Tuesday January 10 2017

Follow on us:

Contact Us

ಬ್ಲಡ್ ಡೋನರ್ಸ್ ಮಂಗಳೂರು ತಂಡದಿಂದ ಜನವರಿ ತಿಂಗಳಲ್ಲಿ 4 ರಕ್ತದಾನ ಶಿಬಿರ

ನ್ಯೂಸ್ ಕನ್ನಡ ವರದಿ (10-1-17): ಕಳೆದ ಎರಡು ವರುಷಗಳಿಂದ ರಕ್ತದ ಕೊರತೆಯಿಂದ ಪರದಾಡುವ ರೋಗಿಗಳ ಆಶಾಕಿರಣವಾದ ಬ್ಲಡ್ ಡೋನರ್ಸ್ ಮಂಗಳೂರು ತಂಡವು ಈಗಾಗಲೇ ಹಲವಾರು ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿ, ಸಾವಿರಾರು ಯೂನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಗಳನ್ನು ನಡೆಸುತ್ತಿದೆ.

ಬ್ಲಡ್ ಡೋನರ್ಸ್ ಮಂಗಳೂರು ತಂಡದ ರಕ್ತದಾನ ಶಿಬಿರಗಳು ಮುಂದುವರಿದ ಭಾಗವಾಗಿ, ಇದೇ ಜನವರಿ 12 ರಿಂದ ಜನವರಿ 29ರವರೆಗೆ ನಾಲ್ಕು ರಕ್ತದಾನ ಶಿಬಿರಗಳನ್ನು ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ. 

► ಜನವರಿ 12 ರಂದು ಬ್ಲಡ್ ಡೋನರ್ಸ್ ಮಂಗಳೂರು, ಲಯನ್ಸ್ ಮತ್ತು ಲಿಯೋ ಕ್ಲಬ್ ವಿಟ್ಲ, ಮತ್ತು ಸುಪ್ರಜೀತ್ ಕೈಗಾರಿಕಾ ಸಂಸ್ಥೆ, ಇದರ ಸಹಭಾಗಿತ್ವದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ವಿಟ್ಲ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. 
►ಜನವರಿ 15 ರಂದು ಬ್ಲಡ್ ಡೋನರ್ಸ್ ಮಂಗಳೂರು ಮತ್ತು ವೆನ್ಲಾಕ್ ಬ್ಲಡ್ ಬ್ಯಾಂಕ್ ಇದರ ಸಹಯೋಗದಲ್ಲಿ ಸುರತ್ಕಲ್ ನಲ್ಲಿ ರಕ್ತದಾನ ಶಿಬಿರ ಮತ್ತು ರಕ್ತದಾನದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದೆ
► ಜನವರಿ 16 ರಂದು ಬ್ಲಡ್ ಡೋನರ್ಸ್ ಮಂಗಳೂರು ಮತ್ತು ವಿದ್ಯಾ ಟ್ಯುಟೋರಿಯಲ್ಸ್ ಸ್ಟೇಟ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಯೋಗದೊಂದಿಗೆ ಹೋಟೆಲ್ ರೀಗಲ್ ಪಾರ್ಕ್ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ರಕ್ತದಾನದ ಬಗ್ಗೆ ಅರಿವರು ಮೂಡಿಸುವ ಕಾರ್ಯಕ್ರಮ ನಡೆಯಲಿದೆ. 
► ಜನವರಿ 29ರಂದು ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಪ್ರವಾಸಿ ಬಳಗ ಬಜಾಲ್ ನಂತೂರ್ ಇದರ ಸಹಭಾಗಿತ್ವದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ, ಬದ್ರಿಯಾ ಜುಮ್ಮಾ ಮಸ್ಜಿದ್ ಬಜಾಲ್ ನಂತೂರ್ ಇದರ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ರಕ್ತದಾನದ ಬಗ್ಗೆ ಅರಿವರು ಮೂಡಿಸುವ ಕಾರ್ಯಕ್ರಮ ನಡೆಯಲಿದೆ.

