Thursday December 7 2017

Follow on us:

Contact Us

ಬ್ರೇಕ್ ಫಾಸ್ಟ್ ಮಿಸ್ ಮಾಡ್ತೀರಾ? ನಿಮಗೆ ಅಪಾಯ ತಪ್ಪಿದ್ದಲ್ಲ.. ಇದನ್ನು ಓದಿ

ನ್ಯೂಸ್ ಕನ್ನಡ ವರದಿ: ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈಗಿನ ಕಾಲದಲ್ಲಿ ಮನುಷ್ಯ ಜೀವನವು ಕೃತಕ ಯಂತ್ರದ ತರಹವೇ ಆಗಿದೆ. ಜೀವನ ನಿರ್ವಹಣೆಗೆ ಬೇಕಾದ ನೌಕರಿಯ ಹಿಂದೆ ಬಿದ್ದಾಗ ಸಮಯದ ಅಭಾವದಿಂದ ಕೆಲವರು ಬೆಳಗ್ಗಿನ ಬ್ರೇಕ್ ಫಾಸ್ಟ್ ಮಿಸ್ ಮಾಡುತ್ತಾರೆ. ಇನ್ನು ಕೆಲವರದ್ದು ಬೇರೆಯೇ ಕಥೆ, ತೆಳ್ಳಗಾಗಬೇಕು ಎಂಬ ಕಾರಣಕ್ಕೆ ಬೆಳಗ್ಗಿನ ಬ್ರೇಕ್ ಫಾಸ್ಟ್ ತಪ್ಪಿಸುತ್ತಾರೆ.

ವೈಜ್ಞಾನಿಕ ಅಧ್ಯಯನದಿಂದ ತಿಳಿದು ಬಂದಂತೆ ನಾವು ನಿರಂತರವಾಗಿ ಬೆಳಗ್ಗಿನ ಬ್ರೇಕ್ ಫಾಸ್ಟ್ ತಪ್ಪಿಸಿದರೆ ನಮಗೆ ತೀವ್ರತರಹದ ಮಧುಮೇಹ (ಶುಗರ್) ಬರುವ ಸಾಧ್ಯತೆ ತುಂಬಾ ಹೆಚ್ಚು.

ಇನ್ನು ತೆಳ್ಳಗಾಗಬೇಕು ಎಂಬ ಕಾರಣಕ್ಕೆ ಬೆಳಗ್ಗಿನ ಬ್ರೇಕ್ ಫಾಸ್ಟ್ ಮಿಸ್ ಮಾಡುವವರೇ, ಬ್ರೇಕ್ ಫಾಸ್ಟ್ ತಪ್ಪಿಸಿದರೆ ತೂಕ ಕಮ್ಮಿಯಾಗಲ್ಲ ಹೆಚ್ಚಾಗುವುದು.

ಅಮೇರಿಕಾದಲ್ಲಿ ನಡೆದ ಬಹುದೊಡ್ಡ ಸರ್ವೆಯ ಪ್ರಕಾರ ನಿರಂತರವಾಗಿ ಬೆಳಿಗ್ಗಿನ ಬ್ರೇಕ್ ಫಾಸ್ಟ್ ತಪ್ಪಿಸಿದವರಿಗೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಜಾಸ್ತಿ.

ನಿಮ್ಮ ದೇಹಕ್ಕೆ ಶಕ್ತಿಯ ಕೊರತೆ ಉಂಟಾಗಿ ನಿಶಕ್ತಿಯ ಕಾರಣ ನಿಮ್ಮ ದೈನಂದಿನ ಚಟುವಟಿಕೆಯ ಮೇಲೂ ಪರಿಣಾಮ ಬೀರುತ್ತದೆ.

ಬ್ರೇಕ್ ಫಾಸ್ಟ್ ನಿರಂತರವಾಗಿ ಮಾಡದೇ ಹೊಟ್ಟೆ ಖಾಲಿ ಇಟ್ಟರೆ ಅದರಿಂದ ಅಲ್ಸರ್ ಬರುವ ಸಾಧ್ಯತೆಯೂ ಇದೆ.

ಆಹಾರದಲ್ಲಿರುವ ಕ್ಯಾಲರಿಯನ್ನು ನೋಡಿ ನಮ್ಮ ವಯಸ್ಸು ಮತ್ತು ಅದಕ್ಕನುಗುಣವಾದ ತೂಕವನ್ನು ಕಾಯ್ದುಕೊಳ್ಳಲು ಸಮತೋಲನವಾದ ಡಯಟ್ ಮಾಡಬೇಕು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗಣೇಶಪೇಟೆಯು ಪಾಕಿಸ್ತಾನದಂತಿದೆ ಎಂದು ಹೇಳಿಕೆ ನೀಡಿದ್ದ ಮೌಲ್ವಿಯ ಬಂಧನ!

ಮುಂದಿನ ಸುದ್ದಿ »

ಕ್ಯಾನ್ಸರ್ ನಿಂದ ಬಳಲುತ್ತಿರುವ ಅಭಿಮಾನಿಯ ಕೊನೆಯ ಆಸೆ ಈಡೇರಿಸಿ ಮನಗೆದ್ದ ಕಿಚ್ಚ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×