Tuesday June 13 2017

Follow on us:

Contact Us

ಉಡುಪಿ ಜಿಲ್ಲೆಗೆ ಬ್ರಹ್ಮಾವರದಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ

ನ್ಯೂಸ್ ಕನ್ನಡ ವರದಿ-(13.06.17)ಮಣಿಪಾಲ: ಉಡುಪಿಯಲ್ಲಿ ಇತರೆಲ್ಲ ಕ್ರೀಡೆಗಳಿಗೆ ನವನವೀನ ಸವಲತ್ತುಗಳು ಸೇರ್ಪಡೆಯಾಗುತ್ತಿದ್ದು, ಉಡುಪಿಗೆ ಅತಿ ಅಗತ್ಯವಾದ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣದ ಬಗ್ಗೆ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ವತಿಯಿಂದ ಮಾನ್ಯ ಕ್ರೀಡಾ ಸಚಿವ ಶ್ರೀ ಪ್ರಮೋದ್ ಮಧ್ವರಾಜ್‍ರವರಿಗೆ ಮನವಿ ಸಲ್ಲಿಸಲಾಗಿ, ತತ್‍ಕ್ಷಣವೇ ಮನವಿಗೆ ಸ್ಪಂದಿಸಿರುವ ಅವರು ಬ್ರಹ್ಮಾವರದ ಗಾಂಧೀ ಮೈದಾನವನ್ನು ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಕಾದಿರಿಸುವಂತೆ ಆದೇಶಿಸಿದ್ದು, ಅದರ ಕಾರ್ಯಗತ ಪ್ರಗತಿಯಲ್ಲಿದೆ ಎಂದು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣಪ್ರಸಾದ್‍ರವರು ತಿಳಿಸಿದರು. ಅವರು ಮಣಿಪಾಲ ವಿಶ್ವವಿದ್ಯಾಲಯ ಮತ್ತು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಜಂಟಿಯಾಗಿ ಆಯೋಜಿಸಿದ್ದ “ಅರಳುತ್ತಿರುವ ಕ್ರಿಕೆಟ್ ಪ್ರತಿಭೆಗಳೊಂದಿಗೆ ಸಂವಾದÀ “ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಎಳೆಯ ಕ್ರಿಕೆಟಿಗರು ನಮಗೆ ಇಲ್ಲಿ ಆಡಲು ಮ್ಯಾಟಿಂಗ್ ವಿಕೇಟ್ ಮಾತ್ರ ಲಭ್ಯವಿದೆ, ನಾವು ಮಂಗಳೂರು ವಲಯವನ್ನು ಪ್ರತಿನಿಧಿಸಿ ಬೆಂಗಳೂರು ಮುಂತಾದೆಡೆಗೆ ಹೋಗಿ ಆಟವಾಡುವಾಗ ಅಲ್ಲಿನ ಟರ್ಫ್ ವಿಕೇಟುಗಳಲ್ಲಿ ಆಡಲು ತೊಂದರೆಯಾಗುತ್ತದೆ ಅಂದರು. ತರಬೇತುದಾರರಾದ ರೆನ್ ಟ್ರೆವರ್, ರಾಮಚಂದ್ರರಾವ್, ನಚಿಕೇತ್‍ರವರು ಕ್ರಿಕೆಟ್ ಆಟದ ಬೆಳವಣಿಗೆಯ ನಿಟ್ಟಿನಲ್ಲಿ ಸಲಹೆ ನೀಡಿದರು.

ಇತ್ತೀಚಿನ ವರ್ಷಗಳಲ್ಲಿ ಸರಕಾರವು ಉಡುಪಿಯಲ್ಲಿ ವಿವಿಧ ಕ್ರೀಡೆಗಳಿಗೆ ಒಳಾಂಗಣ, ಉನ್ನತ ಸವಲತ್ತುಗಳನ್ನು ಒದಗಿಸಿದ್ದು ಒಂದರ ಮೇಲೊಂದರಂತೆ ರಾಷ್ಟ್ರ – ರಾಜ್ಯ ಮಟ್ಟದ ಪಂದ್ಯಾಟಗಳಿಗೆ ಉಡುಪಿ ಸಾಕ್ಷಿಯಾಗುತ್ತಿದೆ. ಆದರೆ, ಉಡುಪಿಯಲ್ಲಿ ಕ್ರಿಕೆಟ್ ಆಟದ ಅಂಗಣದ ಕೊರತೆಯಿದ್ದು, ಅದನ್ನು ಒದಗಿಸುವತ್ತಲೂ ಕ್ರೀಡಾ ಇಲಾಖೆ ಹೆಜ್ಜೆ ಇಡುತ್ತಿದೆ ಎಂದು ಕ್ರೀಡೆ ಮತ್ತು ಯುವಜನ ಸೇವೆಯ ಉಪ ನಿರ್ದೇಶಕ ರೋಷನ್ ಕುಮಾರ್‍ರವರು ನುಡಿದರು. ಇಲ್ಲಿನ ನಾಲ್ಕು ತಿಂಗಳ ಮಳೆಯಲ್ಲಿ ಮನೆಯೊಳಕ್ಕೆ ಇರಬೇಕಾದ ಕ್ರಿಕೆಟ್ ಆಟಗಾರರು ಆಟದಲ್ಲಿ ತೊಡಗುವಂತೆ ಮಾಡಲು ಕನಿಷ್ಟ ಒಳಾಂಗಣದಲ್ಲಿ ನೆಟ್ ಪ್ರಾಕ್ಟಿಸ್‍ನ ಸೌಲಭ್ಯವನ್ನು ಒದಗಿಸಬೇಕಾಗಿದೆ ಮತ್ತು ಎಲ್ಲ ಕ್ರಿಕೆಟ್ ಅಕಾಡಮಿಯವರು ಜತೆಯಾಗಿ ಕೇಂದ್ರೀಕೃತ ತರಬೇತಿಯನ್ನು ಹಮ್ಮಿಕೊಳ್ಳಬೇಕಾದುದು ಅವಶ್ಯಕ ಎಂದರು.

ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಗೌರವಾಧ್ಯಕ್ಷ ಮತ್ತು ಮಣಿಪಾಲ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್‍ರವರು ಮಾತನಾಡಿ ಬೆಳೆಯುತ್ತಿರುವ ಉತ್ತಮ ಕ್ರಿಕೆಟ್ ಪ್ರತಿಭೆಗಳು ವಿದ್ಯಾಭ್ಯಾಸದ ಕಾರಣಕ್ಕಾಗಿ ತಮ್ಮ ಪ್ರತಿಭೆಯನ್ನು ಬದಿಗೆ ಸರಿಸುವುದು ಸಲ್ಲದು, ಪ್ರಸನ್ನ, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಮುಂತಾದ ಕ್ರಿಕೆಟಿಗರು ಎಂಜಿನಿಯರಿಂಗ್ ಪದವಿಯನ್ನು ಮುಡಿಗೇರಿಸುತ್ತಾ, ಕ್ರಿಕೆಟ್ ತಾರೆಗಳಾಗಿ ಮೆರೆದಿರುವ ಉದಾಹರಣೆ ನಮ್ಮ ಮುಂದಿದೆ ಎಂದರು.

ಈ ಸಂದರ್ಭದಲ್ಲಿ ಎಂ.ಐ.ಟಿ. ಡೈಮಂಡ್ ಜ್ಯುಬಿಲಿ ಕ್ರಿಕೆಟ್ ಟ್ರೋಫಿಯನ್ನು ಗೆದ್ದು ಕೊಂಡಿರುವ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ 14 ವರ್ಷ ಕೆಳಹರೆಯದ ತಂಡದ ಬಹುಮಾನ ಹಸ್ತಾಂತರವು ನಡೆಯಿತು. ಸಮಾರಂಭದಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಮತ್ತು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಗೌರವಾಧ್ಯಕ್ಷ ಡಾ. ಎಚ್. ಎಸ್. ಬಲ್ಲಾಳ್, ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್, ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ, ಮಣಿಪಾಲ ವಿಶ್ವವಿದ್ಯಾಲಯದ ಉಪ ಕುಲಸಚಿವ (ಕ್ವಾಲಿಟಿ) ಡಾ/ ಸಂದೀಪ್ ಶೆಣೈ, ಎಂ.ಐ.ಟಿಯ ಕಾರ್ಯನಿರ್ವಾಹಕ ನಿರ್ದೇಶಕ ಸೋಮಶೇಖರ್ ಭಟ್, ಎಂ.ಐ.ಟಿಯ ಸಹಾಯಕ ನಿರ್ದೇಶಕ ಡಾ/ ನಾರಾಯಣ ಶೆಣೈ, ಮಣಿಪಾಲ ವಿಶ್ವವಿದ್ಯಾಲಯದ ದಾಖಲಾತಿ ನಿರ್ದೇಶಕ ಡಾ/ ಶ್ರೀಕಾಂತ್ ರಾವ್, ಕ್ರೀಡೆ ಮತ್ತು ಯುವಜನ ಸೇವೆಯ ಉಪ ನಿರ್ದೇಶಕ ರೋಷನ್ ಕುಮಾರ್, ತರಬೇತುದಾರರಾದ ರೆನ್ ಟ್ರೆವರ್, ರಾಮಚಂದ್ರರಾವ್, ನಚಿಕೇತ್ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಮಣಿಪಾಲ ವಿಶ್ವವಿದ್ಯಾಲಯದ ಕ್ರೀಡಾ ಪರಿಷತ್ತಿನ ಕಾರ್ಯದರ್ಶಿ ಡಾ. ವಿನೋದ್ ನಾಯಕ್‍ರವರು ವಂದಿಸಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಳೆಯ ಅಬ್ಬರಕ್ಕೆ ವಿದ್ಯುತ್ ತಂತಿ ಮೇಲೆ ಉರುಳಿದ ಮರ: ತಪ್ಪಿದ ಭಾರೀ ಅನಾಹುತ  

ಮುಂದಿನ ಸುದ್ದಿ »

ಯಂಗ್ ಸ್ಟಾರ್ ಕಲ್ಲಡ್ಕದಿಂದ ಸೌಹಾರ್ದತೆಗಾಗಿ ಇಫ್ತಾರ್ ಕೂಟ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×