ಬ್ಲಡ್ ಡೋನರ್ಸ್ ಮಂಗಳೂರು ಈ ತಂಡದ ಸಾಮಾಜಿಕ ಸೇವೆಯ ಭಾಗವಾಗಿ ನಡೆಸಲ್ಪಡುವ ಈ ರಕ್ತದಾನ ಶಿಬಿರಗಳಿಗೆ, ಬ್ಲಡ್ ಡೋನರ್ಸ್ ಮಂಗಳೂರು ತಂಡದ ಎಲ್ಲ ಸದಸ್ಯರು ಹಾಗೂ ಹಿತೈಷಿಗಳು ಸೇರಿ ಕಾರ್ಯಕ್ರಮವನ್ನು ಯಶಶ್ವಿಗೊಳಿಸಿ, ಈ ರಕ್ತದಾನದಿಂದ ಹಲವಾರು ಜೀವನಗಳನ್ನು ಉಳಿಸುವ ಸಲುವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬ್ಲಡ್ ಡೋನರ್ಸ್ ಮಂಗಳೂರು ಪ್ರಕಟನೆಯಲ್ಲಿ ತಿಳಿಸಿದೆ.

ತುರ್ತು ಸಂಧರ್ಭಗಳಲ್ಲಿ ರಕ್ತದ ಅವಶ್ಯಕತೆ ಇದ್ದಲ್ಲಿ ಬ್ಲಡ್ ಡೋನರ್ಸ್ ತಂಡದ ಈ ಕೆಳಗಿನ ಅಡ್ಮಿನ್ಗಳನ್ನು ಸಂಪರ್ಕಿಸಿ:
ಸಿದ್ದಿಕ್ ಮಂಜೇಶ್ವರ      : +919845707090
ದಾವೂದ್ ಬಜಾಲ್       : +918277651173
ಅಶ್ರಫ್ ಉಪ್ಪಿನಂಗಡಿ    : +919945133177
ಮುಸ್ತಾಫ ಕೆ.ಸಿ ರೋಡ್ : +919449000936

www.blooddonorsmangaluru.org
ವರದಿ: ಶಾಹುಲ್ ಹಮೀದ್ ಕಾಶಿಪಟ್ನ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಚಿತ್ರೀಕರಣ ವೇಳೆ ಕಲಾವಿದೆ ಸಾವು: ಅನುಮಾನಗಳಿಗೆ ಉತ್ತರವಾದೀತೇ ಮರಣೋತ್ತರ ಪರೀಕ್ಷೆ?

ಮುಂದಿನ ಸುದ್ದಿ »

ಖಾಸಗಿ ಸ್ಥಳದಲ್ಲಿ ಕಸವಿಲೇವಾರಿ-ಗುತ್ತಿಗೆದಾರರ ಪರದಾಟ: ಸಾರ್ವಜನಿಕರಿಗೆ ಜೀವ ಸಂಕಟ

ಸಿನೆಮಾ

 • ಮದುವೆಯಾಗಲಿದ್ದಾರೆ ಲೂಸ್ ಮಾದ ಯೋಗೀಶ್

  May 23, 2017

  ಬೆಂಗಳೂರು: ಸ್ಯಾಂಡಲ್‍ವುಡ್‍ನ ಲೂಸ್ ಮಾದ ಖ್ಯಾತಿಯ ಯೋಗೀಶ್ ಗೃಹಸ್ಥಾಶ್ರಮಕ್ಕೆ ಸೇರಲು ಸಜ್ಜಾಗಿದ್ದಾರೆ. ಬಾಲ್ಯದಗೆಳತಿ, ಬಹುರಾಷ್ಟ್ರಿಯ ಕಂಪನಿಯ ಉದ್ಯೋಗಿ ಸಾಹಿತ್ಯ ಅರಸ್ ಅವರೊಂದಿಗೆ ಯೋಗೀಶ್ ಸಪ್ತಪದಿ ತುಳಿಯಲಿದ್ದಾರೆ. ಸಾಹಿತ್ಯ ಅರಸ್ ಯೋಗಿ 2 ವರ್ಷದಿಂದ ಲವ್ ಮಾಡುತ್ತಿದ್ದು, ಸದ್ಯದಲ್ಲೇ ...

