Thursday November 24 2016

Follow on us:

Contact Us

ನ.26ರಿಂದ ಪ್ರಖ್ಯಾತ ಕಾರ್ಟೂನಿಸ್ಟ್ ಗಳ ನೇತೃತ್ವದಲ್ಲಿ ಬೃಹತ್ ಕಾರ್ಟೂನು ಹಬ್ಬ

ನ್ಯೂಸ್ ಕನ್ನಡ ವರದಿ(24.11.2016): ಕುಂದಾಪುರದ ಕಲಾಮಂದಿರದಲ್ಲಿ ನವೆಂಬರ್ 26 ರಿಂದ 29ರ ವರೆಗೆ ಪ್ರಖ್ಯಾತ ಕಾರ್ಟೂನಿಸ್ಟ್ ಗಳ ನೇತೃತ್ವದಲ್ಲಿ ಬೃಹತ್ ಕಾರ್ಟೂನು ಹಬ್ಬ ನಡೆಯಲಿದೆ.

ನವೆಂಬರ್ 26ರಂದು ಬೆಳಿಗ್ಗೆ 10 ಗಂಟೆಗೆ ಚಿಕ್ಕಮಗಳೂರಿನ ಎಸ್ಪಿ ಅಣ್ಣಾಮಲೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಡಾ. ಪಿ. ವಿ ಬಂಡಾರಿ, ಯು.ಎಸ್. ಶೆಣೈ, ಉದಯಕುಮಾರ್ ಶೆಟ್ಟಿ, ರಾಮಕೃಷ್ಣ ಹೇರ್ಳೆ, ಸತೀಶ್ ಆಚಾರ್ಯ, ಪಂಜು ಗಂಗೊಳ್ಳಿ ಮೊದಲಾದವರು ಉಪಸ್ಥಿತರಿರುವರು.

ಅಪರಾಹ್ನ ಸಭಾ ಕಾರ್ಯಕ್ರಮದ ಬಳಿಕ ಸತೀಶ್ ಆಚಾರ್ಯ ಅವರಿಂದ ಕಾರ್ಟೂನು ಕಾರ್ಯಾಗಾರ, ಬಳಿಕ ವಿದ್ಯಾರ್ಥಿಗಳಿಗೆ ಕಾರ್ಟೂನು ಸ್ಪರ್ಧೆ ನಡೆಯಲಿರುವುದು.

ನವೆಂಬರ್ 27 ರಂದು ಪಂಜು ಗಂಗೊಳ್ಳಿ, ದಿನೇಶ್ ಕಕ್ಕುಜಡ್ಕ, ಜೇಮ್ಸ್ ವಾಜ್, ಜಯರಾಮ್ ಉಡುಪ ಮೊದಲಾದ ಖ್ಯಾತ ವ್ಯಂಗ್ಯ ಚಿತ್ರಕಾರರೊಂದಿಗೆ ಕಾರ್ಟೂನು ಬಗ್ಗೆ ಅನೌಪಚಾರಿಕ ಮಾತುಕತೆ ನಡೆಯಲಿರುವುದು. ಕಾರ್ಯಕ್ರಮವನ್ನು ಖ್ಯಾತ ರಂಗ ಕರ್ಮಿ ವಸಂತ ಬನ್ನಾಡಿ ಉದ್ಘಾಟಿಸಲಿದ್ದಾರೆ.

ನವೆಂಬರ್ 28ರಂದು ಸೈಬರ್ ಪ್ರಪಂಚದ ಕುರಿತು ಬೆಳಕು ಚೆಲ್ಲುವ ಸೈಬರಾಸುರ ಕಾರ್ಯಕ್ರಮ ಜರಗಲಿರುವುದು. ರಾಜಶೇಖರ್ ವಿ. ಪಾಟೀಲ್ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆ ಬಳಿಕ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸೈಬರ್ ಕಾರ್ಟೂನು ಸ್ಪರ್ಧೆ ನಡೆಯಲಿದೆ.

ಸಾಯಂಕಾಲ 4 ರಿಂದ ಲೈವ್ ಕ್ಯಾರಿಕೇಚರ್ ಮೂಲಕ ಶಾಲೆಗಾಗಿ ನಿಧಿ ಸಂಗ್ರಹಿಸುವ ಚಿತ್ರನಿಧಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಆರ್ಬೆಟ್ಟು ಜ್ಞಾನದೇವ ಕಾಮತ್ ಉದ್ಘಾಟಿಸಲಿದ್ದಾರೆ. ನವೆಂಬರ್ 29 ರಂದು ಭವಿಷ್ಯದ ಪತ್ರಕರ್ತರೊಂದಿಗೆ ಕಾರ್ಟೂನುಗಳ ಕುರಿತು ಸತೀಶ್ ಆಚಾರ್ಯರವರು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಬಹುಮಾನ ವಿತರಣಾ ಕಾರ್ಯಕ್ರಮದ ಬಳಿಕ ಕಾರ್ಟೂನು ಹಬ್ಬಕ್ಕೆ ತೆರೆ ಬೀಳಲಿರುವುದು.

nkhapibk

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ರಾಜ್ಯ ಸರಕಾರದ ಮೌಢ್ಯ ನಿಷೇಧ ಕಾನೂನು ಹಿಂದೂ ವಿರೋಧಿ: ಹಿಂದೂ ಜನಜಾಗೃತಿ ಸಮಿತಿ

ಮುಂದಿನ ಸುದ್ದಿ »

ಎಂಪಿಎಲ್ ಟ್ರೋಫಿ ಅನಾವರಣದಂದು ಐಫೋನ್ ಗೆಲ್ಲಿ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×