Wednesday January 11 2017

Follow on us:

Contact Us

ಕೋಟತಟ್ಟು ನಗದು ರಹಿತ ಗ್ರಾಪಂ: ಜ.15ಕ್ಕೆ ಸಚಿವ ರಮೇಶ್ ಕುಮಾರ್‍ ರಿಂದ ಚಾಲನೆ

ನ್ಯೂಸ್ ಕನ್ನಡ ವರದಿ(11.01.2017)-ಕೋಟ: ದೇಶದಾದ್ಯಂತ ನಗದು ರಹಿತ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ ಉಡುಪಿ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯಿತಿ, ಕರವಸೂಲಿ ಮತ್ತು ಪರವಾನಿಗೆ ಶುಲ್ಕ, ನೀರಿನ ತೆರಿಗೆ ವಸೂಲಿ ಮುಂತಾದ ಗ್ರಾಮ ಪಂಚಾಯಿತಿ ಆಡಳಿತಾತ್ಮಕ ಆರ್ಥಿಕ ವ್ಯವಸ್ಥೆಯನ್ನು ನಗದು ರಹಿತಗೊಳಿಸಲು ನಿರ್ಧರಿಸಿದ್ದು, ಜನವರಿ 15ನೇ ತಾರೀಕು ಪೂರ್ವಾಹ್ನ 11:30ಕ್ಕೆ ಪಂಚಾಯತ್‍ರಾಜ್ ವ್ಯವಸ್ಥೆಯ ಸಬಲೀಕರಣಕ್ಕಾಗಿ ದುಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ರಮೇಶ್ ಕುಮಾರ್ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಸಭಾ ಕಾರ್ಯಕ್ರಮವು ಕೋಟದ ಡಾ. ಶಿವರಾಮ ಕಾರಂತ ಥೀಂ ಪಾರ್ಕ್‍ನಲ್ಲಿ ನಡೆಯಲಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಜಿ.ಪಂ. ಅಧ್ಯಕ್ಷ ದಿನಕರ್ ಬಾಬು, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಜನವರಿ 15 ರ ನಂತರ ಗ್ರಾಮ ಪಂಚಾಯಿತಿ 1032 ಕುಟುಂಬಗಳು ಪ್ರತಿಯೊಂದು ಪಾವತಿಯನ್ನು ನಗದಿನ ಬದಲು ಡೆಬಿಟ್ ಕಾರ್ಡ್‍ನ ಮೂಲಕ ವ್ಯವಹರಿಸಲು ಯೋಜನೆಯನ್ನು ರೂಪಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ನ ಹಿರಿಯ ಮುತ್ಸದ್ಧಿ ಜನಾರ್ಧನ್ ಮರವಂತೆ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ತಿಳಿಸಿದ್ದಾರೆ.

nkjmkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸೇತುವೆ ನಿರ್ಮಾಣಕ್ಕೆ ಚಾಲನೆ: ಇಚ್ಛಾಶಕ್ತಿಯಿದ್ದಾಗ ಅಭಿವೃದ್ಧಿ ಕಾರ್ಯ ಸುಗಮ – ಸಚಿವ ರೈ

ಮುಂದಿನ ಸುದ್ದಿ »

ಎಪ್ರಿಲ್ 13ರಂದು ಕೋಮುವಾದಿ ವಿರೋಧಿ ಸಂಗಮ: ಮಅದನಿ ಬಿಡುಗಡೆ ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯ-ಪಿಡಿಪಿ

ಸಿನೆಮಾ

  • ತಮಿಳಿನ ಬಿಗ್‌ಬಾಸ್‌ಗೆ ಕಮಲ್‌ ಹಾಸನ್‌ ಸಾರಥ್ಯ

    April 24, 2017

    ನ್ಯೂಸ್ ಕನ್ನಡ-(24.4.17): ಬಿಗ್‌ಬಾಸ್‌ ರಿಯಾಲಿಟಿ ಷೋನ ತಮಿಳು ಆವೃತ್ತಿಯನ್ನು ನಡೆಸಿಕೊಡಲು ನಟ ಕಮಲ್‌ ಹಾಸನ್‌ ಒಪ್ಪಿಕೊಂಡಿದ್ದಾರೆ. ‘ದಿ ಕ್ವಿಂಟ್‌’ ಸುದ್ದಿತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಕಮಲ್‌ ಈ ವಿಷಯ ಬಹಿರಂಗಪಡಿಸಿದ್ದಾರೆ. ‘ಈವರೆಗೆ ನಾನು ಕಲಾವಿದನಾಗಿ ಜನರನ್ನು ರಂಜಿಸಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿದ್ದೇನೆ. ಆದರೆ, ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×