  Read More
 • ಮಕ್ಕಳಿಗಾಗಿ ಮತ್ತೆ ಒಂದಾದ ಹೃತಿಕ್ ರೋಶನ್-ಸೂಸೇನ್

  May 23, 2017

  ನ್ಯೂಸ್ ಕನ್ನಡ-(23.5.17):ಬಾಲಿವುಡ್‌ನ ಸ್ನೇಹಪರ ದಂಪತಿ ಎಂದೇ ಗುರುತಿಸಿಕೊಂಡಿದ್ದ ಹೃತಿಕ್‌ ರೋಷನ್ ಮತ್ತು ಸೂಸೇನ್ ಖಾನ್ ಅವರು ವೈವಾಹಿಕ ವಿಚ್ಛೇದನ ಪಡೆದಾಗ ಎಲ್ಲರೂ ನಿಬ್ಬೆರಗಾಗಿದ್ದರು. ಸೂಸೇನ್ ಅಂತೂ ಪತಿಯ ಬಗ್ಗೆ ಖಾರವಾಗಿ ಮಾತನಾಡಿದ್ದರು. ಆದರೆ ವಿಚ್ಛೇದನ ಪಡೆದ ಮೇಲೂ ...

  Read More
 • ಸೀರಿಯಲ್ ಗಳಲ್ಲಿ ಅವಕಾಶ ಸಿಗದೇ ಪೈಂಟರ್ ಆದ ಖ್ಯಾತ ನಟ!

  May 22, 2017

  ನ್ಯೂಸ್ ಕನ್ನಡ ವರದಿ-(22.5.17)ಇಸ್ಲಾಮಾಬಾದ್: ಪಾಕ್ ನಟ ಶಾಹಿದ್ ನಸೀಬ್  ಕೆಲಸವಿಲ್ಲದೆ ಗೋಡೆಗೆ ಬಣ್ಣಬಳಿಯುವ ಕೆಲಸ ಮಾಡುತ್ತಿದ್ದಾರೆ. ಹಲವಾರು ಟಿವಿ ಸೀರಿಯಲ್‍ಗಳಲ್ಲಿ ನಟಿಸಿರುವ ಪ್ರತಿಭಾಂತ ನಟ ಈತ. ಈಗ ಒಂದು ಹೊತ್ತಿನ ಕೂಲಿಗಾಗಿ ಗೋಡೆಗೆ ಪೈಂಟ್ ಬಳಿಯುತ್ತಿದ್ದಾರೆ. ದುಲ್ಲಾರಿ, ...

  Read More
 • 80ರ ಹರೆಯದ ವೃದ್ಧೆಯ ಪಾತ್ರದಲ್ಲಿ ನಟಿಸಲಿರುವ ಕಂಗನಾ ರಣಾವತ್!

  May 20, 2017

  ನ್ಯೂಸ್ ಕನ್ನಡ ವರದಿ-(20.5.17): ನಟಿ ಕಂಗನಾ ಅವರು ತಮ್ಮ ಸ್ವಂತ ನಿರ್ದೇಶನದ “ತೇಜು” ಸಿನೆಮಾದಲ್ಲಿ ವೃದ್ಧೆ ಮಹಿಳೆಯ ಪಾತ್ರ ನಿರ್ವಹಿಸುವುದಾಗಿ ಘೋಷಿಸಿದ್ದಾರೆ. “ನನ್ನ ಮೊದಲ ನಿರ್ದೇಶನದ ‘ತೆಜು’ ಚಿತ್ರದಲ್ಲಿ ನಾನು 80 ವರ್ಷ ವಯಸ್ಸಿನ ಮಹಿಳೆ ಪಾತ್ರವಹಿಸುತ್ತೇನೆ. ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×