೆ ತಿಳಿಸಿದರು.

ಸಭೆಯಲ್ಲಿ ಪಕ್ಷದ ವಿವಿಧ ಬೂತ್ ಸಮಿತಿಗಳ ಪದಾಧಿಕಾರಿಗಳನ್ನು ನೇಮಿಸಲಾಯಿತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ಶಾಸಕರಾದ ಸೊರಕೆಯವರಿಗೆ ಅತೀ ಹೆಚ್ಚಿನ ಅಂತರದ ಮತ ನೀಡುವ ಸಂಕಲ್ಪ ನಮ್ಮದಾಗಿದೆ. ಬೆಳಪು ಗ್ರಾಮ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಅಭೂತ ಪೂರ್ವ ಅಭಿವೃದ್ಧಿಯಾಗಿದ್ದರೆ ಅದಕ್ಕೆ ಸೊರಕೆಯವರ ಸ್ಫೂರ್ತಿ ಕಾರಣ. ಅವರ ಋಣ ತೀರಿಸುವ ಕೆಲಸವನ್ನು ಮುಂದಿನ ಚುನಾವಣೆಯಲ್ಲಿ ಗ್ರಾಮಸ್ಥರು ಮಾಡುತ್ತಾರೆಂಬ ವಿಶ್ವಾಸ ನನಗಿದೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಸಭೆಯಲ್ಲಿ ಕಾಪು ಕ್ಷೇತ್ರಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ದೀಪಕ್ ಕುಮಾರ್, ವಿಶ್ವಾಸ ಅಮೀನ್, ಗಣೇಶ್ ಕೋಟ್ಯಾನ್, ಗುಲಾಂ ಮಹಮ್ಮದ್, ಅಬ್ದುಲ್ಲಾ ರವರು ಉಪಸ್ಥಿತರಿದ್ದರು. ಬೆಳಪು ಸ್ಥಾನೀಯ ಸಮಿತಿ ಅಧ್ಯಕ್ಷರಾದ ನಿರಂಜನ ಶೆಟ್ಟಿ ಪಣಿಯೂರು ಸ್ವಾಗತಿಸಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

6 ಎಸೆತಗಳಲ್ಲಿ 6 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ ಆಟಗಾರ!

ಮುಂದಿನ ಸುದ್ದಿ »

ಬಾಲಿವುಡ್ ಗೆ ದುಲ್ಕರ್ ಸಲ್ಮಾನ್: ಇವರೊಂದಿಗೆ ನಟಿಸುತ್ತಿರುವ ಬಾಲಿವುಡ್ ತಾರೆ ಯಾರು ಗೊತ್ತೇ?

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×