Wednesday November 30 2016

Follow on us:

Contact Us

ಬಾವಿಗೆ ಬಿದ್ದು ಮುಗ್ದ ಕಂದಮ್ಮಗಳ ದಾರುಣ ಅಂತ್ಯ; ಶೋಕ ಸಾಗರದಲ್ಲಿ ಮುಳುಗಿದ ಕುಟುಂಬ

ನ್ಯೂಸ್ ಕನ್ನಡ ವರದಿ(30.11.2016)ಕಾಸರಗೋಡು:ಪುಟಾಣಿಗಳಿಬ್ಬರು ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಬದಿಯಡ್ಕ ಪಿಲಾಂಕಟ್ಟೆಯಲ್ಲಿ ನಡೆದಿದೆ.

ಪಿಲಾಂಕಟ್ಟೆಯ ಹಮೀದ್ ರವರ ಪುತ್ರ ರಂಸಾನ್ (4) ಮತ್ತು ಶಬೀರ್ ಅವರ ಪುತ್ರ ನಸ್ವಾನ್ (2) ಮೃತಪಟ್ಟ ಪುಟಾಣಿಗಳು.

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ನಾಪತ್ತೆಯಾದುದರಿಂದ ಮನೆಯವರು ಹುಡುಕಾಡಿದ್ದು, ಕೊನೆಗೆ ಮನೆಯಂಗಳದ ಬಾವಿಯನ್ನು ನೋಡಿದಾಗ ದಾರುಣ ಘಟನೆ ಬೆಳಕಿಗೆ ಬಂದಿದೆ.

ಬಾವಿ ಸುಮಾರು 15 ಅಡಿ ಆಳ ಹೊಂದಿದ್ದು, 4 ಅಡಿಯಷ್ಟು ನೀರು ಇದೆ. ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಬಾವಿಗಿಳಿದು ಇಬ್ಬರನ್ನು ಮೇಲಕ್ಕೆತ್ತಿ ಹೊರ ತೆಗೆದು ಬದಿಯಡ್ಕದ ಸುಮದಾಯ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರೂ ಆಗಲೇ ಮೃತಪಟ್ಟಿದ್ದರು.

ಬಾವಿಗೆ ಐದು ಅಡಿ ಆವರಣ ಇದ್ದು, ಬಾವಿ ಸಮೀಪ ಜಲ್ಲಿಕಲ್ಲುಗಳನ್ನು ರಾಶಿ ಹಾಕಲಾಗಿದೆ. ಇದರ ಮೂಲಕ ಹತ್ತಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.
ಈ ಕುರಿತು ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

kkki

nkskkasv.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದಾಖಲೆ ರಹಿತ 2,000 ಮುಖಬೆಲೆಯ 35 ಲಕ್ಷ ರೂ. ಸಾಗಾಟ: ಐವರು ವಶಕ್ಕೆ

ಮುಂದಿನ ಸುದ್ದಿ »

ನೋಟು ಬ್ಯಾನ್ ಎಫೆಕ್ಟ್; ಬ್ಯಾಂಕ್ ನಲ್ಲಿ ಹಣವಿಲ್ಲ-ರೊಚ್ಚಿಗೆದ್ದ ಸಾರ್ವಜನಿಕರಿಂದ ಪ್ರತಿಭಟನೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×