Wednesday August 9 2017

Follow on us:

Contact Us

ಬಾಲಿವುಡ್ ಸಿನಿಮಾರಂಗಕ್ಕೆ ಪ್ರವೇಶಿಸಿದ ಯೋಗಗುರು ಬಾಬಾ ರಾಮ್ ದೇವ್!

ನ್ಯೂಸ್ ಕನ್ನಡ ವರದಿ-(09.08.17): ಯೋಗ ಗುರು ಬಾಬಾ ರಾಮ್ ದೇವ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ. ಒಮ್ಮಿಂದೊಮ್ಮೆಲೆ ಮುಖ್ಯವಾಹಿನಿಗೆ ಬಂದ ರಾಂ ದೇವ್ ಬಳಿಕ ಹಿಂದಿರುಗಿ ನೋಡುವ ಅವಶ್ಯಕತೆಯೇ ಬರಲಿಲ್ಲ. ಯೋಗಗುರುವಾಘಿದ್ದುಕೊಂಡೇ ಕೋಟಿಗಟ್ಟಲೆ ಸಂಪಾದನೆ ಮಾಡಿದ ಇವರ ವಾರ್ಷಿಕ ವರಮಾನ ಸುಮಾರು 5000ಕೋಟಿಗಿಂತಲೂ ಹೆಚ್ಚಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಇದೀಗ ಬಾಬಾ ರಾಮ್ ದೇವ್ ಬಾಲಿವುಡ್ ಮೂಲಕ ಚಿತ್ರರಂಗಕ್ಕೆ ಕಾಲಿಡಲಿದ್ದಾರೆಂದು ತಿಳಿದು ಬಂದಿದೆ.

ಬಾಬಾ ರಾಮ್ ದೇವ್ ನಟಿಸಲಿರುವ ಚಿತ್ರದ ಹೆಸರು ಯೇ ಹೇ ಇಂಡಿಯಾ. ದೇಶಭಕ್ತಿಯನ್ನು ಪ್ರತಿಪಾದಿಸುವ ಸಿನಿಮಾ ಇದಾಗಿದ್ದು, ಈಗಾಗಲೇ ರಾಮ್ ದೇವ್ ಈ ಚಿತ್ರದ ಪ್ರಚಾರ ಕ್ರಿಯೆಯಲ್ಲಿ ತೊಡಗಿದ್ದಾರೆ. ಹೋದಲ್ಲೆಲ್ಲಾ ಈ ಚಿತ್ರವು ಆದಷ್ಟು ಬೇಗನೇ ತೆರೆಗೆ ಅಪ್ಪಳಿಸಲಿದ್ದು ಎಲ್ಲರೂ ನೋಡಬೇಕೆಂದು ವಿನಂತಿಸುತ್ತಿದ್ದಾರೆ. ಲಂಡನ್ ನಲ್ಲಿರುವ ಭಾರತೀಯ ಮೂಲದ ಯುವಕ ಭಾರತ ದೇಶವನ್ನು ಬಡ ರಾಷ್ಟ್ರ, ಜನಸಂಖ್ಯೆ ಹೆಚ್ಚಿರುವ ರಾಷ್ಟ್ರ ಎಂದು ಮೂದಲಿಸಿ ಬಳಿಕ ಭಾರತದ ಕುರಿತಾದಂತೆ ಅರಿಯುವ ಚಿತ್ರಕಥೆಯನ್ನು ಈ ಸಿನಿಮಾ ಹೊಂದಿದೆ ಎಂದು ತಿಳಿದು ಬಂದಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನಾಲ್ಕು ಮಕ್ಕಳ ಮೃತದೇಹ ಕೆರೆಯಲ್ಲಿ ಪತ್ತೆ: ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು!

ಮುಂದಿನ ಸುದ್ದಿ »

ಮನೆಯ ಛಾವಣಿ ಕುಸಿತ: 20 ಮಂದಿ ಮಹಿಳೆಯರು ಆಸ್ಪತ್ರೆಗೆ ದಾಖಲು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×